ಸಣ್ಣ ಜಗಳಕ್ಕೆ ರಣಾಂಗಣವಾದ ಕ್ರಿಕೆಟ್ ಮೈದಾನ; ಬ್ಯಾಟ್, ವಿಕೆಟ್ ಹಿಡಿದು ಆಟಗಾರರ ಮಾರಾಮಾರಿ

ಆಟಗಾರರು ಬ್ಯಾಟ್ ಮತ್ತು ವಿಕೆಟ್‌ಗಳಿಂದ ಪರಸ್ಪರ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣ..
violent clash broke out during a cricket tournament
ಕ್ರಿಕೆಟ್ ಟೂರ್ನಿ ವೇಳೆ ಆಟಗಾರರ ನಡುವೆ ಸಂಘರ್ಷ
Updated on: 

ಬೆಂಗಳೂರು: ಕ್ರಿಕೆಟ್ ಪಂದ್ಯವೊಂದರಲ್ಲಿ ಆಟಗಾರರ ನಡುವಿನ ಸಣ್ಣ ಜಗಳ ವಿಕೋಪಕ್ಕೆ ತಿರುಗಿ, ಮೈದಾನವೇ ಹೊಡೆದಾಟದ ಅಖಾಡವಾಗಿ ಮಾರ್ಪಟ್ಟ ಘಟನೆ ಬೆಂಗಳೂರಿನ ಹೊರವಲಯದ ಆನೆಕಲ್‌ನಲ್ಲಿ ನಡೆದಿದೆ.

ಆಟಗಾರರು ಬ್ಯಾಟ್ ಮತ್ತು ವಿಕೆಟ್‌ಗಳಿಂದ ಪರಸ್ಪರ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಆನೆಕಲ್ ಪಟ್ಟಣದ ಎಎಸ್‌ಬಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 'ಅಂಬಾರಿ ಕಪ್-2026' ಕ್ರಿಕೆಟ್ ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ವಿವಿಧ ಪ್ರದೇಶಗಳ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.

violent clash broke out during a cricket tournament
ಕ್ಯಾಬ್ ಚಾಲಕನಿಂದ 7 ಮಂದಿ ಹತ್ಯೆ ಕೇಸ್: ಕೃತ್ಯಕ್ಕೆ ಸಹಕರಿಸಿದ ಅಪ್ರಾಪ್ತೆಗೆ ಸಂಕಷ್ಟ; ವಯಸ್ಕಳೆಂದು ಪರಿಗಣಿಸಿ ವಿಚಾರಣೆ ಸಾಧ್ಯತೆ

ಸಣ್ಣ ಜಗಳಕ್ಕೆ ರಣಾಂಗಣವಾದ ಮೈದಾನ

ಪಂದ್ಯ ನಡೆಯುತ್ತಿದ್ದ ವೇಳೆ ಆಟಗಾರರ ನಡುವೆ ಯಾವುದೋ ವಿಚಾರಕ್ಕೆ ಸಣ್ಣ ವಾಗ್ವಾದ ಆರಂಭವಾಗಿದೆ. ಆದರೆ, ಕೆಲವೇ ಕ್ಷಣಗಳಲ್ಲಿ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಆಟಗಾರರು ಬ್ಯಾಟ್ ಮತ್ತು ವಿಕೆಟ್‌ಗಳನ್ನು ಕೈಗೆತ್ತಿಕೊಂಡು ಪರಸ್ಪರ ಹಲ್ಲೆ ನಡೆಸಿದ್ದಾರೆ. ಒಬ್ಬರನ್ನೊಬ್ಬರು ಬೆನ್ನಟ್ಟಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು

ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆನೆಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X