ಪೊಲೀಸರಿಂದ ರಾಮ್ಸಿಂಗ್ಗೆ ಕಿರುಕುಳ: ಕೋಚ್ ಆರೋಪ
ಮೊಹಾಲಿ: ಬಾಕ್ಸರ್ ರಾಮ್ ಸಿಂಗ್ಗೆ ಮೊಹಾಲಿ ಪೊಲೀಸರು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿಜೇಂದರ್ ಸಿಂಗ್ ಅವರ ಕೋಚ್ ಜಗದೀಶ್ ಸಿಂಗ್ ಅವರು ಬುಧವಾರ ಆರೋಪಿಸಿದ್ದಾರೆ.
ಮೊಹಾಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಚ್ ಜಗದೀಶ್ ಸಿಂಗ್ ಅವರು, ಪೊಲೀಸರು ಬಲವಂತವಾಗಿ ರಾಮ್ ಸಿಂಗ್ರನ್ನು ಬಂಧಿಸಿದ್ದಾರೆ. ಠಾಣೆಯಲ್ಲಿ ಅವರಿಂದ ಸುಳ್ಳು ಹೇಳಿಕೆ ಪಡೆಯಲು ದೈಹಿಕವಾಗಿ ಅವರನ್ನು ಹಿಂಸಿಸುತ್ತಿದ್ದಾರೆ. ಈ ವಿಷಯ ಬಹಿರಂಗವಾಗದಿರುವಂತೆ ಎಚ್ಚರಿಕೆ ವಹಿಸಲು 2 ದಿನಗಳಿಗೊಮ್ಮೆ ವಿಚಾರಣೆ ನಡೆಸುವ ಠಾಣೆಯನ್ನು ಬದಲಿಸುತ್ತಿದ್ದಾರೆ ಎಂದು ಹೇಳಿದರು.
ಸ್ಥಳೀಯ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ರಾಮ್ ಸಿಂಗ್ ತಂದೆ, ತನ್ನ ಮಗ ನಿರ್ದೋಷಿ. ಆತ ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಆತನನ್ನು ಬಲವಂತವಾಗಿ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ವಿಜೇಂದರ್ ಸಿಂಗ್ ಸ್ನೇಹಿತ ಬಾಕ್ಸರ್ ದಿನೇಶ್ ಸಿಂಗ್ ಅವರು, ಪ್ರಕರಣದಲ್ಲಿ ವಿಜೇಂದರ್ ಅವರನ್ನು ಪೊಲೀಸರೇ ಸಿಕ್ಕಿಸಿದ್ದಾರೆ. ವಿಜೇಂದರ್ ತಪ್ಪು ಮಾಡಿದಂತೆ ನನಗೆ ಅನ್ನಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ರಾಮ್ಸಿಂಗ್ ಬಂಧುಗಳ ಮನೆಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಪತ್ತೆ
ಈ ನಡುವೆ ಬಂಧಿತ ರಾಮ್ ಸಿಂಗ್ ಅವರ ಬಂಧುಗಳ ಮನೆಯಲ್ಲಿ ಸುಮಾರು 5ಕೆಜಿ ಗಳಷ್ಟು ಮಾದಕ ವಸ್ತು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜೀರಕ್ ಪುರದಲ್ಲಿರುವ ರಾಮ ಸಿಂಗ್ ಅವರ ಬಾವಮೈದುನನ ಮನೆಯಲ್ಲಿ 5ಕೆಜಿ ನಿಷೇಧಿತ ಐಸ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಮೊಹಾಲಿ ಪೊಲೀಸರು ಮಾದಕ ವಸ್ತುವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

