Video: 'ಅತ್ಯಾಚಾರ ನಿಲ್ಲಿಸಿ, ಮಹಿಳೆಯರನ್ನು ಗೌರವಿಸಿ'; ಕೊಡಗಿನ ದಸರಾ ಮೆರವಣಿಗೆಯಲ್ಲಿ ಮಹಿಳಾ ಸುರಕ್ಷತೆಗೆ ಧ್ವನಿ, ವಿಶೇಷ ಅಭಿಯಾನ

ಅಲ್ಲದೆ, ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ಆಗ್ರಹವನ್ನೂ ವ್ಯಕ್ತಪಡಿಸಲಾಯಿತು.
Strong Message on Women’s Safety at Kodagu Dasara Procession
ಕೊಡಗು ದಸರಾ ಮೆರವಣಿಗೆಯಲ್ಲಿ ಮಹಿಳಾ ಸುರಕ್ಷತೆ ಕುರಿತು ಅಭಿಯಾನ
Updated on: 

ಕೊಡಗು: ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಮಹಿಳಾ ಸುರಕ್ಷತೆ ಕುರಿತ ವಿಶೇಷ ಅಭಿಯಾನವೊಂದು ನೆರೆದಿದ್ದವರ ಗಮನ ಸೆಳೆಯಿತು.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಬೇಕು, ಮಹಿಳೆಯರಿಗೆ ಸುರಕ್ಷತೆ ಒದಗಿಸಬೇಕು ಹಾಗೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಪ್ರಬಲ ಸಂದೇಶದ ಬರಹಗಳನ್ನು ಗೋಣಿಕೊಪ್ಪಲಿನಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು.

ಮೆರವಣಿಗೆಯಲ್ಲಿ 'Stop Rape, Respect Women' (ಅತ್ಯಾಚಾರ ನಿಲ್ಲಿಸಿ, ಮಹಿಳೆಯರನ್ನು ಗೌರವಿಸಿ) ಎಂಬ ಸಂದೇಶವನ್ನು ಪ್ರದರ್ಶಿಸುವ ಮೂಲಕ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲಾಯಿತು.

Strong Message on Women’s Safety at Kodagu Dasara Procession
ಸ್ಟಿಂಗ್ ಆಪರೇಷನ್: ರಾಕೇಶ್ ಶೆಟ್ಟಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು!

ಅಲ್ಲದೆ, ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ಆಗ್ರಹವನ್ನೂ ವ್ಯಕ್ತಪಡಿಸಲಾಯಿತು.

ಮಹಿಳೆಯರ ಸುರಕ್ಷತೆ ಖಚಿತಪಡಿಸುವುದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಅಪರಾಧಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಅಗತ್ಯವನ್ನು ಈ ಅಭಿಯಾನ ಒತ್ತಿಹೇಳಿತು.

ಗೋಣಿಕೊಪ್ಪಲಿನ ದಸರಾ ಮೆರವಣಿಗೆಯಲ್ಲಿ ಪ್ರದರ್ಶಿಸಲಾದ ಈ ಸಂದೇಶ ಸಾರ್ವಜನಿಕರ ಗಮನ ಸೆಳೆಯುವ ಮೂಲಕ ಮಹಿಳೆಯರ ಸುರಕ್ಷತೆ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧದ ಹೋರಾಟವನ್ನು ಮುನ್ನೆಲೆಗೆ ತಂದಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com