ದಸರಾ ಸಂಭ್ರಮ: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಹೇಗಿತ್ತು ನೋಡಿ...; Video

ರಾಜಮನೆತನದ ಆನೆ ಶ್ರೀಕಂಠ ಮತ್ತು ಅರಮನೆಯ ಧಾರ್ಮಿಕ ಸಮಾರಂಭಗಳಲ್ಲಿ ರಾಜಮನೆತನದ ಧ್ವಜವನ್ನು ಹೊರುವ ಏಕಲವ್ಯ ಸೇರಿದಂತೆ ವಿವಿಧ ಪ್ರಾಣಿಗಳಿಗೆ ಪೂಜಾ ವಿಧಿವಿಧಾನಗಳ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು.
Ayudha pooja at Mysuru palace
ಮೈಸೂರು ಅರಮನೆಯಲ್ಲಿ ಆಯುಧ ಪೂಜೆ
Updated on: 

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಮಂಗಳವಾರ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜಮನೆತನದ ಆಯುಧಗಳು ಹಾಗೂ ಪ್ರಾಣಿ-ಪಕ್ಷಿಗಳನ್ನು ವಿಶೇಷ ಪೂಜೆಗಾಗಿ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.

ರಾಜಮನೆತನದ ಆನೆ ಶ್ರೀಕಂಠ ಮತ್ತು ಅರಮನೆಯ ಧಾರ್ಮಿಕ ಸಮಾರಂಭಗಳಲ್ಲಿ ರಾಜಮನೆತನದ ಧ್ವಜವನ್ನು ಹೊರುವ ಏಕಲವ್ಯ ಸೇರಿದಂತೆ ವಿವಿಧ ಪ್ರಾಣಿಗಳಿಗೆ ಪೂಜಾ ವಿಧಿವಿಧಾನಗಳ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು.

ಮಹಾರಾಜ ಯದುವೀರ್ ದತ್ತ ಒಡೆಯರ್ ಕುಟುಂಬದ ಸದಸ್ಯರು ಹಾಗೂ ಅರಮನೆಯ ಸಿಬ್ಬಂದಿ ಸಾಂಪ್ರದಾಯಿಕ ರಾಜವಸ್ತ್ರಗಳನ್ನು ಧರಿಸಿ ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Ayudha pooja at Mysuru palace
ವಿಜಯದಶಮಿ: ದೇವಿ ಕೃಪೆ, ರಾಜವೈಭವ-ಒಳಿತಿನ ವಿಜಯದ ಸಂಭ್ರಮ

ರಾಜಮನೆತನದ ಆನೆ ಮತ್ತು ಕುದುರೆಯನ್ನು ಸಂಗೀತ ವಾದ್ಯಗಳ ತಂಡ ಹಾಗೂ ಸಾಂಪ್ರದಾಯಿಕ ರಾಜ ಆಯುಧಗಳೊಂದಿಗೆ ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಧಾರ್ಮಿಕ ಶುದ್ಧೀಕರಣ ವಿಧಿವಿಧಾನಗಳನ್ನು ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಅರಮನೆಗೆ ಮರಳಿತು.

ಅರಮನೆಯಲ್ಲಿ ನಡೆಯುವ ಆಯುಧ ಪೂಜೆಯ ಸಂದರ್ಭದಲ್ಲಿ ಪುರಾತನ ಕತ್ತಿಗಳು, ಈಟಿಗಳು ಮತ್ತು ಗುರಾಣಿಗಳು ಸೇರಿದಂತೆ ರಾಜಮನೆತನದ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದರೊಂದಿಗೆ ರಾಜಮನೆತನಕ್ಕೆ ಸೇರಿದ ಆನೆ, ಹಸು, ಒಂಟೆ ಮತ್ತು ಕುದುರೆಗಳಿಗೂ ಹಾಗೂ ರಾಜಮನೆತನದ ವಾಹನಗಳಿಗೂ ಪೂಜೆ ನೆರವೇರಿಸಲಾಗುತ್ತದೆ.

ಬೆಳಗ್ಗೆ 6 ಗಂಟೆಗೆ ಚಂಡಿ ಹೋಮ ಆರಂಭವಾಗಲಿದ್ದು, ಬೆಳಗ್ಗೆ 11.32ರಿಂದ 11.52ರವರೆಗಿನ ಶುಭ ಮುಹೂರ್ತದಲ್ಲಿ ಆಯುಧ ಪೂಜೆ ನೆರವೇರಿಸಲು ನಿಗದಿಪಡಿಸಲಾಗಿತ್ತು.

ಧಾರ್ಮಿಕ ವಿಧಿವಿಧಾನಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮೈಸೂರು ಅರಮನೆಯನ್ನು ಎರಡು ದಿನಗಳ ಕಾಲ ಪ್ರವಾಸಿಗರ ಭೇಟಿಗೆ ಮುಚ್ಚಲಾಗಿದೆ. ಯದುವೀರ್ ಒಡೆಯರ್ ಅವರು ಅರಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com