ಕಲಾವಿದೆಯರಿಬ್ಬರು ನೀರಿನ ಕೊಳದಲ್ಲಿ ಮುಳುಗಿ ಸಾವು
ಚೆನ್ನೈ: ನಾಯಾಂಡಿ ಚಿತ್ರದಲ್ಲಿ ನಟಿಸುತ್ತಿದ್ದ ಇಬ್ಬರು ಕಲಾವಿದೆಯರು ನೀರಿನ ಕೊಳದಲ್ಲಿ ಮುಳಗಿ ಸಾವನ್ನಪ್ಪಿರುವ ಘಟನೆ ತಿರುವಾರೂರ್ನಲ್ಲಿ ನಡೆದಿದೆ.
ಮೃತರು ತಮಿಳು ಕಲಾವಿದೆಯರಾದ ಸರಸ್ವತಿ(24) ಹಾಗು ವಿಜಿ(21) ಎಂದು ತಿಳಿದುಬಂದಿದೆ.
ನಾಯಾಂಡಿ ಚಿತ್ರದ ಚಿತ್ರಿಕರಣಕ್ಕಾಗಿ ಒಂದು ವಾರದಿಂದ ಚಿತ್ರತಂಡ ತಿರುವಾರೂರ್ನಲ್ಲಿ ಬೀಡು ಬಿಟ್ಟಿತ್ತು. ಶುಕ್ರವಾರ ಚಿತ್ರಿಕರಣ ಇಲ್ಲದ ಸಂದರ್ಭದಲ್ಲಿ ಸಮೀಪದಲ್ಲಿದ ನೀರಿನ ಕೊಳದಲ್ಲಿ ಸ್ನಾನ ಮಾಡಲು ಮೂವರು ಕಲಾವಿದರು ಹೋಗಿದ್ದಾರೆ. ಆ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಕೊಳದ ದಡದಲ್ಲಿ ಸಾನ್ನ ಮಾಡುತ್ತಿದ್ದ ಅವರು, ಕೊಳದಲ್ಲಿ ಕಡಿಮೆ ಆಳವಿದೆ ಎಂದು ಭಾವಿಸಿ ಸ್ವಲ್ಪ ಮುಂದಕ್ಕೆ ಹೋಗಿದ್ದಾರೆ ಆ ಸಂದರ್ಭದಲ್ಲಿ ಈಜು ಭಾರದ ಇಬ್ಬರು ಮುಳಗಿ ಮೃತಪಟ್ಟಿದ್ದಾರೆ. ಸುಕನ್ಯಾ ಎಂಬುವರು ನೀರಿನಲ್ಲಿ ಒದ್ದಾಡುತ್ತಿದುದ್ದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.
ಘಟನೆ ನಂತರ ಸ್ಥಳಕ್ಕೆ ಬಂದ ಪೊಲೀಸರು ಸುಕನ್ಯಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಮೃತದೇಹಗಳನ್ನು ಶವ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ನಾಯಾಂಡಿ ಚಿತ್ರದಲ್ಲಿ ಧನುಶ್ ಹಾಗು ನರ್ಜ್ಜಿಯಾ ನಿಜಾಮ್ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರವನ್ನು ಸರ್ಕುನಮ್ ಅವರು ನಿರ್ದೇಶಿಸುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

