ಹೊಸ LPG ಸಂಪರ್ಕಕ್ಕೆ ಹೆಚ್ಚಿದ ಡಿಮ್ಯಾಂಡ್: ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ..!

ಅಡುಗೆ ಅನಿಲ ಸಂಪರ್ಕವಿಲ್ಲದ ಗ್ರಾಹಕರು ಕಟ್ಟಿಗೆ, ಇದ್ದಿಲು, ಸೀಮೆಎಣ್ಣೆ ಸೇರಿದಂತೆ ಸಾಂಪ್ರದಾಯಿಕ ಮತ್ತು ಸ್ವಚ್ಛವಲ್ಲದ ಇಂಧನಗಳನ್ನು ಬಳಸುವ ಅನಿವಾರ್ಯತೆಗೆ ಸಿಲುಕಬಹುದು. ಅನೇಕ ಕುಟುಂಬಗಳಲ್ಲಿ ಅಡುಗೆಗೆ ಇಂಧನ ವ್ಯವಸ್ಥೆ ಮಾಡುವ ಜವಾಬ್ದಾರಿ ಮುಖ್ಯವಾಗಿ ಮಹಿಳೆಯರ ಮೇಲಿದೆ.
LPG Cylinder
LPG ಸಿಲಿಂಡರ್Online Desk
Updated on: 

ಬೆಂಗಳೂರು: ರಾಜ್ಯದಲ್ಲಿ ಹೊಸ ಗೃಹಬಳಕೆಯ ಎಲ್‌ಪಿಜಿ (LPG) ಸಂಪರ್ಕಗಳ ವಿತರಣೆಯನ್ನು ತಕ್ಷಣವೇ ಪುನರಾರಂಭಿಸಲು ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ದೇಶಾದ್ಯಂತ ಹೊಸ ಗ್ಯಾಸ್ ಸಂಪರ್ಕಗಳ ವಿತರಣೆಯನ್ನು ಸುದೀರ್ಘ ಅವಧಿಗೆ ಸ್ಥಗಿತಗೊಳಿಸಿರುವುದರಿಂದ ರಾಜ್ಯದಲ್ಲಿ ಲಕ್ಷಾಂತರ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೊಸ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲು ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಸಂಬಂಧ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಜಾಗತಿಕ ಎಲ್‌ಪಿಜಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೊಸ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳನ್ನು ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಹಲವು ತಿಂಗಳುಗಳಿಂದ ಅರ್ಜಿಗಳು ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ.

ಜನಸಂಖ್ಯೆಯ ಹೆಚ್ಚಳ, ನಗರೀಕರಣ ಮತ್ತು ವಸತಿ ಪ್ರದೇಶಗಳ ವಿಸ್ತರಣೆಯಿಂದ ಎಲ್‌ಪಿಜಿ ಸಂಪರ್ಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೊಸದಾಗಿ ಪ್ರತ್ಯೇಕ ಕುಟುಂಬಗಳಾಗಿ ರೂಪುಗೊಂಡಿರುವವರು, ಆರ್ಥಿಕವಾಗಿ ದುರ್ಬಲ ವರ್ಗದವರು, ವಲಸೆ ಕಾರ್ಮಿಕರು, ಕಡಿಮೆ ಆದಾಯದ ಕುಟುಂಬಗಳು ಹಾಗೂ ಹೊಸದಾಗಿ ಅಭಿವೃದ್ಧಿಯಾಗುತ್ತಿರುವ ವಸತಿ ಪ್ರದೇಶಗಳಲ್ಲಿನ ಅನೇಕ ಕುಟುಂಬಗಳು ಇನ್ನೂ ಎಲ್‌ಪಿಜಿ ಸಂಪರ್ಕ ಪಡೆದಿಲ್ಲ.

LPG Cylinder
ನಾಯಂಡಹಳ್ಳಿ: ಅಡುಗೆ ಮಾಡುತ್ತಿದ್ದಾಗ LPG ಸಿಲಿಂಡರ್ ಸೋರಿಕೆ; ಅಗ್ನಿ ಅವಘಡದಲ್ಲಿ 4 ಮಕ್ಕಳು ಸೇರಿ 6 ಮಂದಿಗೆ ಗಾಯ!

ಅಡುಗೆ ಅನಿಲ ಸಂಪರ್ಕವಿಲ್ಲದ ಗ್ರಾಹಕರು ಕಟ್ಟಿಗೆ, ಇದ್ದಿಲು, ಸೀಮೆಎಣ್ಣೆ ಸೇರಿದಂತೆ ಸಾಂಪ್ರದಾಯಿಕ ಮತ್ತು ಸ್ವಚ್ಛವಲ್ಲದ ಇಂಧನಗಳನ್ನು ಬಳಸುವ ಅನಿವಾರ್ಯತೆಗೆ ಸಿಲುಕಬಹುದು. ಅನೇಕ ಕುಟುಂಬಗಳಲ್ಲಿ ಅಡುಗೆಗೆ ಇಂಧನ ವ್ಯವಸ್ಥೆ ಮಾಡುವ ಜವಾಬ್ದಾರಿ ಮುಖ್ಯವಾಗಿ ಮಹಿಳೆಯರ ಮೇಲಿದೆ. ಎಲ್‌ಪಿಜಿ ಲಭ್ಯವಿಲ್ಲದಿರುವುದರಿಂದ ಕಟ್ಟಿಗೆ ಅಥವಾ ಪರ್ಯಾಯ ಇಂಧನಗಳನ್ನು ಸಂಗ್ರಹಿಸಲು ಅವರು ಹೆಚ್ಚಿನ ಸಮಯ ಮತ್ತು ಶ್ರಮ ವ್ಯಯಿಸಬೇಕಾಗುತ್ತದೆ.

ಕಟ್ಟಿಗೆ ಹಾಗೂ ಇತರ ಘನ ಇಂಧನಗಳ ನಿರಂತರ ಬಳಕೆಯಿಂದ ಮನೆಯೊಳಗಿನ ವಾಯುಮಾಲಿನ್ಯ ಹೆಚ್ಚಾಗಿ, ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನಿಯಂತ್ರಣವಿಲ್ಲದ ಅಥವಾ ಸುರಕ್ಷಿತವಲ್ಲದ ಪರ್ಯಾಯ ಅಡುಗೆ ಇಂಧನಗಳ ಬಳಕೆ ಮತ್ತು ತಾತ್ಕಾಲಿಕ ಅಡುಗೆ ವ್ಯವಸ್ಥೆಗಳಿಂದ ಬೆಂಕಿ ಅವಘಡ ಸೇರಿದಂತೆ ಮನೆಯೊಳಗಿನ ಅಪಘಾತಗಳ ಅಪಾಯವೂ ಹೆಚ್ಚಬಹುದು ಎಂದು ಎಚ್ಚರಿಸಿದ್ದಾರೆ.

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಐದು ಕೆ.ಜಿ. ತೂಕದ ಸಿಲಿಂಡರ್‌ಗಳ ಬೆಲೆಗಳ ನಡುವಿನ ವ್ಯತ್ಯಾಸವನ್ನೂ ಸಚಿವರು ಪ್ರಸ್ತಾಪಿಸಿದ್ದಾರೆ. ಐದು ಕೆ.ಜಿ. ಸಿಲಿಂಡರ್‌ಗಳ ಬೆಲೆಯೂ ಮಧ್ಯಮ ವರ್ಗದ ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಹೊರೆಯಾಗಬಹುದು ಎಂದು ಹೇಳಿದ್ದಾರೆ.

ಆದ್ದರಿಂದ, ಕರ್ನಾಟಕದ ಅರ್ಹ ಕುಟುಂಬಗಳಿಗೆ ಆದ್ಯತೆಯ ಮೇರೆಗೆ ಸಾಕಷ್ಟು ಸಂಖ್ಯೆಯಲ್ಲಿ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ನಿರ್ದೇಶನ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com