ಈಗಿನ ಸುದ್ದಿ

ಇಂದಿನ ಬಿಜೆಪಿಗೂ ನನ್ನ ಆದರ್ಶಗಳಿಗೂ ಹೊಂದಾಣಿಕೆಯಾಗಲ್ಲ: ಅಡ್ವಾಣಿ

ಇಂದಿನ ಬಿಜೆಪಿಗೂ ನನ್ನ ಆದರ್ಶಗಳಿಗೂ ಹೊಂದಾಣಿಕೆಯಾಗಲ್ಲ: ಅಡ್ವಾಣಿ
Published On :

ನವದೆಹಲಿ: ಪ್ರಸ್ತುತ ಬಿಜೆಪಿಯ ತತ್ವ ಸಿದ್ಧಾಂತಗಳು ತಮ್ಮ ಆದರ್ಶಗಳಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ 33ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅಡ್ವಾಣಿ, 'ಇಂದಿನ ಬದಲಾದ ಸನ್ನಿವೇಶದಲ್ಲಿ ಬಿಜೆಪಿಯ ತತ್ವ ಸಿದ್ಧಾಂತಗಳು ನನಗೆ ಹೊಂದಾಣಿಕೆಯಾಗುವುದಿಲ್ಲ. ನನಗೆ ಸಂಬಂಧಿಸಿದವರೆಗೂ ಪಕ್ಷದಲ್ಲಿನ ಅಶಿಸ್ತು ಮತ್ತು ಭ್ರಷ್ಟಾಚಾರವನ್ನು ನಾನು ಸಹಿಸುವುದಿಲ್ಲ' ಎಂದಿದ್ದಾರೆ.

'ನಾನು ಇಂದು ಈ ವಿಚಾರವನ್ನು ಉದ್ದೇಶ ಪೂರ್ವಕವಾಗಿಯೇ ಮಾತನಾಡುತ್ತಿದ್ದೇನೆ. ಪಕ್ಷದಿಂದ ದೇಶಕ್ಕೆ ಸಾಕಷ್ಟು ಒಳಿತು ಮಾಡಬಹುದು ಎಂಬುದರಲ್ಲಿ ನನಗೆ ನಂಬಿಕೆ ಇದೆ. ಆದರೆ ಪಕ್ಷ ಕೇವಲ ಚುನಾವಣೆಗಳಲ್ಲಿ ಗೆಲ್ಲುವುದರಿಂದ ದೇಶಕ್ಕೆ ಯಾವುದೇ ಅನುಕೂಲವಿಲ್ಲ. ಅಶಿಸ್ತು ಮತ್ತು ಭ್ರಷ್ಟಾಚಾರದ ಬಗ್ಗೆ ನಮ್ಮಲ್ಲಿನ ಸಹಿಷ್ಣತಾ ಮನೋಭಾವವನ್ನು ದೂರ ಮಾಡಬೇಕು' ಎಂದು ಅಡ್ವಾಣಿ ಹೇಳಿದರು.

ರಾಮ ಜನ್ಮಭೂಮಿ ರಥ ಯಾತ್ರೆ ಬಗ್ಗೆ ಹೆಮ್ಮೆಪಡಬೇಕು
ಇದೇ ವೇಳೆ 1992ರ ರಾಮ ಜನ್ಮ ಭೂಮಿ ಚಳುವಳಿಯ ಕುರಿತು ಮಾತನಾಡಿದ ಅಡ್ವಾಣಿ, ತಮ್ಮ ಯಾತ್ರೆ ಮತ್ತು ಆ ಸಂದರ್ಭಗಳಲ್ಲಿ ತಾವು ತೆಗೆದುಕೊಂಡ ನಿರ್ಧಾರಗಳ ಕುರಿತು ತಮಗೆ ಹೆಮ್ಮೆ ಇದ್ದು, ಪಕ್ಷ ಕೂಡ ಈ ಬಗ್ಗೆ ಗೌರವಪಡಬೇಕು ಎಂದು ಹೇಳಿದರು.

ಅಂತೆಯೇ ಅಯೋಧ್ಯ ಚಳುವಳಿ ಕುರಿತು ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಅವರು ನೀಡಿದ್ದ ಹೇಳಿಕೆಯನ್ನು ನೆನಪಿಸಿದ ಅಡ್ವಾಣಿ, ಮುಲಾಯಂ ಸಿಂಗ್ ಅವರ ಹೊಗಳಿಕೆಯಿಂದಾಗಿ ಜನರಲ್ಲಿ ನನ್ನ ಬಗ್ಗೆ ಕಾಳಜಿ ಮೂಡಿದೆ. ನಾವು ಮಾಡುವ ಕೆಲಸ ನಮಗೆ ಸರಿ ಎಂದು ಅನಿಸಿದರೆ ಪ್ರಪಂಚಕ್ಕೂ ಕೂಡ ಅದು ಸರಿಯಾಗಿಯೇ ಕಾಣುತ್ತದೆ. ನಾವು ಮಾಡುವ ಯಾವುದೇ ಕೆಲಸದಲ್ಲಿಯೂ ನಾವು ಕೀಳರಿಮೆ ಬೆಳೆಸಿಕೊಳ್ಳಬಾರದು. ಅಯೋಧ್ಯ ವಿಚಾರವನ್ನು ಚಳುವಳಿಯಾಗಿ ಮಾರ್ಪಡಿಸಿದ ನಮ್ಮ ನಿರ್ಧಾರಕ್ಕೆ ನಾವು ಯಾರ ಬಳಿಯೂ ಕ್ಷಮೆ ಕೋರುವ ಅಗತ್ಯವಿಲ್ಲ. ಬದಲಿಗೆ ನಾವು ಹೆಮ್ಮೆಪಡಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.