20 ವರ್ಷ ಬಿಟ್ಟು ನಾನು ಅಧಿಕಾರಕ್ಕೆ ಬರ್ತೀನಿ: SC,ST OBC ಎಲ್ಲರಿಗೂ 2BHK ಮನೆ ಗ್ಯಾರಂಟಿ: ಪ್ರದೀಪ್ ಈಶ್ವರ್ ಶಪಥ

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಮ್ಮ ಜನರಿಗೆ 2BHK ಮನೆಗಳನ್ನು ಕಟ್ಟಿಕೊಡುವುದಾಗಿ ಶಪಥ ಮಾಡಿದ್ದಾರೆ.
Pradeep Eshwar
ಪ್ರದೀಪ್ ಈಶ್ವರ್
Updated on: 

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಮ್ಮ ಜನರಿಗೆ 2BHK ಮನೆಗಳನ್ನು ಕಟ್ಟಿಕೊಡುವುದಾಗಿ ಶಪಥ ಮಾಡಿದ್ದಾರೆ.

15-20 ವರ್ಷಗಳ ನಂತರ ನಾನು ಪವರ್ ಗೆ ಬರ್ತೀನಿ, ಆಗ SC,ST OBC ಎಲ್ಲರಿಗೂ 2BHK ಮನೆ ಕಟ್ಟಿಸಿಕೊಡ್ತೀನಿ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ನಾನು ಎಲ್ಲವನ್ನು ಲೆಕ್ಕ ಹಾಕಿ ಇಟ್ಟಿದ್ದೀನಿ. ರಾಜ್ಯದಲ್ಲಿ ಒಂದೂವರೆ ಕೋಟಿ ಮನೆಗಳು ಬೇಕು. ಎಲ್ಲಾ ಮನೆಗಳ ನಿರ್ಮಾಣಕ್ಕೆ 9 ಲಕ್ಷ ಕೋಟಿ ಬೇಕಾಗುತ್ತದೆ. ನಾಲ್ಕು ಬ್ಯಾಂಕುಗಳಿಂದ ಸಾಲ ತಂದು ಮನೆಗಳನ್ನು ಕಟ್ಟಿಕೊಡುತ್ತೇನೆ ಇದನ್ನು ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.

Pradeep Eshwar
ಸಿಎಂ ಶಿವಕುಮಾರ್, ಝೈದ್ ಖಾನ್‌ಗೆ ಅವಮಾನ: ಧನ್ವೀರ್ ವಿರುದ್ಧ NSUI ದೂರು; ಅಭಿಮಾನಿಗಳಿಂದ ಪ್ರತಿಭಟನೆ!

ದುಡ್ಡಿದ್ರೆ ಮಾತ್ರ ಪ್ರಧಾನಿ, ಮುಖ್ಯಮಂತ್ರಿ ಆಗುವುದಾದರೇ ಮುಕೇಶ್ ಅಂಬಾನಿ, ಗೌತಮ್ ಅದಾನಿ ಪ್ರಧಾನಿ, ಸಿಎಂ ಆಗಬೇಕಿತ್ತು. ಆದರೆ ತಾಕತ್ತಿರೋನು ಸಿಎಂ, ಪಿಎಂ ಆಗ್ತಾರೆ. ತಾಕತ್ತಿರೋದಕ್ಕೆ ನಮ್ಮ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಿಎಂ ಆಗಿರೋದು. ಮುಂದೆ ನಾನು ಅದೇ ರೀತಿ ಪವರ್ ಗೆ ಬರ್ತಿನಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com