ಈಗಿನ ಸುದ್ದಿ

ಬ್ರಿಟನ್ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ನಿಧನ

ಬ್ರಿಟನ್ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ನಿಧನ
Published On :

ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರು ಸೋಮವಾರ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
 
ಥ್ಯಾಚರ್ ಅವರು ಇಂದು ಸಂಜೆ ಖಾಸಗಿ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ವಕ್ತಾರ ಲಾರ್ಡ್ ಬೆಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪಾರ್ಶ್ವವಾಯುವಿನಿಂದಾಗಿ ಕಳೆದ ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮಾರ್ಗರೇಟ್ ಅವರನ್ನು ಇತ್ತೀಚೆಗೆ ಲಂಡನ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದರು ಎಂದು ಬೆಲ್ ತಿಳಿಸಿದರು.

ಉಕ್ಕಿನ ಮಹಿಳೆ ಎಂದು ಕರೆಸಿಕೊಳ್ಳುತ್ತಿದ್ದ ಮಾರ್ಗರೇಟ್ ಥ್ಯಾಚರ್, ಬ್ರಿಟನ್ ದೇಶದ ಏಕೈಕ ಮಹಿಳಾ ಪ್ರಧಾನಿಯಾಗಿದ್ದರು. 1979ರಲ್ಲಿ ಬ್ರಿಟನ್ ದೇಶದ ಪ್ರಧಾನಿಯಾದ ಮಾರ್ಗರೇಟ್, 1990 ನವೆಂಬರ್ 28ರಂದು ನಿವೃತ್ತಿಯಾದರು.

1982ರಲ್ಲಿ ಫಾಲ್ಕ್ ಲ್ಯಾಂಡ್ ದ್ವೀಪಕ್ಕಾಗಿ ಅರ್ಜೆಂಟೀನಾ ದೇಶದ ವಿರುದ್ಧ ನಡೆದ ಯುದ್ಧದಲ್ಲಿ ಮಾರ್ಗರೇಟ್ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದಾಗಿ ಅವರನ್ನು ದೇಶಾದ್ಯಂತ ಉಕ್ಕಿನ ಮಹಿಳೆ ಎಂದು ಕರೆಯುತ್ತಿದ್ದರು. 1983ರಲ್ಲಿ ಯುದ್ಧವನ್ನು ಜಯಿಸುವ ಮೂಲಕ ದ್ವೀಪದ ಮೇಲೆ ಬ್ರಿಟನ್ ತನ್ನ ಅಧಿಕಾರ ಸ್ಥಾಪಿಸಿತ್ತು.

ಮೃತ ಮಾರ್ಗರೇಟ್ ಥ್ಯಾಚರ್ ಅವರು ಮಾರ್ಕ್ ಥ್ಯಾಚರ್ ಮತ್ತು ಕ್ಯಾರಲ್ ಥ್ಯಾಚರ್ ಎಂಬ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮಾರ್ಗರೇಟ್ ಅವರ ಪಾರ್ಥೀವ ಶರೀರವನ್ನು ಲಂಡನ್ನಿನ ಅವರ ಬಂಗಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.