ಮೋದಿ ವಿರುದ್ಧ ಬಾಲಿವುಡ್ ನಟ ರಝಾ ಮುರಾದ್ ಟೀಕೆ
ಭೂಪಾಲ್: ತಾನೊಬ್ಬ ಜಾತ್ಯಾತೀತವಾದಿ ಎಂದು ಹೇಳುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಜಾತ್ಯಾತೀತವಾದಿ ಅಲ್ಲ. ಆದರ್ಶ ಜಾತ್ಯಾತೀತವಾದಿ ಎಂದರೆ ಅದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವಾಜಿ ಸಿಂಗ್ ಚೌಹಾಣ್ ಎಂದು ಬಾಲಿವುಡ್ ನಟ ರಝಾ ಮುರಾದ್ ಅವರು ಶುಕ್ರವಾರ ಹೇಳಿದ್ದಾರೆ.
ಈದ್ ಹಬ್ಬದ ಆಚರಣೆ ಸಂದರ್ಭ ಚೌಹಾಣ್ ಅವರು ಮುಸ್ಲೀಮರು ಧರಿಸುವಂತೆ ಟೋಪಿ ಧರಿಸಿ, ಮುಸ್ಲೀಮರೊಂದಿಗೆ ಅನ್ಯೂನತೆಯಿಂದ ಇದ್ದು, ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು. ಆದರೆ 2011ರ ಈದ್ ಮುಬಾರಕ್ ವೇಳೆ ಮುಸ್ಲೀಮರು ಧರಿಸುವ ಟೋಪಿಯನ್ನು ಹಾಕಿಕೊಳ್ಳಲು ಮೋದಿ ವಿರೋಧಿಸಿದ್ದರು ಇದರಿಂದ ತಿಳಿಯುತ್ತದೆ ನಿಜವಾದ ಜಾತ್ಯಾತೀತವಾದಿ ಯಾರು ಎಂದು ಮುರಾದ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುರಾದ್ ಅವರು, ಮಧ್ಯಪ್ರದೇಶ ಮುಖ್ಯಮಂತ್ರಿ ಚೌಹಾಣ್ ಅವರಿಂದ ಇತರ ಮುಖ್ಯಮಂತ್ರಿಗಳು ಕಲಿಯಬೇಕಾಗಿರುವುದು ತುಂಬಾ ಇದೆ. ಟೋಪಿ ಧರಿಸುವುದರಿಂದ ಯಾರದೇ ಧರ್ಮಕ್ಕೆ ಕೆಡಕಾಗುವುದಿಲ್ಲ ಎಂದರು.
ಹಬ್ಬ ಹರಿದಿನಗಳಲ್ಲಿ ಭಾಗವಹಿಸುವುದರಿಂದ ತಮ್ಮ ಧರ್ಮಕ್ಕೆ ಧಕ್ಕೆ ಉಂಟಾಗುವುದಿಲ್ಲ. ಶಿವಾಜಿ ಅವರು ಪ್ರತಿ ವರ್ಷ ಟೋಪಿ ಧರಿಸಿ, ರಂಜಾನ್‌ನಲ್ಲಿ ಪಾಲ್ಗೊಂಡು ಸಮಸ್ತ ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸುತ್ತಾರೆ. ರಂಜಾನ್ ಪ್ರಯುಕ್ತ ಮುಸ್ಲೀಮರು ಟೋಪಿ ಧರಿಸುವುದು ಸಾಮಾನ್ಯ. ಹೀಗಾಗಿ ಟೋಪಿ ಧರಿಸುವುದು ಒಳ್ಳೆಯದು, ಆದರೆ ಕಡ್ಡಾಯವಾಗಿ ಧರಿಸಲೇಬೇಕು ಎನ್ನುವುದು ತಪ್ಪು ಎಂದರು.
ಮುರಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಚೌಹಾಣ್ ಅವರು, ಮುರಾದ್ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಂಜಾನ್ ಪ್ರಯುಕ್ತ ಎಲ್ಲರಿಗು ಶುಭಾಶಯ ತಿಳಿಸಿದರು. ಅಲ್ಲದೆ ದೇಶದಲ್ಲಿ ಯಾರೊಬ್ಬರು ಹಸಿವಿನಿಂದ ಮಲಗಬಾರದು, ದೇಶದ ಉನ್ನತಿಗಾಗಿ ನಾವೆಲ್ಲರು ಶ್ರಮಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

