ಭಕ್ತರ ಹೆಗಲಿಗೆ ಚೌಳಿ ಮಠದ ಉಸ್ತುವಾರಿ
ಬೀದರ್: ಬೀದರ್‌ನ ಚೌಳಿ ಮಠದ ಉಸ್ತುವಾರಿಯನ್ನು ತಾತ್ಕಾಲಿಕವಾಗಿ ಭಕ್ತರಿಗೆ ವಹಿಸಲಾಗಿದೆ.
ಮೂವರು ಸ್ವಾಮೀಜಿಗಳ ಅಗ್ನಿ ಪ್ರವೇಶ ಪ್ರಕರಣದಿಂದ ಸೂತ್ರ ಹರಿದ ಗಾಳಿಪಟದಂತಾಗಿದ್ದ ಬೀದರ್‌ನ ಚೌಳಿ ಗ್ರಾಮದ ಮಠದ ಉಸ್ತುವಾರಿಯನ್ನು ಸ್ವತಃ ಆ ಗ್ರಾಮದ ಭಕ್ತರು ವಹಿಸಿಕೊಳ್ಳಲ್ಲಿದ್ದಾರೆ. ಮಠದ ಆವರಣದಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಮಠದಲ್ಲಿ ನಡೆದ ಅವಘಡಗಳ ಹಿನ್ನಲೆಯಲ್ಲಿ ಮಠದ ಸಾಧಕರು, ಹಿರಿಯರ ಆಣತಿಯಂತೆ ತಾತ್ಕಾಲಿಕವಾಗಿ ಮಠವನ್ನು ತೊರೆಯಲಿದ್ದು, ಅವರು ವಾಪಸಾಗುವವರೆಗೂ ಮಠದ ಉಸ್ತುವಾರಿಯನ್ನು ಭಕ್ತರು ನೋಡಿಕೊಳ್ಳಲ್ಲಿದ್ದಾರೆ. ಇಂದು ಮಧ್ಯಾಹ್ನ ಚೌಳಿ ಮಠದ ಆವರಣದಲ್ಲಿ ಭಕ್ತರು ಮತ್ತು ಮಠದ ಕಿರಿಯ ಸ್ವಾಮೀಜಿಗಳು ಸಭೆ ಸೇರಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿದರು.
ಚರ್ಚೆಯ ನಂತರ ಮಠದ ಮೇಲುಸ್ತುವಾರಿಯನ್ನು ತಾತ್ಕಾಲಿಕವಾಗಿ ಭಕ್ತರಿಗೆ ವಹಿಸಲಾಗಿದ್ದು, ಮಠದ ಉಸ್ತುವಾರಿಗಾಗಿ ಯಾವುದೇ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿಲ್ಲ. ಹೀಗಾಗಿ ಮಠದ ಸಾಧಕರು ಮತ್ತು ಕಿರಿಯ ಸ್ವಾಮೀಜಿಗಳು ವಾಪಸಾಗುವವರೆಗೂ ಮಠದಲ್ಲಿ ಭಕ್ತರಿಂದಲೇ ಪೂಜೆ-ಪುನಸ್ಕಾರಗಳು ನಡೆಯಲಿವೆ.
ಅಲ್ಲದೆ ಪ್ರತಿ ತಿಂಗಳ ದಿನಾಂಕ 28ರಂದು ಭಕ್ತರು ಮತ್ತು ಮಠದ ಸಿಬ್ಬಂದಿಗಳು ಸಭೆ ಸೇರಿ ಮಠದ ಕಾರ್ಯಕ್ರಮಗಳು ಮತ್ತು ತೆಗೆದುಕೊಳ್ಳ ಬೇಕಾದ ತೀರ್ಮಾನಗಳ ಕುರಿತು ಚರ್ಚಿಸಲಿದ್ದಾರೆ. ಈ ನಡುವೆ ಕಿರಿಯ ಸ್ವಾಮೀಜಿಗಳು ಅಗ್ನಿಗಾಹುತಿಯಾದ ಹಿನ್ನಲೆಯಲ್ಲಿ ಮಠವನ್ನು ಶುದ್ಧೀಕರಿಸುವಾಗ ಮಠದಲ್ಲಿ ಚಿನ್ನದ ಉಂಗುರ ಮತ್ತು ಬೆಳ್ಳಿ ಕಿರೀಟಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಮಠದಲ್ಲಿ ಇತ್ತೀಚೆಗೆ ನಡೆದ ಕೆಲ ನಿಗೂಢ ಘಟನೆಗಳು ಮಠದ ಭಕ್ತರ ಮೇಲೆ ತೀವ್ರ ಪರಿಣಾಮ ಬೀರಿದಂತಿವೆ. ಈ ಹಿನ್ನಲೆಯಲ್ಲಿ ಭಕ್ತರೇ ಸ್ವಹಿತಾಸಕ್ತಿಯಿಂದ ಮಠದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಸಕಾರತ್ಮಕ ಬೆಳವಣಿಗೆ ಎನ್ನಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

