SIR ಅವಾಂತರ: ಜೀವಂತ ವ್ಯಕ್ತಿಯನ್ನು ಸಾಯಿಸಿದ ಚುನಾವಣಾ ಆಯೋಗ; ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಸರತ್ತು!

ಯಾವುದೇ ದಾಖಲೆ ಪುರಾವೆಗಳಿಲ್ಲದೆ ಅಂತಹ ವರ್ಗೀಕರಣವನ್ನು ಹೇಗೆ ಮಾಡಬಹುದು ಎಂದು ಅವರು ಪ್ರಶ್ನಿಸಿದರು. ನಾನು ಸತ್ತಿರುವುದಾಗಿ ಘೋಷಿಸಲು, ಅವರಿಗೆ ನನ್ನ ಮರಣ ಪ್ರಮಾಣಪತ್ರ ಬೇಕು.
Donald Joseph Rego
ಡೊನಾಲ್ಡ್ ಜೋಸೆಫ್ ರೇಗೊ
Updated on

ಮಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಚುನಾವಣಾ ಆಯೋಗವು ಮಂಗಳೂರು ನಿವಾಸಿ 61 ವರ್ಷದ ವ್ಯಕ್ತಿಯನ್ನು ಸತ್ತಿದ್ದಾರೆಂದು ತಪ್ಪಾಗಿ ಘೋಷಿಸಿದೆ, ಇದು ಮತದಾರರ ಪರಿಶೀಲನಾ ಪ್ರಕ್ರಿಯೆಯಲ್ಲಿನ ಸ್ಪಷ್ಟ ಲೋಪವನ್ನು ಬಹಿರಂಗಪಡಿಸಿದೆ.

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೈ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೊ ಅವರು ಆಗಸ್ಟ್ 24 ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರು ಇಲ್ಲದಿರುವುದನ್ನು ನೋಡಿದ್ದಾರೆ. ನಂತರ, ಅವರ ಹೆಸರನ್ನು ಗೈರುಹಾಜರಿ, ಸ್ಥಳಾಂತರಗೊಂಡ, ನಕಲು, ಸತ್ತ ಮತ್ತು ಇತರರು (ASDDO) ಪಟ್ಟಿಯ ಅಡಿಯಲ್ಲಿ ಹುಡುಕಾಡಿದ್ದಾರೆ. ಕೊನೆಗೆ "ಸತ್ತ" ವರ್ಗದಲ್ಲಿ ಸೇರಿಸಲಾಗಿದೆ ಎಂದು ಅವರು ತಿಳಿದುಬಂದಿದೆ.

ಈ ಬೆಳವಣಿಗೆಯು ರೆಗೊ ಅವರನ್ನು ಆಘಾತಗೊಳಿಸಿತು, ಯಾವುದೇ ದಾಖಲೆ ಪುರಾವೆಗಳಿಲ್ಲದೆ ಅಂತಹ ವರ್ಗೀಕರಣವನ್ನು ಹೇಗೆ ಮಾಡಬಹುದು ಎಂದು ಅವರು ಪ್ರಶ್ನಿಸಿದರು. ನಾನು ಸತ್ತಿರುವುದಾಗಿ ಘೋಷಿಸಲು, ಅವರಿಗೆ ನನ್ನ ಮರಣ ಪ್ರಮಾಣಪತ್ರ ಬೇಕು. ಅವರಿಗೆ ನನ್ನ ಮರಣ ಪ್ರಮಾಣಪತ್ರವನ್ನು ಯಾರು ನೀಡಿದರು ಎಂದು ರೆಗೊ ಪ್ರಶ್ನಿಸಿದ್ದಾರೆ.

ದೋಷವನ್ನು ಕಂಡುಹಿಡಿದ ನಂತರ, ರೆಗೊ ತಮ್ಮ ಹೆಸರನ್ನು ಪುನಃಸ್ಥಾಪಿಸಲು ಬೂತ್ ಮಟ್ಟದ ಅಧಿಕಾರಿ (BLO) ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಅವರನ್ನು ಒಂದೆರಡು ಬಾರಿ ಭೇಟಿ ಮಾಡಿದ್ದಾರೆ.

Donald Joseph Rego
SIR: ರಾಜ್ಯದ 43.81 ಲಕ್ಷ ಮತದಾರರ ಸ್ಥಿತಿ ಅತಂತ್ರ; ಚುನಾವಣಾ ಆಯೋಗದಿಂದ ನೋಟಿಸ್!

ಅವರ ಪ್ರಕಾರ, ಅಧಿಕಾರಿಗಳು ತಪ್ಪಿನ ಜವಾಬ್ದಾರಿಯನ್ನು ಬೇರೆಯವರ ಮೇಲೆ ತೋರಿಸುತ್ತಿದ್ದಾರೆ. AERO BLO ಮೇಲೆ ದೂಷಿಸಿದರೆ, BLO SIR ಮೊಬೈಲ್ ಅಪ್ಲಿಕೇಶನ್ ಮೂಲಕ ಮತದಾರರ ವಿವರಗಳನ್ನು ಅಪ್‌ಲೋಡ್ ಮಾಡಿದ ಡೇಟಾ ಎಂಟ್ರಿ ಆಪರೇಟರ್ ಮಾಡಿರುವ ತಪ್ಪು ಎಂದಿದ್ದಾರೆ.

BLO ತಮ್ಮ ಎಣಿಕೆ ಫಾರ್ಮ್ ಅನ್ನು ಸಂಗ್ರಹಿಸಿ ಡೇಟಾ ಎಂಟ್ರಿಗಾಗಿ ಹಸ್ತಾಂತರಿಸಿದ್ದಾರೆ, ಆದರೆ ಅಪ್‌ಲೋಡ್ ಮಾಡಿದ ಮಾಹಿತಿಯು ಮೂಲ ದಾಖಲೆಗಳಿಗೆ ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಲು ವಿಫಲರಾಗಿದ್ದಾರೆ ಎಂದು ರೆಗೊ ಆರೋಪಿಸಿದ್ದಾರೆ.

"ಆ್ಯಪ್‌ನಲ್ಲಿ ನನ್ನನ್ನು ಸತ್ತಂತೆ ತೋರಿಸಿದ್ದರೆ, ಅರ್ಜಿಯನ್ನು ಅನುಮೋದಿಸುವ ಮೊದಲು BLO ಮರಣ ಪ್ರಮಾಣಪತ್ರವನ್ನು ನೀಡಲಾಗಿದೆಯೇ ಎಂದು ಪರಿಶೀಲಿಸಬೇಕಾಗಿತ್ತು" ಎಂದು ಅವರು ಹೇಳಿದರು. BLO ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ದೋಷವನ್ನು ಸರಿಪಡಿಸಲು ಕೋರಿ ರೇಗೊ ಚುನಾವಣಾ ಆಯೋಗಕ್ಕೆ ಆನ್‌ಲೈನ್ ದೂರು ಸಲ್ಲಿಸಿದ್ದಾರೆ. BLO ಸಲಹೆಯನ್ನು ಅನುಸರಿಸಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪುನಃಸ್ಥಾಪಿಸಲು ಅವರು ಪೋಷಕ ದಾಖಲೆಗಳೊಂದಿಗೆ ಫಾರ್ಮ್ 6 ಸಹ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ ಅವರು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿದ ನಂತರ ಯಾವುದೇ ಅರ್ಹ ಜೀವಂತ ಮತದಾರರನ್ನು ಫಾರ್ಮ್ 6 ಮೂಲಕ ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶವಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com