ಮತ್ತೆ ನಿರಾಸೆಯಲ್ಲಿ ಕುಮಾರಣ್ಣ! ಪ್ರಧಾನ ಮಂತ್ರಿ ಕಡೆಗಣಿಸುತ್ತಿರುವಾಗ ವಿವಾದ ಸೃಷ್ಟಿಸುವುದೊಂದೇ ಅವರ ಕೆಲಸ- ಪ್ರಿಯಾಂಕ್ ಖರ್ಗೆ

ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ ಹಾಗೂ ಧರಣಿಗಳಿಗೆ ಕರ್ನಾಟಕ ಸರ್ಕಾರದಿಂದಲೇ ಹಣ ರವಾನೆಯಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
Kumaraswamy, Priyank Kharge
ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ
Updated on: 

ಬೆಂಗಳೂರು: ಸ್ಟಿಂಗ್ ಆಪರೇಷನ್ ವಿವಾದ ರಾಜ್ಯ ರಾಜಕೀಯದಲ್ಲಿ ತಾರಕಕ್ಕೇರಿರುವಂತೆಯೇ ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೇ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಮತ್ತಷ್ಟು ಕೆರಳಿಸಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ ಹಾಗೂ ಧರಣಿಗಳಿಗೆ ಕರ್ನಾಟಕ ಸರ್ಕಾರದಿಂದಲೇ ಹಣ ರವಾನೆಯಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದನ್ನು ಪ್ರದರ್ಶಿಸಿ, ತಮ್ಮ ಪರವಾಗಿ ಹೋರಾಟ ನಡೆಸುವವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿರುವುದನ್ನು ಕುಮಾರಸ್ವಾಮಿ ಟೀಕಿಸಿದ್ದಾರೆ. ನೀವೇನು ಬೇಕಾದರೂ ಗಲಾಟೆ ಮಾಡಿ, ನಿಮ್ಮ ಮೇಲೆ ನಾವೇನು ಪೊಲೀಸ್​ನವರು ಆ್ಯಕ್ಷನ್ ತಗೊಳ್ಳಲ್ಲ ಎಂದು ಸಿಜೆಪಿ ಪರ ಖರ್ಗೆ ಹೇಳಿಕೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಕುಮಾರಣ್ಣ ಮತ್ತೆ ನಿರಾಸೆಯಲ್ಲಿದ್ದಾರೆ. ಪ್ರಧಾನ ಮಂತ್ರಿ ಕಡೆಗಣಿಸುತ್ತಿರುವಾಗ ವಿವಾದ ಸೃಷ್ಟಿಸುವುದೊಂದೇ ಅವರ ಕೆಲಸವಾಗಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಮತ್ತು ಸಿಜೆಪಿ (CJP) ಚುನಾವಣಾ ಆಯೋಗವನ್ನು ಶುದ್ಧೀಕರಿಸಲು ಬಯಸುತ್ತವೆ ಎಂದು ನಾನು ಹೇಳಿದ್ದಕ್ಕಾಗಿ ಕುಮಾರ್ ಅಣ್ಣ ಮತ್ತೆ ನಿರಾಸೆಗೊಂಡಿದ್ದಾರೆ. ಅವರ ಕುಟುಂಬದ ಎಂಟು ಮಂದಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿರುವಾಗ, ನಾನು ನನ್ನ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಅವರು ಬಯಸುತ್ತಿದ್ದಾರೆ ಎಂದಿದ್ದಾರೆ.

Kumaraswamy, Priyank Kharge
ದೆಹಲಿಯ CJP ಹೋರಾಟಕ್ಕೆ ಕರ್ನಾಟಕದಿಂದ ಫಂಡಿಂಗ್: ಅಪ್ಪಾ, ನಮ್ಮ ಗೃಹ ಸಚಿವರೇ, ಇದು ನಿಮ್ಮ ಹೇಳಿಕೆ; ವಿಡಿಯೋ ಪ್ರದರ್ಶಿಸಿ HDK ಟಾಂಗ್

ನನ್ನ ಒಂದೇ ಒಂದು ಸ್ಥಾನ ಪಾಪವೇ? ಅವರ ಎಂಟು ಸ್ಥಾನಗಳು ಜನ್ಮಸಿದ್ಧ ಹಕ್ಕೇ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com