ಬೆಂಗಳೂರು: 100 ರೂಪಾಯಿಗಾಗಿ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ!

ಹಣ ಇಲ್ಲ ಎಂದು ಹೇಳಿದ್ದರಿಂದ, ಆರೋಪಿಯು ತನ್ನ ಬಳಿಯಿದ್ದ ಚಾಕುವಿನಿಂದ ದಿನಕರನ್ ಅವರ ಎಡ ಕೆನ್ನೆಯ ಮೇಲೆ ಮತ್ತು ಎಡಗೈಯ ಮೇಲೆ ಗಾಯಗೊಳಿಸಿದನು. ನಂತರ, ಅವರ ತಲೆಯನ್ನು ಬಗ್ಗಿಸಿ, ಕತ್ತಿಯಿಂದ ಕುತ್ತಿಗೆಯ ಹಿಂಭಾಗಕ್ಕೆ ನಿರ್ದಯವಾಗಿ ಹಲ್ಲೆ ನಡೆಸಿದನು.
file image
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: 100 ರೂಪಾಯಿ ನೀಡಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಹಗಲಲ್ಲೇ ಕೊಲೆ ಮಾಡಿದ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 25,000 ರೂಪಾಯಿ ದಂಡ ವಿಧಿಸಿದೆ.

100 ರೂಪಾಯಿ ನೀಡಲು ನಿರಾಕರಿಸಿದ್ದಕ್ಕಾಗಿ ದಿನಾಕರನ್ ಎಂಬುವವರನ್ನು ಕೊಲೆ ಮಾಡಿದ ಆರೋಪದ ಮೇಲೆ ವೀರಮಣಿಕಂಠ (ಅಲಿಯಾಸ್ ವಿಜಯ್, ವಿಜಿ ಅಥವಾ ಪಾಂಬು) ಎಂಬಾತನನ್ನು ದೋಷಿ ಎಂದು ಪರಿಗಣಿಸಲಾಗಿದೆ.

ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. 2018ರ ಜುಲೈ 17ರ ಸಂಜೆ 5 ಗಂಟೆ ಸುಮಾರಿಗೆ, ಶಾಕಾಂಬರಿ ನಗರದ ಅಂಬೇಡ್ಕರ್ ರಸ್ತೆಯ ಮೂಲಕ ದಿನಕರನ್ (34) ರಾಜರಾಜೇಶ್ವರಿ ಕೊಳೆಗೇರಿ ಪ್ರದೇಶದ ಕಡೆಗೆ ಹೋಗುತ್ತಿದ್ದರು. ಆಗ ವೀರಮಣಿಕಂಠ ಎಂಬಾತ ದಿನಕರನ್ ಬಳಿ 100 ರೂಪಾಯಿ ಕೇಳಿದನು.

ಹಣ ಇಲ್ಲ ಎಂದು ಹೇಳಿದ್ದರಿಂದ, ಆರೋಪಿಯು ತನ್ನ ಬಳಿಯಿದ್ದ ಚಾಕುವಿನಿಂದ ದಿನಕರನ್ ಅವರ ಎಡ ಕೆನ್ನೆಯ ಮೇಲೆ ಮತ್ತು ಎಡಗೈಯ ಮೇಲೆ ಗಾಯಗೊಳಿಸಿದನು. ನಂತರ, ಅವರ ತಲೆಯನ್ನು ಬಾಗುವಂತೆ ಹಿಡಿದು, ಕತ್ತಿಯಿಂದ ಕುತ್ತಿಗೆಯ ಹಿಂಭಾಗಕ್ಕೆ ನಿರ್ದಯವಾಗಿ ಹಲ್ಲೆ ನಡೆಸಿದನು.

file image
ಮೈಸೂರು: ಬಲೂನ್ ಮಾರುತ್ತಿದ್ದ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ-ಕೊಲೆ ಪ್ರಕರಣ; ಕಾಮುಕನಿಗೆ ಗಲ್ಲು ಶಿಕ್ಷೆ..!

ಗಾಯಗೊಂಡ ದಿನಾಕರನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಬೆಂಗಳೂರಿನ 65ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಎನ್. ಕಲ್ಕಾನಿ ಅವರು, ವೀರಮಣಿಕಂಠ ಹಣಕ್ಕಾಗಿ ಜನರನ್ನು ಪೀಡಿಸುತ್ತಿದ್ದನೆಂದೂ, ಹಣ ನೀಡಲು ನಿರಾಕರಿಸಿದಾಗ ಅವರ ಮೇಲೆ ಹಲ್ಲೆ ನಡೆಸುತ್ತಿದ್ದನೆಂದೂ ಅಭಿಪ್ರಾಯಪಟ್ಟರು.

ಐಪಿಸಿ (IPC) ಸೆಕ್ಷನ್ 302ರ ಅಡಿಯಲ್ಲಿನ ಅಪರಾಧಕ್ಕೆ ಸಂಬಂಧಿಸಿದಂತೆ, ಆರೋಪಿಯ ವಿರುದ್ಧದ ಸಾಕ್ಷ್ಯಾಧಾರಗಳನ್ನು ಒದಗಿಸುವ ಮೂಲಕ ಸರ್ಕಾರಿ ಅಭಿಯೋಜಕರು ಪ್ರಕರಣವನ್ನು ಸಾಬೀತುಪಡಿಸಿದ್ದಾರೆ ಎಂದು ನ್ಯಾಯಾಧೀಶರು ತಿಳಿಸಿದರು.

ಇದೇ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ವೀರಮಣಿಕಂಠನ ತಾಯಿ ಗಾಂಧಿ ಅವರ ವಿರುದ್ಧ ಐಪಿಸಿ ಸೆಕ್ಷನ್ 201ರ ಅಡಿಯಲ್ಲಿನ ಆರೋಪವನ್ನು ಸಾಬೀತುಪಡಿಸಲು ಅಭಿಯೋಜಕರಿಗೆ ಸಾಧ್ಯವಾಗಲಿಲ್ಲ. ರಕ್ತಸಿಕ್ತವಾಗಿದ್ದ ಸ್ಥಳವನ್ನು ನೀರಿನಿಂದ ಸ್ವಚ್ಛಗೊಳಿಸುವ ಮೂಲಕ ಸಾಕ್ಷ್ಯವನ್ನು ನಾಶಪಡಿಸಲು ಅಥವಾ ಬದಲಾಯಿಸಲು ಪ್ರಯತ್ನಿಸಿದ ಆರೋಪದಿಂದ ನ್ಯಾಯಾಲಯವು ಅವರನ್ನು ದೋಷಮುಕ್ತಗೊಳಿಸಿತು.

ಆರೋಪಿಯು ಸಂತ್ರಸ್ತರ ಪತ್ನಿಗೆ 25,000 ರೂಪಾಯಿ ದಂಡದ ಹಣವನ್ನು ಪಾವತಿಸಬೇಕೆಂದು ನ್ಯಾಯಾಲಯ ಆದೇಶಿಸಿತು. ಅಲ್ಲದೆ, ಸಂತ್ರಸ್ತನ ಪತ್ನಿಯ ಜೀವನೋಪಾಯಕ್ಕಾಗಿ, ಸಿಆರ್‌ಪಿಸಿ (CrPC) ಸೆಕ್ಷನ್ 357ರ ಅಡಿಯಲ್ಲಿ ಪರಿಹಾರವನ್ನು ಒದಗಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com