ಜ್ಞಾನಭಾರತಿ ಬಳಿ ಸ್ಫೋಟಕ ರೀತಿಯ ವಸ್ತು ಪತ್ತೆ: ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ!

ಸುದ್ದಿ ತಿಳಿಯುತ್ತಿದ್ದಂತೆಯೇ ಬಾಂಬ್ ನಿಷ್ಕ್ರೀಯ ದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಜ್ಞಾನಭಾರತಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
A dynamite-type explosive
ಸ್ಫೋಟಕ ರೀತಿಯ ವಸ್ತು ಪತ್ತೆ
Updated on: 

ಬೆಂಗಳೂರು: ಪುಲಿಕೇಶಿನಗರದಲ್ಲಿ ಐಇಡಿ ಬ್ಲಾಸ್ಟ್ ಬಳಿಕ ಇದೀಗ ಜ್ಞಾನಭಾರತಿ ಬಳಿ ಸ್ಪೋಟಕ ರೀತಿಯ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಸೊಣ್ಣೇನಹಳ್ಳಿ ಸರ್ಕಲ್ ಬಳಿ ಬಂಡೆಗಳನ್ನು ಸ್ಫೋಟಿಸಲು ಬಳಸುವ ಡೈನಾಮೆಟ್ ರೀತಿಯ ಸ್ಫೋಟಕ ಮಾದರಿಯ ವಸ್ತು ಪತ್ತೆಯಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಬಾಂಬ್ ನಿಷ್ಕ್ರೀಯ ದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಜ್ಞಾನಭಾರತಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

A dynamite-type explosive
ಬೆಂಗಳೂರಿನಲ್ಲಿ ಐಇಡಿ ಸ್ಫೋಟ: ವೈಯಕ್ತಿಕ ದ್ವೇಷಕ್ಕೆ ಬಲಿಪಶು ಆದ ಉತ್ತರ ಪ್ರದೇಶದ ಪೇಂಟರ್!

ಕ್ವಾರಿಗೆ ಬಳಸುವ ಸ್ಫೋಟಕ ವಸ್ತು ಇದಾಗಿದೆ. ಈ ಸ್ಫೋಟಕ ವಸ್ತುವನ್ನು ಇಲ್ಲಿ ತಂದಿಟ್ಟವರು ಯಾರು ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚಿಗೆ ಪುಲಿಕೇಶಿನಗರದಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದರು.

ಅಕ್ಟೋಬರ್ 20 ರಂದು ಅಲ್ಲಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಪಾರ್ಸೆಲ್ ರೂಪದಲ್ಲಿದ್ದ ಟಾರ್ಚ್ ಬ್ಯಾಟರಿಯನ್ನು ಆನ್ ಮಾಡಲು ಹೋದಾಗ ಈ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್ ಮತ್ತು ಉತ್ತರ ಪ್ರದೇಶ ಮೂಲದ ಪೇಂಟರ್ ಸೂರಜ್ ಕುಮಾರ್ ಎಂಬ ಇಬ್ಬರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X