ರಾಜಮನೆತನದ ವಿರುದ್ಧ ಹೇಳಿಕೆ: ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಭುಗಿಲೆದ್ದ ತೀವ್ರ ಪ್ರತಿಭಟನೆ..!

ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿದಂತೆ ರಾಜಮನೆತನದ ವಿರುದ್ಧ ಪ್ರತಿಭಟನೆ ಕೈಬಿಡುವಂತೆ ಪ್ರಮೋದಾದೇವಿ ಒಡೆಯರ್ ವಿವಿಧ ಸಂಘಟನೆಗಳಿಗೆ ಮನವಿ ಮಾಡಿದ್ದರೂ, ಹೋರಾಟ ಸಮಿತಿ ಪ್ರತಿಭಟನೆ ಮುಂದುವರಿಸಿದೆ.
Mysuru Dasara-Dr Yathindra Siddaramaiah
ದಸರಾ ಉದ್ಘಾಟನಾ ವೇದಿಕೆಯಲ್ಲಿ ಯತೀಂದ್ರ ಸಿದ್ದರಾಮಯ್ಯ
Updated on: 

ಮೈಸೂರು: ಹಿಂದಿನ ರಾಜಮನೆತನ ಹಾಗೂ ಮೈಸೂರು ಅರಮನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯನ್ನು ಖಂಡಿಸಿ, 'ಅರಮನೆ ಉಳಿಸಿ ಹೋರಾಟ ಸಮಿತಿ' ಸದಸ್ಯರು ಗುರುವಾರ ಬೆಳಗ್ಗೆ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿಭಟನೆ ನಡೆಸಿದರು.

ದಸರಾ ಆಚರಣೆ ಹಾಗೂ ಮೆರವಣಿಗೆಯಲ್ಲಿ ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದ ಪ್ರಮೋದಾದೇವಿ ಒಡೆಯರ್ ಅವರ ಕುರಿತು ಸಚಿವ ಯತೀಂದ್ರ ಅವರು ಹಗುರವಾಗಿ ಮಾತನಾಡಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿದಂತೆ ರಾಜಮನೆತನದ ವಿರುದ್ಧ ಪ್ರತಿಭಟನೆ ಕೈಬಿಡುವಂತೆ ಪ್ರಮೋದಾದೇವಿ ಒಡೆಯರ್ ವಿವಿಧ ಸಂಘಟನೆಗಳಿಗೆ ಮನವಿ ಮಾಡಿದ್ದರೂ, ಹೋರಾಟ ಸಮಿತಿ ಪ್ರತಿಭಟನೆ ಮುಂದುವರಿಸಿದೆ. ರಾಜಮನೆತನಕ್ಕೆ ಬೆಂಬಲ ಸೂಚಿಸಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿಗರು ಕೂಡ ಪಾಲ್ಗೊಂಡಿದ್ದರು.

ದೇವಸ್ಥಾನದ ಮುಂಭಾಗ 350ಕ್ಕೂ ಹೆಚ್ಚು ಜನರು ಜಮಾಯಿಸಿ, ಫಲಕಗಳನ್ನು ಹಿಡಿದು ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ರಾಜಮನೆತನದ ಕುರಿತು ನೀಡಿರುವ ಹೇಳಿಕೆಗೆ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

Mysuru Dasara-Dr Yathindra Siddaramaiah
ಆ 'ದೆಹಲಿ ಮಂತ್ರಿಯನ್ನು' ಜೈಲಿಗಟ್ಟಿ: ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಬೆನ್ನಲ್ಲೇ HDK ವಿರುದ್ಧ ಯತೀಂದ್ರ ಆಕ್ರೋಶ

ಇದೇ ವೇಳೆ ಪ್ರಮೋದಾದೇವಿ ಒಡೆಯರ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ತಾವು ನೀಡಿದ್ದ ಹೇಳಿಕೆಯನ್ನು ಯತೀಂದ್ರ ಸಮರ್ಥಿಸಿಕೊಂಡಿದ್ದು, ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಶಾಸಕ ಎಲ್. ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರಗಳು ಹಿಂದೆಯೂ ಹಲವು ಬಾರಿ ರಾಜಮನೆತನದ ವಿರುದ್ಧ ಹೇಳಿಕೆಗಳನ್ನು ನೀಡಿವೆ. ಇದಕ್ಕೆ ಮೈಸೂರಿನ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X