ಈಗಿನ ಸುದ್ದಿ

ನಾಡಾಗೆ ರಕ್ತದ ಮಾದರಿ ನೀಡಿದ ವಿಜೇಂದರ್ ಸಿಂಗ್

ನಾಡಾಗೆ ರಕ್ತದ ಮಾದರಿ ನೀಡಿದ ವಿಜೇಂದರ್ ಸಿಂಗ್
Published On :

ಮೊಹಾಲಿ: ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಬುಧವಾರ ರಕ್ತದ ಮಾದರಿ ಮತ್ತು ಕೂದಲನ್ನು ಪರೀಕ್ಷೆಗಾಗಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ(ನಾಡಾ)ಗೆ ನೀಡಿದ್ದಾರೆ.

ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಸಿಲುಕಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ್ದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಕೊನೆಗೂ ತಮ್ಮ ರಕ್ತದ ಮಾದರಿ ಮತ್ತು ಕೂದಲನ್ನು ಪರೀಕ್ಷೆಗಾಗಿ ನಾಡಾಗೆ ನೀಡಿದ್ದಾರೆ.

ಇಂದು ಸಂಜೆ ನವದೆಹಲಿಗೆ ಆಗಮಿಸಿದ ವಿಜೇಂದರ್ ನಾಡಾ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ರಕ್ತ ಮತ್ತು ಕೂದಲನ್ನು ಪರೀಕ್ಷೆಗಾಗಿ ನೀಡಿದರು. ವಿಜೇಂದರ್ ರಕ್ತ ಮತ್ತು ಕೂದಲನ್ನು ಪರೀಕ್ಷೆಗೆ ನೀಡಿರುವುದನ್ನು ಖಚಿತ ಪಡಿಸಿದ ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರು, ನಾಡಾ ಅಧಿಕಾರಿಗಳು ವಿಜೇಂದರ್ ಅವರ ರಕ್ತದ ಮಾದರಿ ಮತ್ತು ಕೂದಲನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ ಎಂದು ಸ್ಪಷ್ಟಪಡಿಸಿದರು.

2008ರಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದಿದ್ದ ಬಾಕ್ಸರ್ ವಿಜೇಂದರ್ ಸಿಂಗ್, ಜೀರಕ್ ಪುರದಲ್ಲಿ ಅಪಾರ ಪ್ರಮಾಣದಲ್ಲಿ ಪತ್ತೆಯಾದ ಮಾದಕ ವಸ್ತು ಪ್ರಕರಣದಲ್ಲಿ ಸಿಲುಕಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದರು. ಸ್ವತಃ ಪ್ರಕರಣದ ತನಿಖೆ ನಡೆಸುತ್ತಿರುವ ಮೊಹಾಲಿಯ ಫತೇಗಡ್ ಪೊಲೀಸರೇ ವಿಜೇಂದರ್ ಸಿಂಗ್ ಅವರು ಮಾದಕ ವಸ್ತು ಸೇವಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ವಿಜೇಂದರ್ ಅವರ ರಕ್ತದ ಮಾದರಿ ಮತ್ತು ಕೂದಲಿನ ಪರೀಕ್ಷೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಮುಂದಾಗಿತ್ತು.

ಇದಕ್ಕಾಗಿ ಪರೀಕ್ಷೆ ನಡೆಸುವಂತೆ ನಾಡಾ ಅಧಿಕಾರಿಗಳನ್ನು ಕೇಳಿತ್ತು. ಆದರೆ ಕ್ರೀಡಾ ಪ್ರಾಧಿಕಾರದ ಮನವಿಯನ್ನು ತಿರಸ್ಕರಿಸಿದ್ದ ನಾಡಾ, ಅಂತಾರಾಷ್ಟ್ರೀಯ ಮಾದಕ ವಸ್ತು ತಡೆ ಘಟಕ (ವಾಡಾ) ನಿಯಮಾವಳಿಗಳ ಪ್ರಕಾರ ಕ್ರೀಡಾಕೂಟ ಸಂದರ್ಭಗಳಲ್ಲಿ ಮಾತ್ರ ಪರೀಕ್ಷೆ ನಡೆಸಲು ಸಾಧ್ಯ ಎಂದು ಹೇಳಿತ್ತು. ಆದರೆ ಕ್ರೀಡಾ ಪ್ರಾಧಿಕಾರದ ವಿಶೇಷ ಮನವಿಯ ಮೇರೆಗೆ ಇಂದು ನಾಡಾ ಅಧಿಕಾರಿಗಳು ವಿಜೇಂದರ್ ಸಿಂಗ್ ಅವರ ಪರೀಕ್ಷೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.