ಮಂಗಳೂರು: ಚರ್ಚ್‌ನಲ್ಲಿ ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ; ಪೋಕ್ಸೊ ಪ್ರಕರಣ ಬೆನ್ನಲ್ಲೇ ಪಾದ್ರಿ ಬಂಧನ

ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನಲ್ಲಿ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಾದ್ರಿ ಸಿಪ್ರಿಯನ್ ಪಿಂಟೋ ಎಂಬಾತನನ್ನು ಬಂಧಿಸಲಾಗಿದೆ.
Siprian Pinto
ಪಾದ್ರಿ ಸಿಪ್ರಿಯನ್ ಪಿಂಟೋ
Updated on: 

ಮಂಗಳೂರು: ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನಲ್ಲಿ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಾದ್ರಿ ಸಿಪ್ರಿಯನ್ ಪಿಂಟೋ ಎಂಬಾತನನ್ನು ಬಂಧಿಸಲಾಗಿದೆ. ಪ್ರಾರ್ಥನೆಗೆ ಹೋದ ಸಂದರ್ಭದಲ್ಲಿ ಬಾಲಕರಿಗೆ ಸಿಪ್ರಿಯನ್ ಪಿಂಟೋ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಅಲ್ಲದೆ ಈ ಸಂಬಂಧ ಮಕ್ಕಳ ಪೋಷಕರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಸಿಪ್ರಿಯನ್ ಪಿಂಟೋನನ್ನು ಬಂಧಿಸಲಾಗಿದೆ. ತನ್ನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಸಿಪ್ರಿಯನ್ ಪಿಂಟೋ ತಲೆಮರೆಸಿಕೊಂಡಿದ್ದರು.

Siprian Pinto
ಚಿನ್ನದ ಕೆಲಸ ಮಾಡುತ್ತಲೇ ಪಾಕ್ ಉಗ್ರರ ಜೊತೆ ನಂಟು: ಕಲಬುರಗಿಯಲ್ಲಿ ಶಂಕಿತ ಉಗ್ರನ ಬಂಧನ

ಮಂಗಳೂರಿನಿಂದ ಪಲಾಯನ ಮಾಡಿದ್ದ ಸಿಪ್ರಿಯನ್ ಪಿಂಟೋ ಹಾಸನದ ಸಕಲೇಶಪುರದ ಸಂಬಂಧಿ ಮನೆಯಲ್ಲಿ ಅಡಗಿಕೊಂಡಿರುವುದು ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com