ಈಗಿನ ಸುದ್ದಿ

ನಿಮ್ಮ ತವರಿಗೆ ಹೋಗಿ: ಉ.ಕೊರಿಯಾ ಎಚ್ಚರಿಕೆ

Published On :

ಪ್ಯೋಂಗ್‌ಯಾಂಗ್: ದಕ್ಷಿಣ ಕೊರಿಯಾ ದೇಶವನ್ನು ಶೀಘ್ರವೇ ತೊರೆಯಿರಿ ಎಂದು ಉತ್ತರ ಕೊರಿಯಾ ಆ ದೇಶದ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದೆ.

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ನಡುವಿನ ಶೀತಲ ಸಮರ ತಾರಕಕ್ಕೇರಿದ್ದು, ದ.ಕೊರಿಯಾವನ್ನು ತೊರೆಯುವಂತೆ ಪ್ರವಾಸಿಗರಿಗೆ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್‌ಎ)ಯಲ್ಲಿ ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ. 'ದಕ್ಷಿಣ ಕೊರಿಯಾದಲ್ಲಿರುವ ಎಲ್ಲ ದೇಶಗಳ ಪ್ರವಾಸಿಗರು ಶೀಘ್ರ ಆ ದೇಶವನ್ನು ತೊರೆಯಬೇಕು', ಇಲ್ಲವಾದಲ್ಲಿ ಮುಂದಾಗುವ ಯಾವುದೇ ಅನಾಹುತಗಳಿಗೆ ತಾವು ಜವಾಬ್ದಾರರಲ್ಲ ಎಂದು ಉತ್ತರ ಕೊರಿಯಾದ ಸೈನಿಕಾಧಿಕಾರಿಗಳು ಕೆಸಿಎನ್‌ಎಗೆ ನೀಡಿರುವ ರೇಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.

ಕೊರಿಯಾ ದೇಶಗಳ ನಡುವಿನ ಶೀತಲ ಸಮರ ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ಯಾವುದೇ ಸಂದರ್ಭದಲ್ಲಿ ಬೇಕಾದರೂ ಯುದ್ಧ ಸಂಭವಿಸಬಹುದು. ಇದಕ್ಕಾಗಿ ಉಭಯ ದೇಶಗಳ ಸೈನಿಕರು ಗಡಿಯಲ್ಲಿ ಯುದ್ಧ ಸನ್ನದ್ಧರಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಅಮೆರಿಕಾ ತನ್ನ ಅತ್ಯಾಧುನಿಕ ಯುದ್ಧ ನೌಕೆಗಳನ್ನು ಮತ್ತು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ದ.ಕೊರಿಯಾಕ್ಕೆ ರವಾನಿಸಿತ್ತು. ಆದರೆ ಉಭಯ ದೇಶಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ಮತ್ತು ಯುದ್ಧ ಸಂಭವಿಸದಂತೆ ತಡೆಯಲು ಅಂತಾರಾಷ್ಟ್ರೀಯ ಸಂಘಟನೆಗಳು ಪ್ರಯತ್ನಿಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.