ಈಗಿನ ಸುದ್ದಿ

ರಾಜ್ಯ ಚುನಾವಣೆ: 5 ಕ್ಷೇತ್ರದಿಂದ ಎಐಎಡಿಎಂಕೆ ಸ್ಪರ್ಧೆ

Published On :

ಚೆನ್ನೈ: ಮೇ 5 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ಪಕ್ಷದ ವತಿಯಿಂದ ಐದು ಮಂದಿಗೆ ಟಿಕೆಟ್ ನೀಡಿ ಚುನಾವಣೆಗೆ ನಿಲ್ಲಿಸಲ್ಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ತಮ್ಮ ಎಐಎಡಿಎಂಕೆಯ ಸದಸ್ಯರನ್ನು ನಿಲ್ಲಿಸುವ ಕುರಿತು ಪಕ್ಷದ ಅಧ್ಯಕ್ಷೆ ಜಯಲಲಿತಾ ಅವರು ಈಗಾಗಲೇ ತೀರ್ಮಾನ ಕೈಗೊಂಡಿದ್ದಾರೆ ಎಂದು ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.

ಎಐಎಡಿಎಂಕೆಯಿಂದ ಸ್ಪರ್ಧಿಸುತ್ತಿರುವ ಪುಗಳೆಂದಿ ಅವರು ಬೆಂಗಳೂರಿನ ಗಾಂಧಿನಗರದಿಂದ ಸ್ಪರ್ಧಿಸುತ್ತಿದ್ದು, ಪಕ್ಷದ ಸ್ಥಳೀಯ ವಿಭಾಗದ ಮುಖ್ಯಸ್ಥರಾಗಿರುವ ಕೆ.ಮುನಿಸ್ವಾಮಿ ಅವರು ಪ್ರತಿಷ್ಠಿತ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಉಳಿದಂತೆ ಎಂ.ಅನ್ಬುಕುಮಾರ್ ಕೊಲಾರದ ಕೆಜಿಎಫ್ ಕ್ಷೇತ್ರದಿಂದ, ಆರ್.ರವೀಂದ್ರ ಕುಮಾರ್ ನರಸಿಂಹರಾಜ ಕ್ಷೇತ್ರದಿಂದ ಮತ್ತು ಹನೂರು ಕ್ಷೇತ್ರದಿಂದ ಎಂ.ರವಿ ಸ್ಪರ್ಧಿಸಲಿದ್ದಾರೆ.

ಒಟ್ಟಾರೆ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆ ಪ್ರವೇಶಿಸಲು ಜಯಲಲಿತಾ ಕಸರತ್ತು ನಡೆಸಿದ್ದಾರೆ. ಕಾವೇರಿ ನದಿ ನೀರು ವಿಚಾರವಾಗಿ ಕರ್ನಾಟಕದ ಪಾಲಿನ 'ವಿಲನ್‌' ಆಗಿರುವ ಜಯಲಲಿತಾ ಅವರ ಈ ಐದು ಭಂಟರನ್ನು ಕರ್ನಾಟಕದ ಜನತೆ ಸ್ವೀಕರಿಸುತ್ತಾರೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.