ಮೈಸೂರು ಅರಮನೆ

ಮೈಸೂರು ಅರಮನೆ ಮಾಲೀಕತ್ವ ವಿವಾದ ನ್ಯಾಯಾಲಯದ ಅಂಗಳದಲ್ಲಿದೆ, ಸದ್ಯಕ್ಕೆ ಚರ್ಚೆ ಅನಗತ್ಯ: ಯದುವೀರ್ ಒಡೆಯರ್
ಅರಮನೆ ವಿವಾದ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯವೇ ನಿರ್ಧಾರ ಕೈಗೊಳ್ಳಲಿದೆ. ರಾಜಕಾರಣಿಯಾಗಿ ನಾನು ಹೇಳುವುದಾದರೆ, ಕಾರ್ಯಾಂಗ ಮತ್ತು ಶಾಸಕಾಂಗವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ನಮಗೆ ಸೇರಿದ್ದನ್ನು ರಕ್ಷಿಸಿಕೊಳ್ಳಲು ನಾವೇ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅರಮನೆ ವಶಕ್ಕೆ ಪಡೆಯಲು ಕಾರ್ಯಾಂಗ ದುರ್ಬಳಕೆ ಆಗಿದೆ: ಸರ್ಕಾರ-ರಾಜಮನೆತನ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು. ಅವರು ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ ಎಂದು ಸಚಿವ ಯತೀಂದ್ರ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಅದು ನಮ್ಮ ಜಾಗ, ಸರ್ಕಾರ ಕೊಟ್ಟಿದ್ದಲ್ಲ; ಅರಮನೆ, ಅಂಬಾರಿ-ಸಿಂಹಾಸನ ನಮ್ಮದು; ಸರ್ಕಾರ ಯದುವಂಶದ ವಾರಸುದಾರ ಅಲ್ಲ: ಪ್ರಮೋದಾ ದೇವಿ
ಅರಮನೆಯ ವಾಸದ ವಿಭಾಗ ಈಗಲೂ ರಾಜಮನೆತನದ ಸುಪರ್ದಿಯಲ್ಲಿದೆ. ಸಾರ್ವಜನಿಕರು ವೀಕ್ಷಿಸುವ ಮುಂಭಾಗದ ಭಾಗವನ್ನು ಮಾತ್ರ ಸರ್ಕಾರ ನಿರ್ವಹಿಸುತ್ತಿದೆ. ಅಂಬಾರಿ ಮತ್ತು ಸಿಂಹಾಸನ ಸೇರಿದಂತೆ ಕೆಲವು ಪ್ರಮುಖ ವಸ್ತುಗಳು ಎಂದಿಗೂ ಸರ್ಕಾರದ ವಶಕ್ಕೆ ಹೋಗಿಲ್ಲ.

'ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ; ರಾಜಮಾತೆ ಪ್ರಮೋದಾ ದೇವಿ ಜತೆ ಮಾತನಾಡುವ ಅಗತ್ಯವೂ ನನಗಿಲ್ಲ': ಯತೀಂದ್ರ ಸಿದ್ದರಾಮಯ್ಯ; Video
ಬೇಕಂತಲೇ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಪ್ರಜ್ಞಾಪೂರ್ವಕವಾಗಿಯೇ ಮಾತನಾಡಿದ್ದೇನೆ. ತಪ್ಪು ಮಾಡಿದ್ದರೆ, ಕ್ಷಮೆ ಕೇಳುತ್ತಿದ್ದೆ. ಆದರೆ ಯಾವುದೇ ತಪ್ಪು ಮಾಡಿಲ್ಲದಿರುವುದರಿಂದ, ನಾನು ಕ್ಷಮೆ ಕೇಳಲ್ಲ ಎಂದರು.
ರಾಜಮನೆತನ vs ಸರ್ಕಾರ: ಮೈಸೂರು ಅರಮನೆ, ಚಿನ್ನದ ಅಂಬಾರಿ, ಸಿಂಹಾಸನ ಯಾರದ್ದು? ಇಲ್ಲಿದೆ ಅಸಲಿ ಸತ್ಯ!
ಮೈಸೂರು ಅರಮನೆ, ರತ್ನಖಚಿತ ಸಿಂಹಾಸನ ಮತ್ತು ಚಿನ್ನದ ಅಂಬಾರಿಯ ಮಾಲೀಕತ್ವದ ವಿಚಾರವು ಮೈಸೂರು ರಾಜಮನೆತನ (ಒಡೆಯರ್ ವಂಶಸ್ಥರು) ಮತ್ತು ಕರ್ನಾಟಕ ಸರ್ಕಾರದ ನಡುವೆ ದಶಕಗಳಿಂದ ಕಾನೂನು ಹೋರಾಟದಲ್ಲಿದೆ. ಆ ಕುರಿತ ವರದಿ ಇಲ್ಲಿದೆ:

ದಸರಾ ಸಂಭ್ರಮ: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಹೇಗಿತ್ತು ನೋಡಿ...; Video
ರಾಜಮನೆತನದ ಆನೆ ಶ್ರೀಕಂಠ ಮತ್ತು ಅರಮನೆಯ ಧಾರ್ಮಿಕ ಸಮಾರಂಭಗಳಲ್ಲಿ ರಾಜಮನೆತನದ ಧ್ವಜವನ್ನು ಹೊರುವ ಏಕಲವ್ಯ ಸೇರಿದಂತೆ ವಿವಿಧ ಪ್ರಾಣಿಗಳಿಗೆ ಪೂಜಾ ವಿಧಿವಿಧಾನಗಳ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು.

ಮೈಸೂರು ದಸರಾ: ಅರಮನೆಯಲ್ಲಿ ಕ್ಷಣಕಾಲ ಆತಂಕ; ಸ್ವಾಗತ ವೇಳೆ ಸಿಟ್ಟಿಗೆದ್ದ ಶ್ರೀರಾಮ ಆನೆ! Video
ಸ್ವಾಗತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀರಾಮ ಅಸಮಾಧಾನಗೊಂಡು ನಿಯಂತ್ರಣ ಕಳೆದುಕೊಳ್ಳುವಂತೆ ವರ್ತಿಸಿದ್ದಾನೆ. ಇದರಿಂದ ಸ್ಥಳದಲ್ಲಿದ್ದವರಲ್ಲಿ ಕೆಲಕಾಲ ಆತಂಕ ಉಂಟಾಯಿತು.

ಮೈಸೂರು ಅರಮನೆ ಬಳಿ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ; ಸ್ಥಳ ಪರಿಶೀಲನೆ ನಡೆಸಿದ ಎನ್ಐಎ ತಂಡ; Video
ಬಲೂನು ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ಕನೋಜ್ ಜಿಲ್ಲೆಯ ತೊಫಿಯ ಗ್ರಾಮದ ಸಲೀಂ (40) ಎಂಬಾತ ಸ್ಥಳದಲ್ಲೇ ಸಾವಿಗೀಡಾಗಿದ್ದು, ಐವರು ಗಾಯಗೊಂಡಿದ್ದಾರೆ.

ಮೈಸೂರು ಅರಮನೆ ವರಾಹ ಗೇಟ್ನ ಮುಖ್ಯದ್ವಾರದ ಮೇಲ್ಛಾವಣಿ ಕುಸಿತ: ತಪ್ಪಿದ ಅನಾಹುತ
ಸಾರ್ವಜನಿಕರು ಆಗಮಿಸುವ ವೇಳೆಯೇ ವರಾಹ ಗೇಟ್ನ ಮುಖ್ಯದ್ವಾರದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

