ತುಮಕೂರು: ಗಣೇಶ ವಿಸರ್ಜನೆ ವೇಳೆ ನೀನು ಕೀಳು ಜಾತಿ ಎಂದು ಹೀಯಾಳಿಸಿ ಹಲ್ಲೆ, ಯುವಕ ಸಾವು!

ತುಮಕೂರಿನ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಯುವಕನೋರ್ವನ ಕೊಲೆಯಾಗಿದೆ.
Youth Murdered
ಯುವಕ ಸಿಂಹ್ರಾದಿ ಹತ್ಯೆ
Updated on

ತುಮಕೂರು: ತುಮಕೂರಿನ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಯುವಕನೋರ್ವನ ಕೊಲೆಯಾಗಿದೆ. ಮೃತನನ್ನು ಮಾದಿಗ ಸಮುದಾಯದ 17 ವರ್ಷದ ಸಿಂಹಾದ್ರಿ ಎಂದು ಗುರುತಿಸಲಾಗಿದೆ. ಮಗನ ಸಾವಿನ ವಿಚಾರ ತಿಳಿದು ತಾಯಿ ಅನ್ನಪೂರ್ಣ ಅಸ್ವಸ್ಥರಾಗಿದ್ದು ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಣೇಶ ವಿಸರ್ಜನಾ ಕಾರ್ಯಕ್ರಮದ ವೇಳೆ ನಾಯಕ ಸಮುದಾಯದ ಮಾರುತೇಶ್ (24) ಎಂಬಾತ ಸಿಂಹಾದ್ರಿಗೆ ನೀನು ಕೀಳು ಜಾತಿಯವ ನಿಂದಿಸಿ, ಬಳಿಕ ಕಲ್ಲಿನಿಂದ ಹಲ್ಲೆ ನಡೆಸಿದ್ದು ಭೀಕರವಾಗಿ ಗಾಯಗೊಂಡಿದ್ದ ಸಿಂಹಾದ್ರಿ ಮೃತಪಟ್ಟಿದ್ದಾನೆ. ಡಾನ್ಸ್ ವಿಚಾರವಗಿ ಕೊಲೆ ನಡೆದಿದೆ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ. ಘಟನೆ ಬಗ್ಗೆ ತಾಯಿ ಅನ್ನಪೂರ್ಣ ಅವರ ದೂರಿನ ಅನ್ವಯ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Youth Murdered
ರಾಮನಗರ: SP ಕಚೇರಿಯ ಕಟ್ಟಡದಿಂದ ಜಿಗಿದು Pocso ಪ್ರಕರಣ​ ಆರೋಪಿ ದೈಹಿಕ ಶಿಕ್ಷಕ ಆತ್ಮಹತ್ಯೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com