ಸೆಟ್ಟಾಪ್ ಬಾಕ್ಸ್ ಕಡ್ಡಾಯಕ್ಕೆ 'ಹೈ' ಅಸ್ತು

ಬೆಂಗಳೂರು: ಕೇಬಲ್ ಡಿಜಿಟಲೀಕರಣಕ್ಕೆ ಕರ್ನಾಟಕ ಹೈಕೋರ್ಟ್ ಸಮ್ಮತಿ ಸೂಚಿಸಿದ್ದು, ಸೆಟ್ಟಾಪ್ ಬಾಕ್ಸ್ ಅಳವಡಿಸಿಕೊಳ್ಳಲು ನೀಡಿದ್ದ ಗಡುವನ್ನು ವಿಸ್ತರಿಸದಿರಲು ನ್ಯಾಯಾಲಯ ತೀರ್ಮಾನಿಸಿದೆ.
ಕೇಬಲ್ ಕ್ಷೇತ್ರದಲ್ಲಿ ಈಗಿರುವ ಅನಲಾಗ್ ವ್ಯವಸ್ಥೆಯ ಬದಲಾಗಿ, ಡಿಜಿಟಲ್ ವ್ಯವಸ್ಥೆಯನ್ನು ತರುವ ಕೇಂದ್ರ ಸರ್ಕಾರದ ಯೋಜನೆಗೆ ಇದ್ದ ಅಡೆತಡೆಗಳನ್ನು ಕರ್ನಾಟಕ ಉಚ್ಛ ನ್ಯಾಯಾಲಯ ನಿವಾರಿಸಿದೆ. ಕೇಬಲ್ ಡಿಜಿಟಲೀಕರಣಕ್ಕೆ ಕಾಲಾವಕಾಶ ಕೋರಿ ಬೆಂಗಳೂರು ಮತ್ತು ಮೈಸೂರು ಕೇಬಲ್ ಆಪರೇಟರ್ಸ್ಗಳ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಹೈ ಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದ್ದು, 'ಸೆಟ್ಟಾಪ್ ಬಾಕ್ಸ್ ಕಡ್ಡಾಯ'ಕ್ಕೆ ಅಸ್ತು ಎಂದಿದೆ.
ಸೆಟ್ಟಾಪ್ ಬಾಕ್ಸ್ ಅಳವಡಿಕೆಗೆ ಕೇಂದ್ರ ಸರ್ಕಾರ ಮಾರ್ಚ್ 30ರ ಗಡುವು ನೀಡಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಗಡುವನ್ನು ಇಂದಿನವರೆಗೆ ವಿಸ್ತರಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಎಸ್. ಅಬ್ದುಲ್ ನಾಜಿರ್ ಅವರ ನೇತೃತ್ವದ ಏಕ ಸದಸ್ಯ ಪೀಠ ಕೇಬಲ್ ಆಪರೇಟರ್ಸ್ ಸಂಘಕ್ಕೆ ಏಪ್ರಿಲ್ 16ರವರೆಗೆ ಕಾಲಾವಕಾಶ ನೀಡಿ, ಅನಲಾಗ್ ಸಿಗ್ನಲ್ಗಳನ್ನು ನಿಲ್ಲಿಸದಂತೆ ಕೇಂದ್ರಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಕೇಬಲ್ ಆಪರೇಟರ್ಸ್ಗಳಿಗೆ ನೀಡಿದ್ದ ಗಡುವು ಇಂದಿಗೆ ಮುಕ್ತಾಯಗೊಂಡಿದ್ದು, ಕಾಲಾವಕಾಶವನ್ನು ವಿಸ್ತರಿಸದಿರಲು ನ್ಯಾಯಾಲಯ ತೀರ್ಮಾನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


