₹86ರ ಔಷಧಿಗೆ ₹4,228 MRP! 254 ಫಾರ್ಮಾ ಕಂಪನಿಗಳ ಬೃಹತ್ ಲೂಟಿ ಬಯಲಿಗೆಳೆದ ಕರ್ನಾಟಕ ಎಫ್‌ಡಿಎ

ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆಯು ರೋಗಿಗಳಿಂದ ಔಷಧಗಳ ಮೇಲಿನ ಬೆಲೆಯಲ್ಲಿ ಶೇ. 60 ರಿಂದ 90 ಪಟ್ಟಿನವರೆಗೆ ಅತಿಯಾದ ಲಾಭ ಗಳಿಸಿ ಸುಲಿಗೆ ಮಾಡುತ್ತಿದ್ದ ಬರೋಬ್ಬರಿ 254 ಔಷಧ ತಯಾರಿಕಾ ಸಂಸ್ಥೆಗಳ ಮಹಾ ವಂಚನೆಯ ಜಾಲವನ್ನು ಬಯಲಿಗೆಳೆದಿದೆ. ಆ ಕುರಿತ ವರದಿ ಇಲ್ಲಿದೆ:
Karnataka FDA Exposes Massive Pharma Scam: 254 Drug Companies Inflating Prices by up to 90 Times
ಜೀವರಕ್ಷಕ ಔಷಧಗಳ ಹೆಸರಲ್ಲಿ ಶೇ. 90 ರಷ್ಟು ಕಮಿಷನ್ ದಂಧೆAI Image
Updated on: 

ಬೆಂಗಳೂರು: ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆಯು ರೋಗಿಗಳಿಂದ ಔಷಧಗಳ ಮೇಲಿನ ಬೆಲೆಯಲ್ಲಿ ಶೇ. 60 ರಿಂದ 90 ಪಟ್ಟಿನವರೆಗೆ ಅತಿಯಾದ ಲಾಭ ಗಳಿಸಿ ಸುಲಿಗೆ ಮಾಡುತ್ತಿದ್ದ ಬರೋಬ್ಬರಿ 254 ಔಷಧ ತಯಾರಿಕಾ ಸಂಸ್ಥೆಗಳ ಮಹಾ ವಂಚನೆಯ ಜಾಲವನ್ನು ಬಯಲಿಗೆಳೆದಿದೆ. ಆಸ್ಪತ್ರೆಗಳು ಮತ್ತು ರೋಗಿಗಳಿಗೆ ಪೂರೈಕೆಯಾಗುವ ಜೀವರಕ್ಷಕ ಔಷಧಗಳು, ವೈದ್ಯಕೀಯ ಉಪಕರಣಗಳ ನಿಜವಾದ ಖರೀದಿ ವೆಚ್ಚಕ್ಕೂ ಮತ್ತು ಅವುಗಳ ಮೇಲೆ ಮುದ್ರಿಸಲಾದ ಗರಿಷ್ಠ ಮಾರಾಟ ಬೆಲೆಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

₹86 ರ ಔಷಧಿಗೆ ₹4,228 MRP!

ಎಫ್‌ಡಿಎ ಅಧಿಕಾರಿಗಳ ತನಿಖೆಯ ವೇಳೆ ಕೇವಲ ₹86 ಕ್ಕೆ ಖರೀದಿಸಿದ ಔಷಧವೊಂದಕ್ಕೆ ₹4,228 ರಷ್ಟು ದುಬಾರಿ ಎಂಆರ್‌ಪಿ ನಿಗದಿಪಡಿಸಿರುವುದು ಬೆಳಕಿಗೆ ಬಂದಿದೆ. ಅದೇ ರೀತಿ ₹160 ರ ಔಷಧಿಗೆ ಬರೋಬ್ಬರಿ ₹7,110 ಎಂಆರ್‌ಪಿ ಹಾಕಿ ರೋಗಿಗಳನ್ನು ಲೂಟಿ ಮಾಡಲಾಗುತ್ತಿತ್ತು. ಅದರಲ್ಲೂ, ಪ್ರಮುಖವಾಗಿ ಕ್ಯಾನ್ಸರ್ ಸೇರಿದಂತೆ ಕಠಿಣ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಅತ್ಯಂತ ದುಬಾರಿ ಜೀವರಕ್ಷಕ ಔಷಧಿಗಳನ್ನೇ ಈ ಫಾರ್ಮಾ ಕಂಪನಿಗಳು ಬಂಡವಾಳ ಮಾಡಿಕೊಂಡಿವೆ. ಬೆಲೆ ನಿಯಂತ್ರಣ ಪ್ರಾಧಿಕಾರಗಳ ವ್ಯಾಪ್ತಿಯಿಂದ ಹೊರಗಿರುವ ಔಷಧಗಳ ಮೇಲೆಯೇ ಈ ರೀತಿ 60 ರಿಂದ 70 ಪಟ್ಟು ಹೆಚ್ಚು ದರ ವಿಧಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲಾಗುತ್ತಿದೆ.

ಮುಂದುವರೆದು, ಈ ದಂಧೆಗೆ ತಕ್ಷಣವೇ ಬ್ರೇಕ್ ಹಾಕಲು ಹಾಗೂ ಔಷಧಗಳ ಟ್ರೇಡ್ ಮಾರ್ಜಿನ್ ಮೇಲೆ ನಿರ್ಬಂಧ ಹೇರಲು ಕರ್ನಾಟಕ ಎಫ್‌ಡಿಎ ಆಯುಕ್ತರಾದ ಕೆ. ಶ್ರೀನಿವಾಸ್ ಅವರು ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ ಮತ್ತು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಗೆ ತುರ್ತು ಪತ್ರ ಬರೆದಿದ್ದಾರೆ. Drugs (Prices Control) Order, 2013 ನಿಯಮಗಳ ಅಡಿಯಲ್ಲಿ ಈ ಎಲ್ಲಾ 254 ಕಂಪನಿಗಳ ಉತ್ಪನ್ನಗಳ ದರವನ್ನು ನಿಯಂತ್ರಿಸಬೇಕೆಂದು ಕೋರಿದ್ದಾರೆ.

Karnataka FDA Exposes Massive Pharma Scam: 254 Drug Companies Inflating Prices by up to 90 Times
ಬೆಂಗಳೂರಿನಲ್ಲಿ ನಕಲಿ ಔಷಧ ದಂಧೆ ಹಿಂದೆ ದುಬೈ ಕಿಂಗ್‌ಪಿನ್ ಸಂಪರ್ಕ: ಆರೋಗ್ಯ ಸಚಿವ ಯು.ಟಿ ಖಾದರ್

ಇತ್ತೀಚೆಗೆ ಬೆಂಗಳೂರಿನ ಬಿಡದಿ ಬಳಿಯ ಫಾರ್ಮ್‌ಹೌಸ್ ಒಂದರಲ್ಲಿ ಸಣ್ಣ ದರದ ಔಷಧಿಗಳನ್ನು ಮರು-ಪ್ಯಾಕ್ ಮಾಡಿ, ಮಲ್ಟಿನಾಷನಲ್ ಕಂಪನಿಗಳ ದುಬಾರಿ ಬ್ರಾಂಡ್‌ಗಳ ನಕಲಿ ಲೇಬಲ್ ಅಂಟಿಸುತ್ತಿದ್ದ ₹5.05 ಕೋಟಿ ಮೌಲ್ಯದ ದಂಧೆಯನ್ನು ಎಫ್‌ಡಿಎ ಪತ್ತೆ ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿ ಈಗಾಗಲೇ 16 ಔಷಧ ಪರವಾನಗಿಗಳನ್ನು ರದ್ದುಪಡಿಸಲಾಗಿದ್ದು, 8 ಲೈಸೆನ್ಸ್‌ಗಳನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ, ಈಗ ದರ ನಿಯಂತ್ರಣದ ಮೂಲಕ ರೋಗಿಗಳಿಗೆ ಆರ್ಥಿಕ ಹೊರೆ ತಪ್ಪಿಸಲು ಈ ಬೃಹತ್ ತನಿಖೆ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com