"ಕಳ್ಳರು ಬಂದಿದ್ದಾರೆ ಅಂತಾ ಹಳ್ಳಿಯೊಂದರ ಜನ ಮಧ್ಯರಾತ್ರಿ ಸಿಎಂ ಡಿಕೆಶಿನಾ ಓಡಿಸಿದ್ದಾರೆ: ಎದ್ನೋ ಬಿದ್ನೋ ಅಂತಾ ಓಡಿ ಬಂದವರೆ! HDK ಸಖತ್ ಟಾಂಗ್

ಬೆಂಗಳೂರು: ಕಳ್ಳರು ಬಂದವರೆ ಅಂತಾ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನ ಹಳ್ಳಿಯೊಂದರ ಜನ ಮಧ್ಯ ರಾತ್ರಿ ಓಡಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಶನಿವಾರ ಸಖತ್ ಟಾಂಗ್ ನೀಡಿದ್ದಾರೆ.
ಜಯನಗರದ ಕ್ಲೌಡ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲ ಅಂತಾ ಮುಖ್ಯಮಂತ್ರಿ ಹೇಳ್ತಾರೆ. ಆದರೆ ವಾಸ್ತವ ಸ್ವಲ್ಪ ಭಿನ್ನವಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಿದೆ. ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಎಂದು ಆರೋಪಿಸಿದರು.
ಕಳೆದ 15 ದಿನಗಳ ಹಿಂದೆ ಹಳ್ಳಿಯೊಂದಕ್ಕೆ ಜಮೀನು ನೋಡೋಕೆ ಸಿಎಂ ಹೋಗ್ತಾರೆ. ಯಾರೋ ಕಳ್ಳರು ಬಂದವರೆ ಅಂತಾ ಸಿಎಂನಾ ಹಳ್ಳಿ ಜನ ಓಡಿಸವ್ರೆ. ಎದ್ನೋ ಬಿದ್ನೋ ಅಂತಾ ಸಿಎಂ ಓಡಿ ಬಂದವರೆ ಗೊತ್ತಾ. ಇದು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಲೇವಡಿ ಮಾಡಿದರು.
ನೆಲಮಂಗಲ ಬಳಿಯ ಸೋಂಪುರ ಮತ್ತು ಅದರ ಸುತ್ತಮುತ್ತಲಿನ ಸುಮಾರು 150 ಎಕರೆ ಜಮೀನನ್ನು ನೋಡಲು ಸಿಎಂ ಡಿಕೆ ಶಿವಕುಮಾರ್ ಮಧ್ಯರಾತ್ರಿಯಲ್ಲಿ ಖಾಸಗಿ ಕಾರಿನಲ್ಲಿ ಹೋಗಿದ್ದಾಗ ಈ ಘಟನೆ ನಡೆದಿದೆ. ಕಳ್ಳರು ಬಂದಿದ್ದಾರೆ ಅಂತಾ ಭಾವಿಸಿದ ಹಳ್ಳಿಯ ಜನರು ಸಿಎಂ ಡಿಕೆಶಿನಾ ಬೆನ್ನಟ್ಟಿದ್ದಾರೆ. ಇದು ಸುಳ್ಳಾ ಅಥವಾ ದಿಟ್ಟನಾ ಅನ್ನೋದನ್ನ ಅವರನ್ನೇ ಕೇಳಿ ಎಂದು ಕುಮಾರಸ್ವಾಮಿ ಹೇಳಿದರು.
ಭ್ರಷ್ಟಾಚಾರ ಅನ್ನೋದೆ ಗೊತ್ತಿಲ್ಲವ ಅವರಿಗೆ? ಮೊನ್ನೆ ತಾನೆ 20 ಗುಂಟೆ ಜಮೀನಿಗೆ ರೆವಿನ್ಯೂ ಇನ್ಸ್ಪೆಕ್ಟರ್ 50 ಸಾವಿರ ತಗೊಂಡು ಸಸ್ಪೆಂಡ್ ಆಗಿದ್ದಾನೆ. ಅದು ಭ್ರಷ್ಟಾಚಾರ ಅಲ್ವ? ಅವರ ಮಿನಿಸ್ಟರ್ ಹೇಳಿದಂಗೆ ಅದು ಗೌರವಧನನಾ? ಗೌರವಧನದಿಂದ ದುಡ್ಡು ಕೊಡಬೇಕು ಅಂದರಲ್ಲ ಅದು ಭ್ರಷ್ಟಾಚಾರ ಅಂದ್ರೆ. ಎಷ್ಟೇ ಕಡೆ ಕೆಲಸ ಮಾಡೋಕೆ ಹೋಗಿ ದುಡ್ಡು ತಗೊಂಡು ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ದಾಖಲೆಗಳು ಟನ್‌ಗಟ್ಟಲೆ ಇವೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಜಪಾನ್‌ಗೆ ಹೋದರು. ಕುಮಾರಸ್ವಾಮಿ ಮತ್ತು ದೇವೇಗೌಡರದ್ದು ಸಾಕ್ಷಿ ಗುಡ್ಡೆ ಕೇಳ್ತಾರೆ. ಟೊಯೊಟಾ ಕಂಪನಿ ತಂದದ್ದು ದೇವೇಗೌಡರು. ಹರಿಯಾಣಗೋ, ಮಹಾರಾಷ್ಟ್ರಕ್ಕೋ ಹೋಗ್ತಿತ್ತು. ದೇವೇಗೌಡರು ರಿಕ್ವೆಸ್ಟ್ ಮಾಡಿ ಟೊಯೊಟಾ ತಂದರು. ಕಾಂಗ್ರೆಸ್ ಅವರು ಅದಕ್ಕೆ ಮರಳು, ಇಟ್ಟಿಗೆ ಅಂತಾ ಹೊಡೆದು ದುಡ್ಡು ಮಾಡಿದ್ರು. ಆ ಕೆಲಸ ನಾವು ಮಾಡಲಿಲ್ಲ. ಪ್ರಾಜೆಕ್ಟ್ 4 ಇದೆಯಲ್ಲ ಅದನ್ನ ಮಹಾರಾಷ್ಟ್ರಗೆ ಯಾಕ್ ಇನ್ವೆಸ್ಟ್ ಮಾಡೋದಕ್ಕೆ ಹೋದರು? ಇವರು ಭ್ರಷ್ಟಾಚಾರದ ಬಗ್ಗೆ ಮಾತಾಡೋ ಎಂದು ಗುಡುಗಿದರು.
ಕೇಂದ್ರ ಸರ್ಕಾರಕ್ಕೆ ಹೇಳಿ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಕೊಡಿಸಲಿ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನನ್ನ ಹೆಸರು ರೆಫರ್ ಮಾಡವರೆ. ಕೇಂದ್ರ ಸರ್ಕಾರಕ್ಕೆ ಕೇಳಿ ದುಡ್ಡು ಕೊಡಿಸಿ ಅಂತಾ. ಕೇಂದ್ರ ಸರ್ಕಾರದಿಂದ ಕೊಡುವಂತಹದ್ದು ಬೇರೆ. ರಾಜ್ಯ ಸರ್ಕಾರ ಏನು ಮಾಡಿದೆ ಅದು ಹೇಳಿ. ಮೊದಲು ರಾಜ್ಯ ಸರ್ಕಾರ ಏನು ಕೊಡ್ತಿದೆ ಅದು ಹೇಳಿ ಎಂದರು.

'ಸ್ಟಿಂಗ್ ಆಪರೇಷನ್' ವಿಡಿಯೋ ಬಿಡುಗಡೆಗೆ HDK ಸಂಚು; ಡಿ.ಕೆ ಶಿವಕುಮಾರ್ ವಿರುದ್ಧ ಷಡ್ಯಂತ್ರ: ಚಲುವರಾಯಸ್ವಾಮಿ
ಈ ಹಿಂದೆ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನ ದೆಹಲಿಯಲ್ಲಿ ಕರೆಸಿ ಎರಡು ಇಲಾಖೆಗಳ ಜೊತೆ ಮಾತನಾಡಿಸಿದ್ದೇನೆ. ಅದು ಏನಾಗುತ್ತೋ ನೋಡೋಣ. 15 ಸಾವಿರ ಕೊಡ್ತೀವಿ ಅಂತಾ ಪ್ರಣಾಳಿಕೆಯಲ್ಲಿ ಹೇಳಿ ನೀವು ಮಾಡ್ತಾ ಇರೋದು ಏನು. 12 ದಿನ ಆಯ್ತು ಆ ಹೆಣ್ಣುಮಕ್ಕಳು ಚಳಿ ಮಳೆ ಮಧ್ಯೆ ಅವರೇ. ಕೇಂದ್ರ ಸರ್ಕಾರ ನೇಮಕ ಮಾಡಿಕೊಂಡಿರುವುದು ಅಂತಾ ಹೇಳ್ತೀರಾ. ನೇಮಕ ಮಾಡಿಕೊಳ್ಳಬೇಕಾದ್ರೆ ಯಾಕ್ ವಿರೋಧ ಮಾಡಲಿಲ್ಲ ಹೇಳಿ? ರಾಜ್ಯ ಸರ್ಕಾರ ಮೊದಲು ಕೊಡಲಿ ಆಮೇಲೆ ಕೇಂದ್ರ ಸರ್ಕಾರದ್ದು ಮಾತಾಡೋಣ ಎಂದು ಸಿಎಂಗೆ ತಿರುಗೇಟು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


