ಬಾಗಲಕೋಟೆ: ದಾಂಡಿಯಾ ಸಂಭ್ರಮದ ವೇಳೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ದಸರಾ ಪ್ರಯುಕ್ತ ಮುಧೋಳದ ವಿನಾಯಕ ನಗರದಲ್ಲಿ ದಾಂಡಿಯಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ನೃತ್ಯದ ವೇಳೆ ಚಾಕು ಇರಿದು ಯುವಕನನ್ನ ಕೊಲೆ ಮಾಡಿರುವ ಘಟನೆ ನಡೆದಿದೆ.
Representation purpose only
ಸಂಗ್ರಹ ಚಿತ್ರ
Updated on: 

ಬಾಗಲಕೋಟೆ: ದಸರಾ ಪ್ರಯುಕ್ತ ಮುಧೋಳದ ವಿನಾಯಕ ನಗರದಲ್ಲಿ ದಾಂಡಿಯಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ನೃತ್ಯದ ವೇಳೆ ಚಾಕು ಇರಿದು ಯುವಕನನ್ನ ಕೊಲೆ ಮಾಡಿರುವ ಘಟನೆ ನಡೆದಿದೆ.

ಮೃತನನ್ನು 25 ವರ್ಷದ ನಿತಿನ್ ನಿಂಬಾಳ್ಕರ್ ಎಂದು ಗುರುತಿಸಲಾಗಿದೆ. ಶ್ರೀನಿವಾಸ ಕದರಿ ಎಂಬಾತ ನಿತಿನ್ ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿ ತೇಲಾಡುತ್ತಿದ್ದ ಶ್ರೀನಿವಾಸ್​ ಕದರಿ ದಾಂಡಿಯಾ ನೃತ್ಯ ಮಾಡುತ್ತಿದ್ದ ಯುವತಿಯರನ್ನು ಚುಡಾಯಿಸಿದ್ದಾನೆ. ಈ ವೇಳೆ ಅಲ್ಲಿದ್ದ ನಿತಿನ್ ನಿಂಬಾಳ್ಕರ್​​, ಶ್ರೀನಿವಾಸ್​ಗೆ ಇಲ್ಲಿಂದ ಹೋಗುವಂತೆ ಎಚ್ಚರಿಕೆ ನೀಡಿದ್ದಾನೆ.

Representation purpose only
ಮೈಸೂರು: ಅರ್ಕೇಶ್ವರ ದೇವಸ್ಥಾನದ ಮೇಲೆ ಶಿಲುಬೆ, ಮಸೀದಿ ಚಿತ್ರ ವಿವಾದ; ಇದು ಕಲಬೆರಕೆ ಹಿಂದೂಗಳ ಕೆಲಸ, ಪ್ರತಾಪ್ ಸಿಂಹ ಆಕ್ರೋಶ, Video!

ಶ್ರೀನಿವಾಸ್ ಇದ್ಯಾವುದಕ್ಕೆ ಕ್ಯಾರೆ ಎನ್ನದೆ ಗಲಾಟೆ ಮುಂದುವರೆಸಿದ್ದಾನೆ. ಈ ವೇಳೆ ನಿತಿನ್​​ ಕಪಾಳಕ್ಕೆ ಹೊಡೆದು ಕಳಿಸಿದ್ದಾನೆ. ತಮ್ಮ ಏರಿಯಾಗೆ ಹೋದ ಶ್ರೀನಿವಾಸ್ ಸ್ನೇಹಿತರಾದ ಸಂಪತ್ ಮತ್ತು ಪ್ರದೀಪ್‌ನನ್ನು ಕರೆದುಕೊಂಡು ಬಂದು ಪುನಃ ನಿತಿನ್ ಜೊತೆ ಜಗಳ ಮಾಡಿದ್ದಾರೆ. ನೋಡನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿದ್ದು, ಚಾಕುವಿನಿಂದ ನಿತಿನ್ ಎದೆ, ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾರೆ. ಈ ಸಂಬಂಧ ಮುಧೋಳ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com