ಸ್ಟಿಂಗ್ ಆಪರೇಷನ್‌ ಒಂದು ರೀತಿಯಲ್ಲಿ ಒಳ್ಳೆಯದು; ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ: ಶಿವಗಂಗಾ ಬಸವರಾಜ್

ಒಪ್ಪಂದದ ಪ್ರಕಾರ, ರಾಹುಲ್ ಗಾಂಧಿ ಹೇಳಿದಂತೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. 3-2 ಒಪ್ಪಂದ ಆಗಿರಬಹುದು. ಮೂರು ವರ್ಷದ ನಂತರವೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಎಂದರು.
Congress MLA Shivaganga Basavaraj
ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್
Updated on: 

ದಾವಣಗೆರೆ: ಸ್ಟಿಂಗ್ ಆಪರೇಷನ್‌ನಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತದೆ. ಆಗ ಯಾರೊಬ್ಬರೂ ಎಲ್ಲಿಗೂ ಹೊರಗೆ ಹೋಗದೆ ತಮ್ಮ ತಮ್ಮ ಮನೆಕಡೆ ಗಮನ ಹರಿಸುತ್ತಾರೆ ಎಂದು ಚನ್ನಗಿರಿಯ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್‌ನಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ. ಯಾರು ಎಲ್ಲಿಗೂ ಹೋಗದಂತೆ ಮನೆ ಕಡೆ ಗಮನ ಹರಿಸುತ್ತಾರೆ. ಈ ರೀತಿ ಮಾಡುವುದು ಒಂದು ತರ ಒಳ್ಳೆಯದು ಅನಿಸುತ್ತೆ. ಸ್ಟಿಂಗ್ ಆಪರೇಷನ್ ನೋಡಿದ್ರೆ ನಮಗೂ ಭಯವಾಗುತ್ತೆ. ಯಾವ ರೀತಿಯ ರಾಜಕಾರಣ ಮಾಡಬೇಕು? ಜನರ ನಡುವೆ ಹೇಗೆ ಇರಬೇಕು? ಎನ್ನುವ ಭಯ ಕಾಡುತ್ತಿದೆ. ಸ್ಟಿಂಗ್ ಆಪರೇಷನ್ ಮಾಡೋದು ತಪ್ಪು. ಈ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಆಗಬೇಕು ಎಂದರು.

ಇನ್ನೂ ಸ್ಟಿಂಗ್ ಆಪರೇಷನ್‌ ಮೂಲಕವೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ. ಅವರು ಈ ರೀತಿಯ ಸ್ಟಿಂಗ್ ಆಪರೇಷನ್‌ಗೆ ಬಗ್ಗುವ ವ್ಯಕ್ತಿ ಅಲ್ಲ ಎಂದು ತಿಳಿಸಿದರು.

Congress MLA Shivaganga Basavaraj
ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಮರಳಲು ಮುಕ್ತ, ಆದರೆ 'ಸ್ಟಿಂಗ್ ಆಪರೇಷನ್' ಆರೋಗ್ಯಕರ ಬೆಳವಣಿಗೆಯಲ್ಲ: ಜಿ. ಪರಮೇಶ್ವರ

ಒಪ್ಪಂದದ ಪ್ರಕಾರ, ರಾಹುಲ್ ಗಾಂಧಿ ಹೇಳಿದಂತೆ ರಾಜೀನಾಮೆ ಕೊಟ್ಟಿದ್ದಾರೆ. 3-2 ಒಪ್ಪಂದ ಆಗಿರಬಹುದು. ಮೂರು ವರ್ಷದ ನಂತರವೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಆಸ್ತಿ, ಮಾಸ್ ಲೀಡರ್. ಅವರನ್ನು ಡಿಸ್ಟರ್ಬ್ ಮಾಡಲು ವಿರೋಧ ಪಕ್ಷದವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com