ಈಗಿನ ಸುದ್ದಿ

ಛತ್ತೀಸ್‌ಗಡದಲ್ಲಿ ಮತ್ತೆ ಎನ್‌ಕೌಂಟರ್: 10 ನಕ್ಸಲರ ಸಾವು

ಛತ್ತೀಸ್‌ಗಡದಲ್ಲಿ ಮತ್ತೆ ಎನ್‌ಕೌಂಟರ್: 10 ನಕ್ಸಲರ ಸಾವು
Published On :

ಛತ್ತೀಸ್‌ಗಡ: ಛತ್ತೀಸ್‌ಗಡದಲ್ಲಿ ಮತ್ತೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಎನ್‌ಕೌಂಟರ್‌ಗೆ 10 ನಕ್ಸಲರು ಬಲಿಯಾಗಿದ್ದಾರೆ.

ಛತ್ತೀಸ್‌ಗಡದ ಬಸ್ತಾರ್ ಗ್ರಾಮದ ಸಮೀಪದಲ್ಲಿರುವ ದಟ್ಟಡವಿಯಲ್ಲಿ ನಕ್ಸಲರು ಇರುವ ಕುರಿತು ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು, ಇಂದು ಬೆಳ್ಳಂಬೆಳಗ್ಗೆಯೇ ಕಾರ್ಯಚರಣೆ ನಡೆಸಿದವು. ಕಾರ್ಯಾಚರಣೆಗಾಗಿ ಮೊದಲೇ ಸಿದ್ಧಪಡಿಸಿಕೊಂಡಿದ್ದ ಆಂಧ್ರಪ್ರದೇಶದ ನಕ್ಸಲ್ ನಿಗ್ರಹದಳದ ಸಿಬ್ಬಂದಿಗಳು ಮತ್ತು ಭದ್ರತಾ ಪಡೆಗಳು ಒಮ್ಮೆಲೆ ನಕ್ಸಲರ ಮೇಲೆ ಗುಂಡಿನ ದಾಳಿ ನಡೆಸಿ 10 ಮಾವೊವಾದಿಗಳನ್ನು ಕೊಂದುಹಾಕಿದ್ದಾರೆ.

ಮೃತ ಮಾವೋವಾದಿಗಳು ಆಂಧ್ರಪ್ರದೇಶ ಮೂಲದವರೆಂದು ತಿಳಿದು ಬಂದಿದ್ದು, ಎಲ್ಲರೂ ಗೆರಿಲ್ಲಾ ಪಡೆಯ ಸದಸ್ಯರು ಎಂದು ಗುರುತಿಸಲಾಗಿದೆ. ಸುಮಾರು 100 ಮಂದಿ ನಕ್ಸಲರು ಅಡವಿಯ ಒಳಗಿರುವ ಕುರಿತು ಮಾಹಿತಿ ಪಡೆದಿರುವ ಭದ್ರತಾ ಪಡೆಗಳ ಸಿಬ್ಬಂದಿಗಳು, ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ತಿಳಿಸಿವೆ. ಇದಕ್ಕಾಗಿ ಸಮೀಪದ ಪಾಮೆದ್ ಗ್ರಾಮದ ಪೊಲೀಸ್ ಠಾಣೆಯ ನೆರವನ್ನು ಕೊರಲಾಗಿದೆ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಡಿಜಿಪಿ ರಾಮ್‌ನಿವಾಸ್ ಅವರು ತಿಳಿಸಿದ್ದಾರೆ.

'ನಿನ್ನೆ ತಡರಾತ್ರಿ ಅಡವಿಯಲ್ಲಿ ನಕ್ಸಲರಿರುವ ಮಾಹಿತಿ ತಿಳಿಯಿತು. ರಾತ್ರಿಯೇ ನಾವು ಕಾರ್ಯಾಚರಣೆಗೆ ಸಿದ್ದರಾಗಿ ಬಂದೆವು. ಸುಮಾರು ನಾಲ್ಕೈದು ಗಂಟೆಗಳ ಕಾಲ ನಡೆದ ಈ ಭಾರಿ ಗುಂಡಿನ ಕಾಳಗದಲ್ಲಿ 10 ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ. ಇದು ನಮಗೆ ದೊರೆತ ದೊಡ್ಡ ಯಶಸ್ಸಾಗಿದೆ ಎಂದು ರಾಮ್‌ನಿವಾಸ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.