ಪ್ರದೀಪ್ ಈಶ್ವರ್

ನಮ್ಮ ಮನೆಗೆ 'ಲಕ್ಷ್ಮಿ' ಆಗಮಿಸಿದ್ದಾಳೆ: ಹೆಣ್ಣು ಮಗುವಿಗೆ ತಂದೆಯಾದ ಶಾಸಕ ಪ್ರದೀಪ್ ಈಶ್ವರ್
ದೇವರ ಆಶೀರ್ವಾದದಿಂದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮಗುವನ್ನು ಹಿಡಿದುಕೊಂಡಿರುವ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.

ಕಾಲು ಮುರಿತಕ್ಕೊಳಗಾಗಿ 6 ವಾರ ರೆಸ್ಟ್ ನಲ್ಲಿರುವ ಶಾಸಕ ಪ್ರದೀಪ್ ಈಶ್ವರ್
ಕೆಲವು ದಿನಗಳ ಹಿಂದೆ ಬಿದ್ದು ಗಂಭೀರವಾಗಿ ಗಾಯವಾಗಿದ್ದು, ವೈದ್ಯರು 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ ಎಂದು ಫೋಟೋವನ್ನು ಸ್ವತಃ ಶಾಸಕರೇ ಹಂಚಿಕೊಂಡಿದ್ದಾರೆ.

20 ವರ್ಷ ಬಿಟ್ಟು ನಾನು ಅಧಿಕಾರಕ್ಕೆ ಬರ್ತೀನಿ; SC,ST OBC ಎಲ್ಲರಿಗೂ 2BHK ಮನೆ ಗ್ಯಾರಂಟಿ: ಪ್ರದೀಪ್ ಈಶ್ವರ್ ಶಪಥ
ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಮ್ಮ ಜನರಿಗೆ 2BHK ಮನೆಗಳನ್ನು ಕಟ್ಟಿಕೊಡುವುದಾಗಿ ಶಪಥ ಮಾಡಿದ್ದಾರೆ.

'ನಮ್ಮ ಊರಿಗೆ ನಮ್ಮ ಶಾಸಕರು' ಅಭಿಯಾನ; 302 ಹಳ್ಳಿಗಳಿಗೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್; ಜನರ ಸಮಸ್ಯೆಗಳಿಗೆ ಸ್ಪಂದನೆ..!
ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಲಾಗುತ್ತದೆ. ಈ ಮೂಲಕ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ.

ದಲಿತರು ದೇಶಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ, ಆ ಸಮುದಾಯದ ಸಚಿವರನ್ನು ತಡೆದದ್ದು ಖಂಡನೀಯ: ಪ್ರದೀಪ್ ಈಶ್ವರ್ ಆಕ್ರೋಶ
ಇದೀಗ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು, ದಲಿತ ಸಮುದಾಯದ ಮೂವರು ಸಚಿವರ ಪರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನೀನೇ ಬಾಸ್ ಅಂತ; ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ: MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದೆ. ನನ್ನ ಕ್ಷೇತ್ರಕ್ಕೆ ನಾನೇ ಬಾಸ್. ನನ್ನು ಕ್ಷೇತ್ರದಲ್ಲಿ ಯಾರೂ ಹಸ್ತಕ್ಷೇಪ ಮಾಡುವುದು ಬೇಡ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರದ್ದು ಎನ್ನಲಾದ ಭಾಷಣದ...

'ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ': ಎಂ.ಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ
ಸ್ವಪಕ್ಷದ ಶಾಸಕ ಎಂಸಿ ಸುಧಾಕರ್ ಅವರ ವಿರುದ್ಧ ಗುರುವಾರ ಮತ್ತೆ ತೀವ್ರ ವಾಗ್ದಾಳಿ ನಡೆಸಿದ ಪ್ರದೀಶ್ ಈಶ್ವರ್ ಅವರು, "ಏನೇ ಆಗಲಿ Dictator, ನಿನ್ನ ವಿರುದ್ಧ ಸಮರ ನಿರಂತರ " ಎಂದು ಗುಡುಗಿದ್ದಾರೆ.

'ಎರಡು ತಲೆಯ ನಾಗರ ಹಾವನ್ನು ನೋಡಬೇಕೇ? ನಿಯ್ಯತ್ತಿಲ್ಲದ ನಾಯಿ ಎಂದು ಬೈದರೆ, ನಾಯಿಗೆ ಅವಮಾನ ಮಾಡಿದಂತೆ'
ತಾವು ಮೆಗಾಸ್ಟಾರ್ ತರ ಡೈಲಾಗ್ ಹೊಡ್ಕೊಂಡು ತಿಂದ ಮನೆಗೆ ದ್ರೋಹ ಬಗೆಯೋ ಕೆಲ್ಸ ಮಾಡ್ತಿರೋದನ್ನ ನೋಡಿದ್ರೆ "ಒಬ್ಬ ಜನ ಪ್ರತಿನಿಧಿ ಹೇಗಿರಬಾರದು?" ಅನ್ನೋದಕ್ಕೆ ಉತ್ತರವಾಗಿ ನಿನ್ನನ್ನೇ ತೋರಿಸಬಹುದು.

'ರಾಜಕೀಯವಾಗಿ ಗೆಲ್ಲೋ ಯೋಗ್ಯತೆ ಇಲ್ಲ, ರಿಯಲ್ ಎಸ್ಟೇಟ್ ಮಾಡು ಉದ್ದಾರವಾದ್ರೂ ಆಗ್ತೀಯ': ರಕ್ಷಾ ರಾಮಯ್ಯಗೆ ಪ್ರದೀಪ್ ಈಶ್ವರ್ ಟಾಂಗ್
ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಟಿಕೆಟ್ ಕೊಟ್ಟಾಗ ಗೆಲ್ಲುವ ಯೋಗ್ಯತೆ ಇಲ್ಲದಿರುವ ವ್ಯಕ್ತಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಪದೇ ಪದೇ ಕೈ ಹಾಕಿ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷವನ್ನ ಹಾಳು ಮಾಡುತ್ತಿದ್ದಾನೆ.

