11 ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನವವಿವಾಹಿತೆ ಕೆರೆಯಲ್ಲಿ ಶವವಾಗಿ ಪತ್ತೆ, ಪೊಲೀಸ್ ತನಿಖೆ!

ಸೆಪ್ಟೆಂಬರ್ 19ರ ರಾತ್ರಿ ಪತಿ ಜೊತೆಗಿದ್ದ 24 ವರ್ಷದ ಪ್ರಿಯಾಂಕಾ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಬಳಿ ಏಕಾಏಕಿ ಹೇಮಾವತಿ ನಾಲೆಗೆ ಜಿಗಿದಿದ್ದರು ಎನ್ನಲಾಗಿತ್ತು.
Missing Hassan Newlywed Woman Found Dead in Turuvekere Lake
ಸಾಂದರ್ಭಿಕ ಚಿತ್ರ
Updated on: 

ಹಾಸನ: ಹಾಸನದಲ್ಲಿ 11 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆ ಪ್ರಿಯಾಂಕಾ ಅವರ ಮೃತದೇಹ ತುಮಕೂರು ಜಿಲ್ಲೆಯ ತುರುವೇಕೆರೆಯ ಕೋಲಾಳ ಕೆರೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 19ರ ರಾತ್ರಿ ಪತಿ ಜೊತೆಗಿದ್ದ 24 ವರ್ಷದ ಪ್ರಿಯಾಂಕಾ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಬಳಿ ಏಕಾಏಕಿ ಹೇಮಾವತಿ ನಾಲೆಗೆ ಜಿಗಿದಿದ್ದರು ಎನ್ನಲಾಗಿತ್ತು.

ಅಂದಿನಿಂದಲೂ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಆದರೆ 11 ದಿನಗಳ ಬಳಿಕ ಇಂದು ಪ್ರಿಯಾಂಕಾ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಕಾಲುವೆ ನೀರು ನಿಲ್ಲಿಸಿ ಸುರಂಗ, ಕೆರೆ ಎಲ್ಲೆಡೆ ಸಂಬಂಧಿಕರು ಶೋಧ ನಡೆಸಿದ್ದರು. ನಾಲೆಯಿಂದ ನೀರು ಹರಿದು ತುಂಬುವ ಎಲ್ಲಾ ಕೆರೆಗಳಲ್ಲಿಯೂ ಶೋಧ ನಡೆದಿತ್ತು.

ತುರುವೇಕೆರೆ, ತಿಪಟೂರು ಭಾಗದಲ್ಲಿ ಡ್ರೋನ್ ಮೂಲಕ ಪೊಲೀಸರು ಪ್ರಿಯಾಂಕಾಗಾಗಿ ಹುಡುಕಾಡಿದ್ದರು. ಈ ನಡುವೆ ಕೊನೆಗೂ ಕೋಲಾಳ‌ ಕೆರೆಯಲ್ಲಿ ಶವವಾಗಿ ಪ್ರಿಯಾಂಕಾ ಪತ್ತೆಯಾಗಿದ್ದಾರೆ.

Missing Hassan Newlywed Woman Found Dead in Turuvekere Lake
ಲಕ್ಷ್ಮಿ ಪೂಜೆಗೆ ಬಂದು ಸಂಬಂಧಿಕರ ಚಿನ್ನಕ್ಕೇ ಕನ್ನ; ನಕಲಿ ಆಭರಣ ಇಟ್ಟು ಪರಾರಿಯಾದ ಭೂಪ; ಕೊನೆಗೂ ಬಂಧನ! Video

8 ತಿಂಗಳ ಹಿಂದಷ್ಟೇ ಮದುವೆ, ಎರಡೂವರೆ ತಿಂಗಳ ಗರ್ಭಿಣಿ

ಬಾಗೂರು ಗ್ರಾಮದ ಕೃಷ್ಣಸ್ವಾಮಿ-ಶೋಭ ದಂಪತಿ ಪುತ್ರಿಯಾಗಿದ್ದ ಈಕೆಯನ್ನು ಎಂಟು ತಿಂಗಳ ಹಿಂದೆ ಕುರುವಂಕ ಗ್ರಾಮದ ರಾಜಶೇಖರ ಜೊತೆ ವಿವಾಹಮಾಡಿ ಕೊಡಲಾಗಿತ್ತು.

ಕೆಎಎಸ್‌ ಪರೀಕ್ಷೆಗಾಗಿ ಪ್ರಿಯಾಂಕಾ ಸಿದ್ಧತೆ ಕೂಡ ನಡೆಸುತ್ತಿದ್ದರು. ಪತ್ನಿ ಎರಡೂವರೆ ತಿಂಗಳ ಗರ್ಭಿಣಿ ಆಗಿದ್ದರೂ ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ರಾಜಿ ಸಂಧಾನವೂ ನಡೆದಿತ್ತು.

ಪತಿಯಿಂದಲೇ ಕೊಲೆ ಆರೋಪ

ಈ ನಡುವೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಪತಿ ರಾಜಶೇಖರನೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಿಯಾಂಕಾ ಪೋಷಕರು ದೂರಿದ್ದರು.

ಪ್ರತ್ಯಾರೋಪ

ಮತ್ತೊಂದೆಡೆ ಪ್ರಿಯಾಂಕಾ ಹಾಗೂ ಆಕೆಯ ಪೋಷಕರ ವಿರುದ್ಧವೇ ರಾಜಶೇಖರ ಮತ್ತು ಕುಟುಂಬಸ್ಥರು ದೂರಿದ್ದರು. ಆಕೆಗೆ ಈಗಾಗಲೇ ಮೊದಲೇ ಒಂದು ಮದುವೆಯಾಗಿತ್ತು ಎಂಬ ಕಹಿ ಸತ್ಯವನ್ನು ಮುಚ್ಚಿಟ್ಟು ಮದುವೆ ಮಾಡಿಕೊಡಲಾಗಿದೆ.

Missing Hassan Newlywed Woman Found Dead in Turuvekere Lake
ಮೈಸೂರಿನಲ್ಲಿ ದುರಂತ: ಅಣ್ಣನನ್ನು ಮನೆಗೆ ಕರೆತರಲು ಹೋಗಿದ್ದ ಪುಟ್ಟ ಬಾಲಕಿ ಮೇಲೆ ಹರಿದ ಶಾಲಾ ಬಸ್; ಸ್ಥಳದಲ್ಲೇ ಸಾವು!

ರಾಜಶೇಖರ ಜೊತೆ ಮದುವೆಯಾಗುತ್ತಿದ್ದ ದಿನವೇ ಆಕೆಯ ಹಳೆಯ ಗಂಡ ಪೋಲಿಸರ ಜೊತೆ ಕಲ್ಯಾಣ ಮಂಟಪಕ್ಕೇ ಬಂದಿದ್ದ. ಮಗಳು ಹಳೆಯ ಗಂಡನ ಜೊತೆ ಓಡಿ ಹೋಗುತ್ತಾಳೆ ಎಂಬ ಆತುರದಲ್ಲಿ ಆಕೆಯ ಪೋಷಕರು ವಿಚಾರ ಮುಚ್ಚಿಟ್ಟು ಮದುವೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಂತೆಯೇ ಮಗಳು ಮದುವೆಗೆ ಒಪ್ಪದಿದ್ದಾಗ ತಂದೆ-ತಾಯಿ ವಿಷದ ಬಾಟಲಿ ಹಿಡಿದು ಬೆದರಿಸಿ, ಒತ್ತಾಯಪೂರ್ವಕವಾಗಿ ರಾಜಶೇಖರ ಜೊತೆ ಮದುವೆಗೆ ಒಪ್ಪಿಸಿದ್ದರು ಎಂದು ರಾಜಶೇಖರ ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಿಯಾಂಕಾಗೆ ಈಜು ಬರುತ್ತಿದ್ದ ಕಾರಣ ಆಕೆಯ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು. ಆದರೆ ಅಂತಿಮವಾಗಿ ಈಗ ಶವವಾಗಿ ಪ್ರಿಯಾಂಕಾ ಪತ್ತೆಯಾಗಿದ್ದು, ಅಸಲಿಗೆ ನಡೆದಿದ್ದೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com