'ನಮಗೆ ಮೊಮ್ಮಗಳು ಹುಟ್ಟಿದಾಗ ನನ್ನ ಪತ್ನಿಗೆ ಬೇಸರವಾಯಿತು, ಮೊದಲ ಮಗು ಗಂಡು ಹುಟ್ಟಬೇಕು ಎಂಬ ಮನಃಸ್ಥಿತಿ ಏಕೆ'? : CM ಡಿ ಕೆ ಶಿವಕುಮಾರ್; Video

ಇಂದು ಬೆಂಗಳೂರಿನಲ್ಲಿ ಒಟ್ಟಿಗೆ ಬೆಳೆಯೋಣ' ಎಂಬ ಮಹಿಳಾ ಉದ್ಯಮಿಗಳ ಸಮ್ಮೇಳನದಲ್ಲಿ ಮಹಿಳೆಯರು ಆಯೋಜಿಸಿದ್ದ ಟುಗೆದರ್ ವಿ ಗ್ರೋ, ನಾವೆಲ್ಲರೂ ಒಟ್ಟಾಗಿ ಬೆಳೆಯೋಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
5th edition of “Together We Grow – International Women Entrepreneurship Day”, organised by the Ubuntu Consortium of Women Entrepreneurs Association
ಮಹಿಳಾ ಉದ್ಯಮಿಗಳ ಸಂಘದ ಉಬುಂಟು ಕನ್ಸಾರ್ಟಿಯಂ ಆಯೋಜಿಸಿರುವ “ಟುಗೆದರ್ ವಿ ಗ್ರೋ – ಅಂತಾರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನ” ಕಾರ್ಯಕ್ರಮದ 5ನೇ ಆವೃತ್ತಿಯನ್ನು ಉದ್ಘಾಟಿಸಿದ ಸಿಎಂ ಡಿ ಕೆ ಶಿವಕುಮಾರ್
Updated on

ಮಹಿಳೆಯರನ್ನು ನಾನೊಂದು ಪ್ರಶ್ನೆ ಕೇಳಬಯಸುತ್ತೇನೆ. ಸಮಾನತೆ, ಸ್ವಾವಲಂಬನೆ ಅಂತೆಲ್ಲ ಮಾತಾಡ್ತೀರಿ. ಆದರೆ ಮಗು ಹುಟ್ಟುವಾಗ ಮೊದಲು ಗಂಡು ಮಗು ಆಗಬೇಕೆಂದು ಬಯಸುತ್ತೀರಿ, ಏಕೆ ಹೀಗೆ ಈ ಮನೋಧರ್ಮ ಏಕೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಳಿದರು.

ಇಂದು ಬೆಂಗಳೂರಿನಲ್ಲಿ ಒಟ್ಟಿಗೆ ಬೆಳೆಯೋಣ' ಎಂಬ ಮಹಿಳಾ ಉದ್ಯಮಿಗಳ ಸಮ್ಮೇಳನದಲ್ಲಿ ಮಹಿಳೆಯರು ಆಯೋಜಿಸಿದ್ದ ಟುಗೆದರ್ ವಿ ಗ್ರೋ, ನಾವೆಲ್ಲರೂ ಒಟ್ಟಾಗಿ ಬೆಳೆಯೋಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅದರಲ್ಲಿ ಮಾತನಾಡುತ್ತಾ ಡಿ ಕೆ ಶಿವಕುಮಾರ್, ನನಗೂ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾರೆ, ಆದರೆ ನಾನೊಂದು ಪ್ರಶ್ನೆ ನಿಮ್ಮಲ್ಲಿ ಕೇಳಲು ಬಯಸುತ್ತೇನೆ. ಭಾರತದ ಪ್ರತಿ ಮೂಲೆಯಲ್ಲಿರುವ ಮಹಿಳೆಯರು ಮೊದಲು ಹುಟ್ಟುವ ಮಗು ಗಂಡು ಆಗಬೇಕು ಎಂದು ಏಕೆ ಬಯಸುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ, ನೀವು ನನಗೆ ಉತ್ತರ ಕೊಡಬೇಕು ಎಂದರು.

ಇತ್ತೀಚೆಗೆ ಅಂದರೆ ಮೇ 1ರಂದು ನನಗೂ ಮೊಮ್ಮಗಳು ಹುಟ್ಟಿದಳು, ನನಗೆ ಬಹಳ ಖುಷಿ ಆಯ್ತು. ಆದರೆ ನನ್ನ ಪತ್ನಿಗೆ ಮೊದಲ ಮಗು ಗಂಡು ಮಗುವಾಗಬೇಕಿತ್ತು ಎಂದು ಬೇಸರವಾಯಿತು, ಆಗ ನಾನೆಂದೆ, ಏಕೆ ಆ ರೀತಿ ಯೋಚನೆ ಮಾಡುವುದು? ನನ್ನ ಮಗಳು ಐಶ್ವರ್ಯ ಬೆಳೆದಿರುವ ರೀತಿ ಇಂದು ಆಕೆ ಮಾಡುತ್ತಿರುವ ಕೆಲಸ ನೋಡಿ ನನಗೆ ಬಹಳ ಹೆಮ್ಮೆಯಾಗುತ್ತಿದೆ, ಅವಳು ಜೀವನವನ್ನು ನಿಭಾಯಿಸುತ್ತಿರುವ ರೀತಿ, ಮಾಡುತ್ತಿರುವ ಕೆಲಸ- ಸಾಧನೆ ನೋಡಿ ನನಗೆ ನಿಜಕ್ಕೂ ಖುಷಿಯಾಗುತ್ತಿದೆ. ಹೆಣ್ಣು ಮಕ್ಕಳ ಬಗೆಗಿನ ನನ್ನ ಪ್ರೀತಿಯನ್ನು ನೂರ್ಮಡಿ ಮಾಡಿದೆ, ನಾನು ನಿಮ್ಮನ್ನು ನಿರುತ್ಸಾಹಗೊಳಿಸುತ್ತಿಲ್ಲ, ಆದರೆ ಕುತೂಹಲದಿಂದ ಕೇಳುತ್ತಿದ್ದೇನೆ ಎಂದು ನಗುತ್ತಾ ಮುಖ್ಯಮಂತ್ರಿಗಳು ನೆರೆದಿದ್ದ ಮಹಿಳಾ ವೃಂದವನ್ನು ಪ್ರಶ್ನಿಸಿದರು.

ಭಾರತೀಯರಲ್ಲಿ ಇಂದಿಗೂ ಆ ಮನೋಧರ್ಮ ಏಕಿದೆ ಎಂದು ಗೊತ್ತಾಗುತ್ತಿಲ್ಲ, ನಮ್ಮಲ್ಲಿ ಮತ್ತು ಇಡೀ ವಿಶ್ವದಲ್ಲಿ ಅನೇಕ ಮಹಿಳಾ ನಾಯಕರು ಇದ್ದಾರೆ, ರಾಮಾಯಣದಲ್ಲಿ ರಾಮನಿಗಿಂತಲೂ ಸೀತೆ ತ್ಯಾಗ ಮಿಗಿಲು. ಮಹಾಭಾರತದಲ್ಲಿ ಕುಂತಿ ಪಾತ್ರ ದೊಡ್ಡದು. ಹೀಗಾಗಿ ನಿಮ್ಮ ನುಡಿ ನಡೆಯಲ್ಲೂ ಇರಲಿ, ಪೋಷಕರು ಹೆಣ್ಣುಮಕ್ಕಳಿಗೆ ಇನ್ನಷ್ಟು ಧೈರ್ಯ, ಮಾನಸಿಕ ಸ್ಥೈರ್ಯ, ಶಿಸ್ತು ಕಲಿಸಬೇಕು ಎಂದರು.

ಮಹಿಳೆಯರು ಸದಾ ಸೃಜನಶೀಲರು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರು ಹಾಗೂ ನಿರ್ಧಾರ ಕೈಗೊಳ್ಳುವವರಾಗಿದ್ದಾರೆ. ಕುಟುಂಬ ಮತ್ತು ಸಂಪನ್ಮೂಲಗಳನ್ನು ನಿರ್ವಹಿಸುವುದರಿಂದ ಹಿಡಿದು ಉದ್ಯಮಗಳನ್ನು ಕಟ್ಟುವವರೆಗೆ, ಇತರರಿಗೆ ಅವಕಾಶಗಳನ್ನು ಸೃಷ್ಟಿಸುವವರೆಗೆ, ಸವಾಲುಗಳನ್ನು ಸಾಧ್ಯತೆಗಳಾಗಿ ಪರಿವರ್ತಿಸುವ ಸಾಮರ್ಥ್ಯ ಮಹಿಳೆಯರಲ್ಲಿದೆ.

ಅವರ ಸೃಜನಶೀಲತೆ, ಸಾಮರ್ಥ್ಯ ಮತ್ತು ದೃಢಸಂಕಲ್ಪಕ್ಕೆ ಬಂಡವಾಳ, ತಂತ್ರಜ್ಞಾನ ಹಾಗೂ ಮಾರುಕಟ್ಟೆಯ ಪ್ರವೇಶದ ಬೆಂಬಲ ದೊರೆತಾಗ, ಅವರು ಏನನ್ನು ನಿರ್ಮಿಸಬಲ್ಲರು ಎಂಬುದಕ್ಕೆ ಯಾವುದೇ ಮಿತಿಯಿರುವುದಿಲ್ಲ ಎಂದರು.

5th edition of “Together We Grow – International Women Entrepreneurship Day”, organised by the Ubuntu Consortium of Women Entrepreneurs Association
ಡಿಸಿಎಂ DKS ಪುತ್ರಿಗೆ ಹೆಣ್ಣು ಮಗು ಜನನ: ತಾತನಾದ ಖುಷಿ; ಆಸ್ಪತ್ರೆಗೆ ದೌಡಾಯಿಸಿದ ಡಿ.ಕೆ ಶಿವಕುಮಾರ್

ಈ ಸಾಮರ್ಥ್ಯವು ಅರಳಲು ಅಗತ್ಯವಾದ ಸೂಕ್ತ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು ನಮ್ಮ ಜವಾಬ್ದಾರಿಯಾಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಅವಕಾಶಗಳನ್ನು ವಿಸ್ತರಿಸಲು ನೆರವಾಗುತ್ತಿವೆ. ಮಹಿಳೆಯರ ಸಬಲೀಕರಣ ಮತ್ತು ಉನ್ನತಿಗೆ ನಮ್ಮ ಸರ್ಕಾರವು ಅತ್ಯಂತ ಬದ್ಧವಾಗಿದೆ.

ಮಹಿಳೆಯರು ದೊಡ್ಡ ಕನಸು ಕಾಣಲು, ಉದ್ಯಮಗಳನ್ನು ಕಟ್ಟಲು, ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ ಬಲಿಷ್ಠ ಭವಿಷ್ಯವನ್ನು ರೂಪಿಸಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತೇವೆ.

ಎಲ್ಲ ಮಹಿಳಾ ಉದ್ಯಮಿಗಳಿಗೂ ತಮ್ಮ ಉದ್ಯಮಶೀಲತಾ ಪಯಣದಲ್ಲಿ ನಿರಂತರ ಯಶಸ್ಸು ಮತ್ತು ಬೆಳವಣಿಗೆ ದೊರೆಯಲಿ ಎಂದು ಹಾರೈಸುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com