ಸಿನಿಮಾ ಟಿಕೆಟ್ ಮೇಲೆ ಶೇ.2ರಷ್ಟು cess: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್..!

ಮೂಲ ಕಾಯ್ದೆಯೇ ಇನ್ನೂ ಜಾರಿಗೆ ಬಂದಿಲ್ಲದಿರುವಾಗ ಕೇವಲ ಸುತ್ತೋಲೆಗಳ ಮೂಲಕ ರಾಜ್ಯ ಸರ್ಕಾರ ಸೆಸ್‌ ವಿಧಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
High court
ಹೈಕೋರ್ಟ್
Updated on

ಬೆಂಗಳೂರು: ಚಿತ್ರಮಂದಿರಗಳ ಟಿಕೆಟ್‌ಗಳಿಂದ ಸಂಗ್ರಹವಾಗುವ ಆದಾಯದ ಮೇಲೆ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ (ಕಲ್ಯಾಣ) ಕಾಯ್ದೆ-2024ರ ಅಡಿಯಲ್ಲಿ ವಿಧಿಸಲಾಗುತ್ತಿರುವ ಶೇ.2ರಷ್ಟು ಸೆಸ್‌ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಟಿ. ನರೇಂದ್ರ ಪ್ರಸಾದ್‌ ಅವರು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದಾರೆ.

ಮೂಲ ಕಾಯ್ದೆಯೇ ಇನ್ನೂ ಜಾರಿಗೆ ಬಂದಿಲ್ಲದಿರುವಾಗ ಕೇವಲ ಸುತ್ತೋಲೆಗಳ ಮೂಲಕ ರಾಜ್ಯ ಸರ್ಕಾರ ಸೆಸ್‌ ವಿಧಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ರಾಜ್ಯ ವಿಧಾನಮಂಡಲವು ಕಾಯ್ದೆಯನ್ನು ಅಂಗೀಕರಿಸಿದ್ದು, ರಾಜ್ಯಪಾಲರೂ ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

High court
'ಯಾರೇ ಗಿಮಿಕ್ ಎಂದರೂ ಇದು ಅದ್ಭುತ ಕೆಲಸ': ಎಪಿಎಂಸಿ ಮಾರುಕಟ್ಟೆಗೆ ಡಿ.ಕೆ ಶಿವಕುಮಾರ್ ಭೇಟಿಗೆ ಹೈಕೋರ್ಟ್ ಶ್ಲಾಘನೆ

ಆದರೆ, ಕಾಯ್ದೆಯಲ್ಲಿರುವ ನಿರ್ದಿಷ್ಟ ನಿಯಮದ ಪ್ರಕಾರ ರಾಜ್ಯ ಸರ್ಕಾರ ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿ ಜಾರಿಗೆ ತರುವ ದಿನಾಂಕವನ್ನು ನಿಗದಿಪಡಿಸಿದ ಬಳಿಕವಷ್ಟೇ ಕಾಯ್ದೆ ಜಾರಿಗೆ ಬರಲಿದೆ.

ಈವರೆಗೆ ಅಂತಹ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಆದರೂ ಸೆಸ್‌ ಸಂಗ್ರಹಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com