ಚಿರತೆ ರಕ್ಷಣೆಗೆ ಹೋದ ಅರಣ್ಯ ಇಲಾಖೆ ವೈದ್ಯರ ಮೇಲೆ ಹಲ್ಲೆ: 15 ಮಂದಿ ವಿರುದ್ಧ FIR

ಗ್ರಾಮಕ್ಕೆ ನುಗ್ಗಿದ್ದ ಚಿರತೆ ಕೋಳಿಗಳನ್ನು ಬೇಟೆಯಾಡಲು ಬಂದಿತ್ತು ಎನ್ನಲಾಗಿದೆ. ಈ ವೇಳೆ ನಾಯಿಗಳು ಅದನ್ನು ಅಟ್ಟಿಸಿಕೊಂಡು ಹೋಗಿದ್ದರಿಂದ ಚಿರತೆ ತೆಂಗಿನ ಮರ ಏರಿತ್ತು.
Attackers identified through drone images
ತುಮಕೂರಿನಲ್ಲಿ ಚಿರತೆ ಆತಂಕದ ನಡುವೆ ಗ್ರಾಮಸ್ಥರಿಂದ ಗಲಾಟೆ
Updated on: 

ತುಮಕೂರು: ಚಿರತೆ ರಕ್ಷಣಾ ಕಾರ್ಯಾಚರಣೆ ವೇಳೆ ವನ್ಯಜೀವಿ ವೈದ್ಯರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ತುಮಕೂರು ಜಿಲ್ಲೆಯ ತಿಮ್ಮಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ವೈದ್ಯ ಡಾ. ಪ್ರಯಾಗ್‌ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಕ್ಕೆ ನುಗ್ಗಿದ್ದ ಚಿರತೆ ಕೋಳಿಗಳನ್ನು ಬೇಟೆಯಾಡಲು ಬಂದಿತ್ತು ಎನ್ನಲಾಗಿದೆ.

ಈ ವೇಳೆ ನಾಯಿಗಳು ಅದನ್ನು ಅಟ್ಟಿಸಿಕೊಂಡು ಹೋಗಿದ್ದರಿಂದ ಚಿರತೆ ತೆಂಗಿನ ಮರ ಏರಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಮರುದಿನ ಬೆಳಗ್ಗೆ ಗ್ರಾಮಕ್ಕೆ ತೆರಳಿ ಚಿರತೆಯನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದ್ದರು.

ಆದರೆ, ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳದಿಂದ ದೂರ ಸರಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಹಲವು ಬಾರಿ ಮನವಿ ಮಾಡಿದರೂ ಗ್ರಾಮಸ್ಥರು ಅಲ್ಲಿಂದ ತೆರಳಲು ನಿರಾಕರಿಸಿದರು ಎನ್ನಲಾಗಿದೆ.

Attackers identified through drone images
ತೆಂಗಿನ ಮರದ ಮೇಲೆ ಏರಿ ಚಿರತೆ ವಿಶ್ರಾಂತಿ: ನಾಯಿ, ಮನುಷ್ಯರ ಕಾಟ ತಾಳಲಾರದೇ ಮತ್ತೆ ಕಾಡಿನತ್ತ ಓಟ! Video

ಸಿಬ್ಬಂದಿ ಮೇಲೆ ಗ್ರಾಮಸ್ಥರ ಹಲ್ಲೆ

ಚಿರತೆಯನ್ನು ತಕ್ಷಣವೇ ಸೆರೆಹಿಡಿಯಬೇಕು ಎಂದು ಪಟ್ಟು ಹಿಡಿದ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ವನ್ಯಜೀವಿಗಳಿಗೆ ಗಾಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ವಿಚಾರವಾಗಿ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಘರ್ಷಣೆಗೆ ತಿರುಗಿತು. ಈ ವೇಳೆ ವನ್ಯಜೀವಿ ವೈದ್ಯ ಡಾ. ಪ್ರಯಾಗ್‌ ಅವರ ಮೇಲೆ ಹಲ್ಲೆ ನಡೆದಿದ್ದು, ಅವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗದ್ದಲದ ನಡುವೆ ಚಿರತೆ ಪರಾರಿ

ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂದಿ ನಡುವೆ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ತೆಂಗಿನ ಮರದ ಮೇಲಿದ್ದ ಚಿರತೆ ಕೆಳಕ್ಕೆ ಹಾರಿ ಸಮೀಪದ ಅರಣ್ಯದ ಕಡೆಗೆ ಓಡಿಹೋಯಿತು. ಹೀಗಾಗಿ, ಚಿರತೆಯನ್ನು ರಕ್ಷಿಸಿ ಸೆರೆಹಿಡಿಯುವ ಕಾರ್ಯಾಚರಣೆ ಪೂರ್ಣಗೊಳ್ಳಲಿಲ್ಲ. ಘಟನೆಯ ಬಳಿಕ ಪೊಲೀಸರು ಡ್ರೋನ್‌ ದೃಶ್ಯಾವಳಿಗಳನ್ನು ಪರಿಶೀಲಿಸಿ, ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಗ್ರಾಮಸ್ಥರನ್ನು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ 15 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಅನಾಹುತ ತಪ್ಪಿದೆ ಎಂದ ಅಧಿಕಾರಿ

“ಚಿರತೆಯನ್ನು ಹಿಡಿಯಬೇಕೆಂದು ಸಾರ್ವಜನಿಕರು ಆತುರ ತೋರುತ್ತಿದ್ದರು. ಇದರಿಂದ ರಕ್ಷಣಾ ತಂಡದ ಕಾರ್ಯಾಚರಣೆಗೆ ಅಡ್ಡಿಯಾಗುವುದರ ಜತೆಗೆ, ತೆಂಗಿನ ಮರದ ಮೇಲಿದ್ದ ಚಿರತೆಗೂ ತೊಂದರೆಯಾಗುತ್ತಿತ್ತು. ಗ್ರಾಮಸ್ಥರು ಸಿಬ್ಬಂದಿಗೆ ಬೆದರಿಕೆ ಹಾಕಿದರು. ಈ ಸಂದರ್ಭದಲ್ಲಿ ಘರ್ಷಣೆ ಸಂಭವಿಸಿತು” ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com