

ನೂತನ ರಾಜ್ಯಪಾಲೆಯಾಗಿ ನೇಮಕಗೊಂಡಿರುವ ಡಾ.ಸುಧಾ ಯಾದವ್ ಅವರು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕನ್ಯಾಪೂಜೆಯನ್ನು ಅರ್ಥವತ್ತಾಗಿ ತಮ್ಮ ಕಚೇರಿ ಲೋಕಭವನದಲ್ಲಿ ನೆರವೇರಿಸಿದ್ದಾರೆ.
ಬೆಂಗಳೂರಿನ ಗಾಂಧಿನಗರದ ನಾಗಮ್ಮನಗರ ಕೊಳಗೇರಿ ಪ್ರದೇಶದ ನಿರ್ಗತಿಕ ಬಾಲಕಿಯರನ್ನು ಲೋಕಭವನಕ್ಕೆ ಆಹ್ವಾನಿಸಿ ಸಾಂಪ್ರದಾಯಿಕವಾಗಿ ಕನ್ಯಾಪೂಜೆ ಮಾಡಿದ್ದಾರೆ. ಬಳಿಕ ಮಕ್ಕಳೊಂದಿಗೆ ಭೋಜನ ಮಾಡಿ ಶಾಲಾ ಬ್ಯಾಗ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಿದರು.
ಸಮಾಜದ ಹಿಂದುಳಿದ ಹಾಗೂ ನಿರ್ಗತಿಕ ಬಾಲಕಿಯರನ್ನು ಆಹ್ವಾನಿಸಿ ರಾಜ್ಯಪಾಲೆ ಸುಧಾ ಯಾದವ್ ಅವರು ಕನ್ಯಾಪೂಜೆ ನೆರವೇರಿಸಿ ಗೌರವಿಸಿದ್ದು ಪ್ರಶಂಸೆಗೆ ಪಾತ್ರವಾಗಿದೆ.