ಮಾತೃಭಾಷೆ ಕನ್ನಡ ಅಂದ್ರೆ ಕೆಲಸ ಕೊಡಲ್ಲ, ಬೆಂಗಳೂರಿನ ಐಟಿ ಕಂಪನಿಗೆ ಕನ್ನಡ ಬೇಡ್ವಂತೆ: ವಿಡಿಯೋ ಮೂಲಕ ನೋವು ಹೇಳಿಕೊಂಡ ಯುವತಿ!

ಬೆಂಗಳೂರಿನ ಐಟಿ ಕಂಪನಿಯಲ್ಲಿ ಕನ್ನಡ ಭಾಷೆಗೆ ಅವಮಾನ ಮಾಡಿದ ಆರೋಪ ಕೇಳಿಬಂದಿದ್ದು, ರೆಸ್ಯುಮ್‌ನಲ್ಲಿ ಮಾತೃಭಾಷೆ ಕನ್ನಡ ಅಂತ ಬರೆದರೆ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಯುವತಿಯೊಬ್ಬರು ಆರೋಪಿಸಿದ್ದಾರೆ.
Bengaluru's IT Company Rejects Kannadigas Resume
ವಿಡಿಯೋ ಮೂಲಕ ನೋವು ಹೇಳಿಕೊಂಡ ಯುವತಿ
Updated on: 

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಮಾತೃಭಾಷೆ ಕನ್ನಡ ಅಂದ್ರೆ ಕೆಲಸ ಕೊಡಲ್ಲ ಎಂದು ಆರೋಪಿಸಿ ಯುವತಿಯೊಬ್ಬರು ವಿಡಿಯೋ ಮೂಲಕ ತಮ್ಮ ನೋವು ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಐಟಿ ಕಂಪನಿಯಲ್ಲಿ ಕನ್ನಡ ಭಾಷೆಗೆ ಅವಮಾನ ಮಾಡಿದ ಆರೋಪ ಕೇಳಿಬಂದಿದ್ದು, ರೆಸ್ಯುಮ್‌ನಲ್ಲಿ ಮಾತೃಭಾಷೆ ಕನ್ನಡ ಅಂತ ಬರೆದರೆ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಯುವತಿಯೊಬ್ಬರು ಆರೋಪಿಸಿದ್ದಾರೆ.

Esthenos technologies pvt. ltdನಲ್ಲಿ ತಮಿಳು, ತೆಲುಗು ಭಾಷೆಗೆ ಮಾನ್ಯತೆ ನೀಡಲಾಗಿದೆ. ಆದರೆ ಕನ್ನಡಕ್ಕೆ ಅಪಮಾನ ಮಾಡಲಾಗಿದೆ. ರೆಸ್ಯೂಮ್‌ನಲ್ಲಿ ಮಾತೃಭಾಷೆ ಕನ್ನಡ ಅಂತ ಇದ್ದರೆ ಇಂಟರ್‌ವ್ಯೂನಲ್ಲಿ ರಿಜೆಕ್ಟ್‌ ಮಾಡುತ್ತಾರೆ ಎಂದು ಯುವತಿ ಆರೋಪಿಸಿದ್ದಾರೆ.

Bengaluru's IT Company Rejects Kannadigas Resume
ಬೆಂಗಳೂರು: ಹೃದಯಾಘಾತದಿಂದ ವಕೀಲ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಬಾಡಿಗೆ ವಿಚಾರಕ್ಕೆ ಆಟೋ ಚಾಲಕನಿಂದ ಭೀಕರ ಹತ್ಯೆ!

ಇನ್ನು ಕನ್ನಡ ವಿರೋಧಿ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ, ಕನ್ನಡಕ್ಕಾದ ಅಪಮಾನದ ಬಗ್ಗೆ ವಿಡಿಯೋ ಮೂಲಕ ಯುವತಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂಟರ್‌ವ್ಯೂ ಅನ್ನು ನಮ್ಮ ಬೆಂಗಳೂರಿನ ಕಾಲೇಜುಗಳಲ್ಲಿ ಕಂಡಕ್ಟ್ ಮಾಡ್ತಿಲ್ಲ. ಕಡಿಮೆ ಸ್ಯಾಲರಿಗೆ ಬರ್ತಾರೆ ಅಂತ ಬೇರೆ ಕಡೆಯಿಂದ ಕರ್ಕೊಂಡು ಬರ್ತಾರೆ. ಇದರಿಂದ ನಮಗೆ ಅವಕಾಶ ಸಿಗ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com