ಈಗಿನ ಸುದ್ದಿ

ಸಹಖೈದಿಗಳಿಂದ ಸರಬ್ಜಿತ್ ಕೊಲೆಗೆ ಸಂಚು: ವರದಿ

Published On :

ಲಾಹೋರ್: ಭಾರತೀಯ ಮೂಲದ ಖೈದಿ ಸರಬ್ಜಿತ್ ಸಿಂಗ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ತನಿಖಾ ವರದಿ ಹೇಳಿದೆ.

ಸರಣಿ ಬಾಂಬ್ ಸ್ಪೋಟ ನಡೆಸಿದ ಸರಬ್ಜಿತ್ ಸಿಂಗ್‌ನ ಮೇಲೆ ಸೇಡು ತೀರಿಸಿಕೊಳ್ಳವ ಉದ್ದೇಶದಿಂದ ಆತನ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ಹಲ್ಲೇ ಮಾಡಿದ ಪ್ರಮುಖ ಆರೋಪಿ ತನಿಖಾ ಅಧಿಕಾರಿಗಳಿಗೆ ತಿಳಿಸಿದ್ದಾನೆ.

ಗಲ್ಲು ಶಿಕ್ಷೆಗೆ ಒಳಗಾಗಿರುವ ಅಮರ್ ಅಫ್ತಾಬ್ ಮತ್ತು ಮುಧಾಸರ್ ಎಂಬ ಇಬ್ಬರು ಸಹಖೈದಿಗಳು ಸರಬಜಿತ್ ಸಿಂಗ್ ಮೇಲೆ ಹಲ್ಲೇ ಮಾಡಿದ ಪ್ರಮುಖ ಆರೋಪಿಗಳು. 1990 ಲಾಹೋರನಲ್ಲಿ ಸರಣಿ ಬಾಂಬ್ ಸ್ಫೋಟಿಸಿ ಅನೇಕ ಪಾಕಿಸ್ತಾನ ಪ್ರಜೇಗಳನ್ನಾ ಹತ್ಯೆ ಮಾಡಿದ್ದಾನೆ ಎಂಬ ಸೇಡಿನ ಮೇಲೆ ಅವನನ್ನು ಕೊಲೆ ಮಾಡಲು ಯತ್ನಿಸಿಲಾಗಿದೆ ಎಂದು ಜೈಲು ಅಧಿಕಾರಿ ಮಲಿಖ್ ಮುಬಾಶಿರ್ ಹೇಳಿದ್ದಾರೆ.

ಪಂಜಾಬ್ ಪ್ರಾಂತ್ರ್ಯದ ಗೃಹ ಇಲಾಖೆಗೆ ಜೈಲು ಅಧಿಕಾರಿ ತನಿಖಾ ವರದಿ ಸಲ್ಲಿಸಿದ್ದಾರೆ.
 1990 ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಸರಬ್ಜಿತ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಅವರ ಕ್ಷಮಾದಾನ ಅರ್ಜಿಯನ್ನೂ ತಿರಸ್ಕರಿಸಲಾಗಿತ್ತು. ಕೋಟ್ ಲಖ್‌ಪತ್ ಜೈಲಿನಲ್ಲಿದ್ದ ಸರಬ್ಜಿತ್ ಮೇಲೆ ಶುಕ್ರವಾರ ಸಂಜೆ 6 ಮಂದಿ ಕೈದಿಗಳು ಹಲ್ಲೆ ನಡೆಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸರಬ್ಜಿತ್‌ರನ್ನು ನಂತರ ಜೈಲಿನ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು.
ಗಂಭೀರ ಹಲ್ಲೆಗೊಳಗಾಗಿದ್ದ  ಸರಬ್ಜಿತ್ ಸಿಂಗ್ ತೀವ್ರ ಕೋಮಾವಸ್ಥೆಗೆ ತಲುಪಿದ್ದಾರೆ. ಅವರ ತಲೆಗೆ ತೀವ್ರತರ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮುಂದಿನ 24 ಗಂಟೆಗಳ ಕಾಲ ಸರಬ್ಜಿತ್ ಸ್ಥಿತಿ ಬಗ್ಗೆ ಹೇಳುವಂತಿಲ್ಲ ಎಂದು ಪಾಕ್‌ನ ಜಿನ್ನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.