CJP ತಿರಂಗಾ ಮೆರವಣಿಗೆಗೆ ಬೆಂಗಳೂರು ಪೊಲೀಸರಿಂದ ಅನುಮತಿ ನಿರಾಕರಣೆ; ಹೈಕೋರ್ಟ್ ಆದೇಶ ಉಲ್ಲೇಖಿಸಿದ ಪೊಲೀಸರು!

ಇಂದು ಸಂಜೆ 4 ಗಂಟೆಗೆ ಇಲ್ಲಿನ ಟೌನ್ ಹಾಲ್‌ನಿಂದ ಮೆರವಣಿಗೆ ಪ್ರಾರಂಭವಾಗಿ, 'ಕ್ವಿಟ್ ಇಂಡಿಯಾ ಸ್ಮಾರಕ'ದ (Quit India Memorial) ಬಳಿ ಕೊನೆಗೊಳ್ಳಬೇಕಿತ್ತು.
CJP Protest
ಸಿಜೆಪಿ ಪ್ರತಿಭಟನೆ
Updated on: 

ಬೆಂಗಳೂರು: CJP ತಿರಂಗಾ ಮೆರವಣಿಗೆಗೆ ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪ್ರತಿಭಟನೆಗಳಿಗೆ 'ಫ್ರೀಡಂ ಪಾರ್ಕ್' (Freedom Park) ಅನ್ನು ನಿಗದಿಪಡಿಸಿರುವ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಸಿಜೆಪಿ (CJP) ಆಯೋಜಿಸಿದ್ದ 'ತಿರಂಗಾ ಮೆರವಣಿಗೆಗೆ ಅನುಮತಿಯನ್ನು ಪೊಲೀಸರು ಕೊಟ್ಟಿಲ್ಲ.

ಆಯೋಜಕರ ಪ್ರಕಾರ, ಇಂದು ಸಂಜೆ 4 ಗಂಟೆಗೆ ಇಲ್ಲಿನ ಟೌನ್ ಹಾಲ್‌ನಿಂದ ಮೆರವಣಿಗೆ ಪ್ರಾರಂಭವಾಗಿ, 'ಕ್ವಿಟ್ ಇಂಡಿಯಾ ಸ್ಮಾರಕ'ದ (Quit India Memorial) ಬಳಿ ಕೊನೆಗೊಳ್ಳಬೇಕಿತ್ತು.

ಆಯೋಜಕರು ಟೌನ್ ಹಾಲ್‌ನಲ್ಲಿ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು. ಆದರೆ ಹೈಕೋರ್ಟ್ ಆದೇಶದ ಪ್ರಕಾರ 'ಫ್ರೀಡಂ ಪಾರ್ಕ್' ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಸಿಜೆಪಿ ಮೆರವಣಿಗೆಗೆ ಅನುಮತಿ ನೀಡಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಕಾಕ್ರೋಚ್ ಜನತಾ ಪಾರ್ಟಿ'ಯ (Cockroach Janta Party - CJP) ಸಹ-ಸಂಯೋಜಕ ಅಶುತೋಷ್ ರಂಕಾ ಮತ್ತು ವಕ್ತಾರ ಸೌರವ್ ದಾಸ್ ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು, 'ಜಾಗೃತ ಕರ್ನಾಟಕ', 'ಐಸಾ (AISA) ಕರ್ನಾಟಕ' ಮತ್ತು 'ಮೈ ವೋಟ್, ಮೈ ರೈಟ್' (My Vote, My Right) ಸಂಘಟನೆಗಳ ಸಹಯೋಗದೊಂದಿಗೆ ಈ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

ಶಾಂತಿ ಕಾಪಾಡುವ ಒಪ್ಪಂದವನ್ನು (peace bonds) ಉಲ್ಲಂಘಿಸಿದ ಆರೋಪ ಮತ್ತು ಪ್ರತಿಭಟನಾ ಸ್ಥಳವಲ್ಲದ ದೆಹಲಿಯ ಜಂತರ್ ಮಂತರ್‌ಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ, ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಅಕ್ಟೋಬರ್ 14 ರಂದು ಬಂಧಿಸಿದ್ದು, ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

CJP Protest
CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

ಕಳೆದ ವಾರ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾಗ, ಒಂದು ವರ್ಷದವರೆಗೆ ಶಾಂತಿ ಕಾಪಾಡುವುದಾಗಿ ಇವರು ಮುಚ್ಚಳಿಕೆ ಪತ್ರಕ್ಕೆ (bonds) ಸಹಿ ಹಾಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com