ಭಾರತೀಯ ಸೈನಿಕರಿಂದ ದಾಳಿ ಇಬ್ಬರಿಗೆ ಗಾಯ: ಪಾಕ್ ಆರೋಪ
ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನ ಸೈನಿಕರು ಐವರು ಭಾರತೀಯ ಯೋಧರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಬೆನ್ನಲ್ಲೇ, ಭಾರತೀಯ ಯೋಧರು ಪಾಕಿಸ್ತಾನ ಸೈನಿಕರ ಮೇಲೆ ಗುಂಡಿನ ದಾಳಿ ಮಾಡಿ ಇಬ್ಬರು ಸೈನಿಕರನ್ನು ಗಾಯಗೊಳಿಸಿದ್ದಾರೆ ಎಂದು ಬುಧವಾರ ಪಾಕಿಸ್ತಾನ ಆರೋಪಿಸಿದೆ.
ಕಳೆದ ರಾತ್ರಿ ಉತ್ತರ ಕಾಶ್ಮೀರದ ಕಮಲ್ಕೋಟ್ ಊರಿ ಸೆಕ್ಟರ್ ಬಳಿ ಭಾರತೀಯ ಯೋಧರು ಹಾಗೂ ಪಾಕಿಸ್ತಾನಿ ಯೋಧರ ನಡುವಿನ ಗುಂಡಿನ ದಾಳಿಯಲ್ಲಿ ಇಬ್ಬರು ಪಾಕ್ ಸೈನಿಕರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನಾ ಅಧಿಕಾರಿಗಳ ಹೇಳಿಕೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಪಾಕಿಸ್ತಾನ ಭಾರತ ಯೋಧರ ಕೃತ್ಯವನ್ನು ಖಂಡಿಸಿದೆ.
ಗಡಿ ಭಾಗದಲ್ಲಿ ಪ್ರಕ್ಷುಬ್ಧ ವಾತವರಣ ಸೃಷ್ಟಿಯಾಗಿದ್ದು, ಈ ಸಂಬಂಧ ಎರಡು ಕಡೆಯ ಹಿರಿಯ ಕಮಾಂಡರ್ಗಳು ಸಭೆ ಸೇರಿ ಚರ್ಚಿಸಿದರು. ಪಾಕಿಸ್ತಾನ ಸೇನೆಯ ಪ್ರಧಾನ ನಿರ್ದೇಶಕ(ಡಿಜಿಎಂಒ) ಅವರು, ಪಾಕಿಸ್ತಾನ ಗಡಿ ಉಲ್ಲಂಘನೆ ಮಾಡಿಲ್ಲ. ಹೀಗಾಗಿ ಭಾರತೀಯ ಸೇನೆ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.
ಗಡಿಭಾಗದಲ್ಲಿ ಮೊದಲು ಪಾಕಿಸ್ತಾನಿ ಸೈನಿಕರು ಮುಂದಾಗಿ ದಾಳಿ ಮಾಡಿದ್ದರಿಂದ ಭಾರತೀಯ ಸೇನೆ ದಾಳಿ ಮಾಡಬೇಕಾಯಿತು ಎಂದು ಸೇನೆ ಅಧಿಕಾರಿಗಳು ಹೇಳಿದ್ದರು. ಗಡಿಯಲ್ಲಿ ಪಾಕ್-ಭಾರತೀಯ ಯೋಧರ ನಡುವೆ ನಿರಂತರವಾಗಿ ಗುಂಡಿನ ದಾಳಿಗಳು ನಡೆಯುತ್ತಿದ್ದು, ಉಭಯ ರಾಷ್ಟ್ರಗಳಲ್ಲಿ ಶಾಂತಿ ಕದಡಲು ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

