ಬೆಂಗಳೂರಿನ ಖಾಲಿ ನಿವೇಶನದಲ್ಲಿ LPG ಸಿಲಿಂಡರ್ ಸ್ಫೋಟ: ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ

ನಗರದ ಖಾಲಿ ನಿವೇಶನವೊಂದರಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ನಲ್ಲಿ ಇಂದು ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಖಾಲಿ ನಿವೇಶನದಲ್ಲಿ LPG ಸಿಲಿಂಡರ್ ಸ್ಫೋಟ: ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ
Updated on: 

ಬೆಂಗಳೂರು: ನಗರದ ಖಾಲಿ ನಿವೇಶನವೊಂದರಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ನಲ್ಲಿ ಇಂದು ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗದಾಸಪುರದ 6ನೇ ಕ್ರಾಸ್‌ನಲ್ಲಿರುವ ಮೂರ್ತಿ ಎಂಬುವವರಿಗೆ ಸೇರಿದ ನಿವೇಶನದಲ್ಲಿ ಈ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಶೆಡ್‌ಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ಸಂಭವಿಸಿಲ್ಲ ಎಂಬುದು ಖಚಿತಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನ ಖಾಲಿ ನಿವೇಶನದಲ್ಲಿ LPG ಸಿಲಿಂಡರ್ ಸ್ಫೋಟ: ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ
ಮಂಗಳೂರಿನ MRPLನಲ್ಲಿ ಭಾರೀ ಅಗ್ನಿ ಅವಘಡ: ಆಗಸಕ್ಕೆ ಚಿಮ್ಮಿದ ದಟ್ಟ ಹೊಗೆ, 7 ಮಂದಿಗೆ ಗಾಯ..!

ಇದು ಅಕ್ರಮ ಗ್ಯಾಸ್ ರೀಫಿಲ್ಲಿಂಗ್ (ಅನಿಲ ಮರುಭರ್ತಿ) ಘಟಕವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿ, ನಾವು ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು ಎಂದು ಅವರು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com