ಕಾರು ಓಡಿಸೋಕೂ ಹೆಲ್ಮೆಟ್ ಬೇಕಾ? ವಾಟ್ಸಪ್‌ಗೆ ಬಂದ ಟ್ರಾಫಿಕ್ ಫೈನ್ ನೋಡಿ ಬೆಚ್ಚಿಬಿದ್ದ ಚಾಲಕ! ಕಾರಿನಲ್ಲಿ ಹೆಲ್ಮೆಟ್ ಹಾಕಿಲ್ಲವೆಂದು ಬಿತ್ತು 500 ರೂಪಾಯಿ ದಂಡ

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಅಳವಡಿಸಲಾಗಿರುವ AI ಕ್ಯಾಮೆರಾವೊಂದು ಭಾರಿ ಯಡವಟ್ಟು ಮಾಡಿದ್ದು, ಕಾರು ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣ ನೀಡಿ ₹500 ದಂಡದ ನೋಟಿಸ್ ಕಳುಹಿಸಿದೆ. ಆ ಕುರಿತ ವರದಿ ಇಲ್ಲಿದೆ:
AI Camera Glitch: Belagavi Driver Fined Rs 500 For Not Wearing Helmet While Driving Car
ಕಾರಿನಲ್ಲಿ ಹೆಲ್ಮೆಟ್ ಹಾಕಿಲ್ಲವೆಂದು ಬಿತ್ತು 500 ರೂಪಾಯಿ ದಂಡAI Image
Updated on

ಅಥಣಿ (ಬೆಳಗಾವಿ): ಸಾಮಾನ್ಯವಾಗಿ ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದರೆ, ಬೈಕಿನಲ್ಲಿ ಹೆಲ್ಮೆಟ್ ಹಾಕದಿದ್ದರೆ ಪೊಲೀಸರು ಫೈನ್ ಹಾಕೋದು ಮಾಮೂಲಿ. ಆದರೆ, ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸಂಚಾರ ಪೊಲೀಸರು ಕಾರಿನಲ್ಲಿ ಹೆಲ್ಮೆಟ್ ಹಾಕಿಲ್ಲ ಎಂದು ಫೈನ್ ಹಾಕಿದ್ದಾರೆ. ಅದಕ್ಕೆ ಕಾರಣವಾಗಿದ್ದು,  ಆರ್ಟಿಫಿಷಿಯಲ್ ಇಂಟಲಿಜೆನ್ಸ್! ಹೌದು, ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸಂಚಾರ ಪೊಲೀಸರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಯಾಮೆರಾ ಇಂತಹದ್ದೊಂದು ರೋಚಕ ಎಡವಟ್ಟು ಮಾಡಿದ್ದು, ಇಡೀ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿ ಸುಭಾಷ್ ಬೋಜನೆ ಎಂಬುವವರು ತಮ್ಮ ಕಾರಿನಲ್ಲಿ ಅಂಬೇಡ್ಕರ್ ಸರ್ಕಲ್ ಬಳಿ ಸಂಚರಿಸುತ್ತಿದ್ದರು. ಈ ವೇಳೆ ಅಲ್ಲಿ ಅಳವಡಿಸಲಾಗಿದ್ದ ಎಐ ಟ್ರಾಫಿಕ್ ಕ್ಯಾಮೆರಾ ಇವರ ಕಾರಿನ ಫೋಟೋ ಸೆರೆಹಿಡಿದಿದೆ. ಇದಾದ ನಂತರ, ಸುಭಾಷ್ ಅವರ ಮೊಬೈಲ್‌ನ ವಾಟ್ಸಾಪ್ ಸಂಖ್ಯೆಗೆ ಸಂಚಾರ ಪೊಲೀಸರಿಂದ ₹500 ದಂಡದ ಇ-ಚಲನ್ ನೋಟಿಸ್ ಬಂದಿದೆ. ಅದನ್ನು ಓಪನ್ ಮಾಡಿ ನೋಡಿದಾಗ ಕಾರಿನ ಚಿತ್ರವಿದ್ದು, ನಿಯಮ ಉಲ್ಲಂಘನೆಯ ಜಾಗದಲ್ಲಿ "ಹೆಲ್ಮೆಟ್ ಧರಿಸಿಲ್ಲ" ಎಂದು ನಮೂದಿಸಲಾಗಿತ್ತು!

AI Camera Glitch: Belagavi Driver Fined Rs 500 For Not Wearing Helmet While Driving Car
ಬೈಕ್‌ನಲ್ಲಿ ಫೋನ್ ಚಾರ್ಜ್‌ಗಿಟ್ಟ ಪ್ರಯಾಣಿಕನಿಗೆ ಶಾಕ್: ಟೈರ್‌ನಲ್ಲಿ ಗಾಳಿ ಇಲ್ಲವೆಂದು ಕೆಳಗಿಳಿಸಿ 1 ಲಕ್ಷ ರೂ ಮೊಬೈಲ್‌ನೊಂದಿಗೆ Rapido ಚಾಲಕ ಪರಾರಿ!

ತಾಂತ್ರಿಕ ದೋಷವೇ ಕಾರಣ..

ಸಂಚಾರ ನಿಯಮ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಲು ಅಳವಡಿಸಲಾಗಿರುವ ಎಐ ಕ್ಯಾಮೆರಾದ ತಾಂತ್ರಿಕ ದೋಷದಿಂದಾಗಿ ಈ ಎಡವಟ್ಟು ಸಂಭವಿಸಿದೆ. ಸಿಸ್ಟಮ್ ಕಾರನ್ನು ದ್ವಿಚಕ್ರ ವಾಹನ ಎಂದು ತಪ್ಪಾಗಿ ಗುರುತಿಸಿ ದಂಡ ಸೃಷ್ಟಿಸಿದೆ. ಆದರೆ, ಅದನ್ನು ಮರುಪರಿಶೀಲಿಸಬೇಕಿದ್ದ ಸಂಚಾರ ಪೊಲೀಸರು ಕೂಡ ಗಮನಿಸದೇ ನೇರವಾಗಿ ನೋಟಿಸ್ ರವಾನಿಸಿದೆ.

ಕಾರಿನೊಳಗೆ ಹೆಲ್ಮೆಟ್ ಧರಿಸಿ ವಿನೂತನ ಪ್ರತಿಭಟನೆ

ಈ ವಿಚಿತ್ರ ನೋಟಿಸ್ ಕಂಡು ತಬ್ಬಿಬ್ಬಾದ ಕಾರು ಮಾಲೀಕ ಸುಭಾಷ್, ಪೊಲೀಸರ ಈ ಯಡವಟ್ಟನ್ನು ಖಂಡಿಸಲು ಶನಿವಾರ ತಮ್ಮ ಕಾರಿನೊಳಗೆ ಹೆಲ್ಮೆಟ್ ಧರಿಸಿಯೇ ಡ್ರೈವಿಂಗ್ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ. "ಇನ್ಮುಂದೆ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸಬೇಕಾ?" ಎಂದು ಅವರು ವ್ಯಂಗ್ಯವಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com