ಈಗಿನ ಸುದ್ದಿ

ವಿರೋಧಿಗಳನ್ನು ಜೈಲಿಗಟ್ಟಲು ಸಾವಿರ 'ಕೈ'ಗಳಿವೆ: ಮುಲಾಯಂ

ವಿರೋಧಿಗಳನ್ನು ಜೈಲಿಗಟ್ಟಲು ಸಾವಿರ 'ಕೈ'ಗಳಿವೆ: ಮುಲಾಯಂ
Published On :

ಲಖನೌ: ಕೇಂದ್ರದ ಯುಪಿಎ ಸರ್ಕಾರಕ್ಕೆ ತನ್ನ ವಿರೋಧಿಗಳನ್ನು ಜೈಲಿಗಟ್ಟಲು ಸಾವಿರ ಕೈಗಳಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವ್ಯಂಗ್ಯವಾಡಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಮತ್ತೊಮ್ಮೆ 'ಕೈ' ವಿರುದ್ದ ಕಿಡಿಕಾರಿದ್ದಾರೆ. ಲಕ್ನೋದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹೋರಾಡುವುದು ಅಷ್ಟು ಸುಲಭವಲ್ಲ. ತನ್ನ ವಿರುದ್ಧ ಮಾತನಾಡುವವರನ್ನು ಮತ್ತು ತನ್ನ ವಿರೋಧಿಗಳನ್ನು ಮಣಿಸಲು ಕಾಂಗ್ರೆಸ್‌ಗೆ ಸಿಬಿಐ ಎಂಬ ಸಾವಿರ 'ಕೈ'ಗಳ ಬಲವಿದೆ ಎಂದು ಮುಲಾಯಂ ಸಿಂಗ್ ವ್ಯಂಗ್ಯವಾಡಿದ್ದಾರೆ.

'ಕಾಂಗ್ರೆಸ್‌ನೊಂದಿಗೆ ಕಾಳಗ ಮಾಡುವುದು ಅಷ್ಟು ಸುಲಭವೇ..? ಸರ್ಕಾರಕ್ಕೆ ಸಾವಿರ ಕೈಗಳಿವೆ. ಕಾಂಗ್ರೆಸ್ ವಿರುದ್ಧ ಮಾತನಾಡಿದರೆ ಮತ್ತು ಕಾಂಗ್ರೆಸ್ ಅನ್ನು ತೆಗಳಿದರೆ ಅವರನ್ನು ಸಿಬಿಐ ಬೆನ್ನಟ್ಟುತ್ತದೆ' ಎಂದು ಹೇಳಿದರು.

ಬೆಂಬಲ ವಾಪಸ್ ಪಡೆಯುವ ಕುರಿತು ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಲಾಯಂ ಸಿಂಗ್ ಅವರು, ನಾವೂ ಕೂಡ ಡಿಎಂಕೆಯಂತೆ ಯುಪಿಎಗೆ ನೀಡಿದ್ದ ಬೆಂಬಲ ವಾಪಾಸ್ ಪಡೆಯಲು ಮುಂದಾಗಿದ್ದೆವು. ಆದರೆ ಕೋಮುವಾದಿಗಳನ್ನು ಸರ್ಕಾರದಿಂದ ದೂರವಿಡಲು ಮತ್ತು ಅವಧಿಗಿಂತ ಮೊದಲೇ ಚುನಾವಣೆ ಬೇಡವೆಂಬ ಅನಿವಾರ್ಯ ಕಾರಣಗಳಿಂದ ಯುಪಿಎಗೆ ನೀಡಿರುವ ಬೆಂಬಲವನ್ನು ಮುಂದುವರೆಸುತ್ತಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.