ಲವ್ ಬ್ರೇಕಪ್‌ಗೆ ಬಲಿಯಾದ ಯುವಕ: ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ..!

ಪವನ್ ಮತ್ತು ಆ ಮಹಿಳೆ ರಾಜಾನುಕುಂಟೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದ ಬಳಿಕ ಮಹಿಳೆ ಒಂದು ವಾರದ ಹಿಂದೆ ಪವನ್‌ನೊಂದಿಗೆ ಸಂಪರ್ಕ ಕಡಿದುಕೊಂಡು ಮಾದನಾಯಕನಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು.
Stop Suicide
ಸಾಂಕೇತಿಕ ಚಿತ್ರonline desk
Updated on: 

ಬೆಂಗಳೂರು: ಪ್ರಿಯತಮೆ ತನ್ನನ್ನು ತೊರೆದು ಹೋದ ಕಾರಣಕ್ಕೆ ಮನನೊಂದ 28 ವರ್ಷದ ಯುವಕನೊಬ್ಬ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ಹೊರವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತನನ್ನು ಆಂಧ್ರಪ್ರದೇಶದ ಹಿಂದೂಪುರ ಮೂಲದ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಚಾಲಕನಾಗಿದ್ದ. ಕಳೆದ ಒಂದು ವರ್ಷದಿಂದ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಆ ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಪವನ್ ಮತ್ತು ಆ ಮಹಿಳೆ ರಾಜಾನುಕುಂಟೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದ ಬಳಿಕ ಮಹಿಳೆ ಒಂದು ವಾರದ ಹಿಂದೆ ಪವನ್‌ನೊಂದಿಗೆ ಸಂಪರ್ಕ ಕಡಿದುಕೊಂಡು ಮಾದನಾಯಕನಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು.

ಪವನ್ ಹಲವು ಬಾರಿ ಫೋನ್ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದ್ದ. ವಾಪಸ್ ಬರುವಂತೆ ಮನವಿಯನ್ನೂ ಮಾಡಿದ್ದ. ಆದರೆ, ಮಹಿಳೆ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರಲಿಲ್ಲ ಎನ್ನಲಾಗಿದೆ.

Stop Suicide
ಬೆಂಗಳೂರು ಸರಣಿ ಹತ್ಯೆ ಪ್ರಕರಣ: ನಾನ್-ವೆಜ್ ಊಟಕ್ಕೆ ಕರೆದು ಮೂಸಂಬಿ ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ ಬೆರೆಸಿ 7 ಮಂದಿ ಕಥೆ ಮುಗಿಸಿದ ಪಾಪಿ..!

ಸಂಬಂಧ ಮುಂದುವರಿಸಲು ಮಹಿಳೆ ನಿರಾಕರಿಸಿದ್ದರಿಂದ ಮನನೊಂದ ಪವನ್, ಆಕೆಯ ಸಂಬಂಧಿಕರ ಮನೆ ಸಮೀಪಕ್ಕೆ ತೆರಳಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ.

ಸ್ಥಳೀಯರು ಬೆಂಕಿ ನಂದಿಸಿ ತಕ್ಷಣವೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಭಾನುವಾರ ತಡರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನಸಿಕ ಸಂಕಷ್ಟದಲ್ಲಿದ್ದರೆ ನೆರವು ಪಡೆಯಿರಿ: ಆತ್ಮಹತ್ಯೆಯ ಆಲೋಚನೆಗಳು ಕಾಡುತ್ತಿದ್ದರೆ ಅಥವಾ ಪರಿಚಿತರೊಬ್ಬರ ಬಗ್ಗೆ ಕಳವಳವಿದ್ದರೆ, ಸಹಾಯಕ್ಕಾಗಿ ಸಂಪರ್ಕಿಸಬಹುದು. ಟೆಲಿ ಮಾನಸ್: 14416 (24 ಗಂಟೆಯೂ ಲಭ್ಯ) ಸ್ನೇಹ ಫೌಂಡೇಶನ್: 04424640050, ಐಕಾಲ್ (ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್): 02225521111 (ಸೋಮವಾರದಿಂದ ಶನಿವಾರ, ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ) ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X