ಪಾಕ್ ಅಣು ಸ್ಥಾವರದಲ್ಲಿ ಗುಂಡಿನ ಕಾಳಗ; 7 ಸಾವು
ಪೇಶಾವರ್: ಪಾಕಿಸ್ತಾನದ ಅಣು ಸ್ಥಾವರದಲ್ಲಿ ಮಂಗಳವಾರ ಗುಂಡಿನ ಕಾಳಗ ನಡೆದಿದ್ದು, ಕನಿಷ್ಟ 7 ಮಂದಿ ಸಾವಿಗೀಡಾಗಿದ್ದಾರೆ.
ಪೇಶಾವರದಲ್ಲಿರುವ ಅಣುಸ್ಥಾವರದಲ್ಲಿ ಇಂದು ಮಧ್ಯಾಹ್ನ 2:30 ರ ಸುಮಾರಿನಲ್ಲಿ ಗುಂಡಿನ ಕಾಳಗ ನಡೆದಿದೆ. ಘಟನೆಯಲ್ಲಿ ಸ್ಥಾವರದ ಓರ್ವ ನೌಕರ ಸೇರಿದಂತೆ 6 ಮಂದಿ ಸೈನಿಕರು ಮೃತಪಟ್ಟಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಇಂದು ಮಧ್ಯಾಹ್ನದ ಸುಮಾರಿನಲ್ಲಿ ಸಶಸ್ತ್ರ ಸಜ್ಜಿತ ಸೈನಿಕರು ಇದ್ದಕ್ಕಿದ್ದಂತೆ ಸ್ಥಾವರದತ್ತ ಓಡುತ್ತಿದ್ದರು. ಬಾಂಬ್ ಸ್ಪೋಟವಾಗಿರಬೇಕು ಎಂದು ಎಲ್ಲರೂ ಭಾವಿಸಿದ್ದೆವು. ಆದರೆ ಸ್ಥಾವರದಿಂದ ಗುಂಡಿನ ಕಾಳಗದ ಶಬ್ಧ ಕೇಳಿಬಂತು. ಸ್ಥಳದಲ್ಲಿದ್ದ ಪೊಲೀಸರು ನಮ್ಮನ್ನು ದೂರ ಕಳುಹಿಸಿದರು ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದರು.
ಯಾವುದೇ ಉಗ್ರ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಅಲ್ಲದೆ ದಾಳಿಗೆ ಕಾರಣವೂ ತಿಳಿಯದೇ ಇರುವುದು ಪಾಕ್ ಜನತೆಯಲ್ಲಿ ಭೀತಿ ನೆಲೆಸುವಂತೆ ಮಾಡಿದೆ.
ಮೂಲಗಳ ಪ್ರಕಾರ ಪಾಕಿಸ್ತಾನದ ಪೇಶಾವರದಲ್ಲಿರುವ ಅಣುಸ್ಥಾವರದಲ್ಲಿ ಪದೇ ಪದೇ ಗುಂಡಿನ ಮೊರೆತ ಕೇಳಿಬರುತ್ತಿದೆ. ಕಳೆದ ಒಂದು ವಾರದಲ್ಲಿ 2 ಬಾರಿ ಗುಂಡಿನ ಕಾಳಗ ನಡೆದಿದೆ ಎಂದು ತಿಳಿದು ಬಂದಿದೆ. ಅಣು ಸ್ಥಾವರಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಉಗ್ರರು, ಈ ದಾಳಿಗೆ ಸಹಕಾರ ನೀಡಿರುವ ಸಾಧ್ಯತೆ ಇದೆ ಎಂದು ಸ್ಥಾವರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟಾರೆ ಉಗ್ರರಿಗೆ ಆಶ್ರಯ ನೀಡಿ ತನ್ನ ಪಾಪದ ಫಲವನ್ನು ತಾನೇ ಉಣ್ಣುತ್ತಿರುವ ಪಾಕ್, ಇದೀಗ ವಿಶ್ವವೇ ಅದರ ಪರಿಣಾಮ ಎದುರಿಸುವಂತಹ ಭೀತಿ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

