ಮೈಸೂರು: ಅರ್ಕೇಶ್ವರ ದೇವಾಲಯದ ಗೋಡೆಯ ಮೇಲೆ ಶಿಲುಬೆ, ಮಸೀದಿಯ ಚಿತ್ರ; ಪ್ರಕರಣ ದಾಖಲು

ಈ ದೇವಾಲಯವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಸಾಮಾಜಿಕ ಜಾಲತಾಣವೊಂದರಲ್ಲಿ ಈ ಚಿತ್ರಗಳ ಕುರಿತ ಪೋಸ್ಟ್ ವೈರಲ್ ಆದ ನಂತರ ವಿಷಯ ಬೆಳಕಿಗೆ ಬಂದಿದೆ.
Screengrabs of the paintings on the inner walls of the temple
ಅರ್ಕೇಶ್ವರ ದೇವಾಲಯದ ಗೋಡೆಯ ಮೇಲೆ ಚಿತ್ರ
Updated on: 

ಮೈಸೂರು: ಜಿಲ್ಲೆಯ ಕೆ.ಆರ್. ನಗರ ಪಟ್ಟಣದ ಹೊರವಲಯದಲ್ಲಿರುವ ಹಳೆ ಯಡತೊರೆಯ ಶ್ರೀ ಮೀನಾಕ್ಷಿ ಸಮೇತ ಅರ್ಕೇಶ್ವರ ದೇವಾಲಯದ ಒಳ ಗೋಡೆಯ ಮೇಲೆ ಹಸಿರು ಬಣ್ಣದ ಮಸೀದಿ ಮತ್ತು ಕೆಂಪು ಬಣ್ಣದ ಶಿಲುಬೆಯ ಚಿತ್ರಗಳು ಕಂಡುಬಂದಿದ್ದು, ಈ ಸಂಬಂಧ ಕೆ.ಆರ್. ನಗರ ಪೊಲೀಸರು ಕಲಾವಿದ ಹಾಗೂ ದೇವಾಲಯದ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ದೇವಾಲಯವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಸಾಮಾಜಿಕ ಜಾಲತಾಣವೊಂದರಲ್ಲಿ ಈ ಚಿತ್ರಗಳ ಕುರಿತ ಪೋಸ್ಟ್ ವೈರಲ್ ಆದ ನಂತರ ವಿಷಯ ಬೆಳಕಿಗೆ ಬಂದಿದೆ.

ಈ ಘಟನೆಯ ನಂತರ, ಕೆ.ಆರ್. ನಗರ ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ ಅವರು ಕಲಾವಿದ ಮತ್ತು ದೇವಾಲಯದ ವ್ಯವಸ್ಥಾಪಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಚಿತ್ರಗಳನ್ನು ಬಿಡಿಸಿದ ಸಂದರ್ಭಗಳ ಬಗ್ಗೆ ತನಿಖೆ ನಡೆಸಲಿರುವ ಪೊಲೀಸರು, ದೂರಿನಲ್ಲಿ ಹೆಸರಿಸಲಾದ ವ್ಯಕ್ತಿಗಳ ಪಾತ್ರವೇನು ಎಂಬುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ.

ಚಿತ್ರಗಳ ಬಗ್ಗೆ ಮಾಹಿತಿ ಪಡೆದ ನಂತರ ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ತಹಸೀಲ್ದಾರ್ ಸುರೇಂದ್ರಮೂರ್ತಿ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಅವರು ಹೇಳಿದರು.

Screengrabs of the paintings on the inner walls of the temple
ಮಂಡ್ಯ: ಶ್ರೀರಂಗನಾಥ ದೇವಾಲಯಕ್ಕೆ ಕಾಣಿಕೆಯಾಗಿ 66 ಲಕ್ಷ ರೂ ಬೆಲೆಯ 'ಬಂಗಾರದ ಕಳಶ' ಕೊಟ್ಟ ಉದ್ಯಮಿ!ಯಾರಿದು?

ವಿಷಯ ತಿಳಿದ ಕೂಡಲೇ ನಾವು ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದೆವು. ದೇವಾಲಯದ ಗೋಡೆಯನ್ನು ಮೊದಲಿನ ಸ್ಥಿತಿಗೆ ತರಲು, ಆ ಎರಡೂ ಚಿತ್ರಗಳನ್ನು ತಕ್ಷಣವೇ ಅಳಿಸಿಹಾಕಲಾಯಿತು, ಎಂದು ಸುರೇಂದ್ರಮೂರ್ತಿ ತಿಳಿಸಿದರು.

ಈ ಪ್ರಕರಣವು ದೇವಾಲಯದ ಗೋಡೆಯ ಮೇಲಿನ ಚಿತ್ರಗಳ ಕುರಿತು ತನಿಖೆಗೆ ಎಡೆಮಾಡಿಕೊಟ್ಟಿದೆ. ಈ ಚಿತ್ರಗಳು ಹೇಗೆ ಬಂದವು ಮತ್ತು ದೇವಾಲಯದ ಆವರಣದ ಮೇಲ್ವಿಚಾರಣೆಯಲ್ಲಿ ಏನಾದರೂ ಲೋಪಗಳು ನಡೆದಿವೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com