'ನನ್ನ ಜೊತೆ ಸೆ* ಮಾಡ್ತೀರಾ?'; ಮಹಿಳೆಗೆ ಬೈಕ್ ಟ್ಯಾಕ್ಸಿ ರೈಡರ್‌ನಿಂದ ಅಸಭ್ಯ ಪ್ರಶ್ನೆ!

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ರೈಡರ್ ಒಬ್ಬ ಮಹಿಳಾ ಪ್ರಯಾಣಿಕರ ಬಳಿ ಲೈಂಗಿಕ ಕ್ರಿಯೆಗೆ ಬೇಡಿಕೆ ಇಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಮಹಿಳೆ ಹಂಚಿಕೊಂಡಿರುವ ಫೋನ್ ಕರೆ ಕಾಲ್ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣ..
Bike Taxi horror in Bengaluru
ಬೈಕ್ ಟ್ಯಾಕ್ಸಿ (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸುವ ಘಟನೆ ಬೆಳಕಿಗೆ ಬಂದಿದ್ದು, ಬೈಕ್ ಟ್ಯಾಕ್ಸಿ ಚಾಲಕನೋರ್ವ ಮಹಿಳಾ ಪ್ರಯಾಣಕಿ ಜೊತೆ ಅಸಭ್ಯವಾಗಿ ವರ್ತಿಸುವ ಘಟನೆ ವರದಿಯಾಗಿದೆ.

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ರೈಡರ್ ಒಬ್ಬ ಮಹಿಳಾ ಪ್ರಯಾಣಿಕರ ಬಳಿ ಲೈಂಗಿಕ ಕ್ರಿಯೆಗೆ ಬೇಡಿಕೆ ಇಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಮಹಿಳೆ ಹಂಚಿಕೊಂಡಿರುವ ಫೋನ್ ಕರೆ ಕಾಲ್ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಮಹಿಳೆಯ ಆರೋಪದ ಪ್ರಕಾರ, ರ‍್ಯಾಪಿಡೋ ರೈಡರ್ ಫೋನ್‌ನಲ್ಲಿ ಮಾತನಾಡುವಾಗ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ, ಲೈಂಗಿಕ ಕ್ರಿಯೆಗೆ ಆಹ್ವಾನಿಸುವ ರೀತಿಯಲ್ಲಿ ಮಾತನಾಡಿದ್ದಾನೆ ಎನ್ನಲಾಗಿದೆ. ಈ ಸಂಭಾಷಣೆಯನ್ನು ಮಹಿಳೆ ಆಡಿಯೋ ರೂಪದಲ್ಲಿ ದಾಖಲಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Bike Taxi horror in Bengaluru
ಹಾಕಿ ದಂತಕಥೆ ಸೋಮಯ್ಯ ಅವರ 1980ರ ಒಲಿಂಪಿಕ್ ಚಿನ್ನದ ಪದಕ ಕಳವು ಪ್ರಕರಣ: ಇಬ್ಬರ ಬಂಧನ

ಮಹಿಳೆ ಹಂಚಿಕೊಂಡ ಆಡಿಯೋದಲ್ಲಿ ಏನಿದೆ?

ಆಡಿಯೋದಲ್ಲಿರುವಂತೆ ಮಹಿಳೆ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದು, ನಿಗಧಿತ ಸಮಯಕ್ಕಿಂತ ಹೆಚ್ಚು ಹೊತ್ತು ಕಾದರೂ ರ್ಯಾಪಿಡೋ ಚಾಲಕ ಕರೆ ಮಾಡಿಲ್ಲ. ಬದಲಿಗೆ ನಿಗಧಿತ ಸ್ಥಳಕ್ಕೆ ಬಂದು ವಾಪಸ್ ಹೋಗಿದ್ದಾನೆ.

ಈ ವೇಳೆ ಮಹಿಳೆ ಚಾಲಕನಿಗೆ ಕರೆ ಮಾಡಿದ್ದು, ನೀವೇಕೆ ಬಂದಾಗ ಕರೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಅಸಭ್ಯವಾಗಿ ತನ್ನೊಂದಿಗೆ 'ಸೆಕ್ಸ್ ಮಾಡ್ತೀಯಾ' ಎಂದು ಕೇಳಿದ್ದಾನೆ. ಇದರಿಂದ ಮಹಿಳೆ ಆಕ್ರೋಶಗೊಂಡು ಪ್ರಶ್ನಿಸುತ್ತಲೇ ಆತ ಕರೆ ಕಟ್ ಮಾಡಿದ್ದಾನೆ.

ಈ ಘಟನೆ ಯಾವಾಗ ನಡೆದಿದೆ, ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆಯೇ ಮತ್ತು ಆರೋಪಿ ರೈಡರ್ ವಿರುದ್ಧ ರ‍್ಯಾಪಿಡೋ ಸಂಸ್ಥೆ ಯಾವುದೇ ಕ್ರಮ ಕೈಗೊಂಡಿದೆಯೇ ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ

ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬಳಸುವ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಸಂಸ್ಥೆಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X