ಈಗಿನ ಸುದ್ದಿ

ಕಾಂಗ್ರೆಸ್ ತೆಲುಗು ಭಾಷಿಗರನ್ನು ವಿಭಜಿಸಲು ಯತ್ನಿಸುತ್ತಿದೆ: ಟಿಡಿಪಿ ಆರೋಪ

ಕಾಂಗ್ರೆಸ್ ತೆಲುಗು ಭಾಷಿಗರನ್ನು ವಿಭಜಿಸಲು ಯತ್ನಿಸುತ್ತಿದೆ: ಟಿಡಿಪಿ ಆರೋಪ
Published On :

ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಮುಂದಾಗಿರುವ ಕಾಂಗ್ರೆಸ್ ಇದರೊಂದಿಗೆ ತೆಲುಗು ಭಾಷಿಗರನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯ ಮುಖ್ಯಸ್ಧ ಎನ್. ಚಂದ್ರಬಾಬು ನಾಯ್ಡು ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಆಂಧ್ರಪ್ರದೇಶ ವಿಭಜನೆಗೆ ಸಂಬಂಧ ಜುಲೈ 30 ರಂದು ನಡೆದ ಕಾಂಗ್ರೆಸ್ ಕಾರ್ಯಾಕಾರಿ ಸಮಿತಿ(ಸಿಡಬ್ಲೂಸಿ) ಭಾಗವಹಿಸಿದ್ದ ಸಂದರ್ಭದಲ್ಲಿ ನಾಯ್ಡು ಅವರು, ತೆಲಂಗಾಣ ರಾಜ್ಯ ರಚನೆಗೆ ಸಮಿತಿಯ ಕೈಗೊಂಡಿದ್ದ ಕ್ರಮವನ್ನು ಖಂಡಿಸಿದ್ದರು. ಅಲ್ಲದೆ ತೆಲಂಗಾಣ ಹಾಗೂ ಸೀಮಾಂಧ್ರದ ತೆಲುಗು ಭಾಷಿಗರನ್ನು ಪ್ರತ್ಯೇಕಿಸಲು ಮುಂದಾಗುತ್ತಿದ್ದು, ಕಾಂಗ್ರೆಸ್‌ನ ಈ ಕ್ರಮ ಸರಿಯಲ್ಲ ಎಂದು ಹೇಳಿದರು.

ಅಖಂಡ ಆಂಧ್ರಪ್ರದೇಶಕ್ಕಾಗಿ ಆಗ್ರಹಿಸಿ ಸೀಮಾಂಧ್ರ ಹಾಗೂ ರಾಯಲಸೀಮಾಗಳಲ್ಲಿ ಹೋರಾಟದ ಕಿಚ್ಚು ಹೆಚ್ಚಾಗುತ್ತಿದ್ದು, ಅಖಂಡ ಆಂಧ್ರವನ್ನು ಬೆಂಬಲಿಸಿ ಸೀಮಾಂಧ್ರದ  8 ಸಚಿವರು ಹಾಗೂ 50ಕ್ಕೂ ಹೆಚ್ಚು ಶಾಸಕರು ರಾಜಿನಾಮೆ ನೀಡಿದ್ದಾರೆ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಎಲ್ಲಾ ವರ್ಗಗಳ ಜನರನ್ನು ಪರಿಗಣನೆಗೆ ತೆಗೆದುಕೊಂಡು ಸಮಸ್ಯೆಗೆ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸಬೇಕಿದೆ ಎಂದು ತಿಳಿಸಿದ್ದಾರೆ.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಿಂದಾಗಿ 14 ಲೋಕಸಭಾ ಸದಸ್ಯತ್ವ ಹೊಂದಿರುವ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಕಾಂಗ್ರೆಸ್ ಜೊತೆ ಕೈ ಜೋಡಿಸಲಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ನೀಡಿರುವ ವರದಿ ಆಧರಿಸಿ ಕಾಂಗ್ರೆಸ್ ಆ ತೀರ್ಮಾನಕೈಗೊಂಡಿದೆ. ಕಾಂಗ್ರೆಸ್ ಈ ಕ್ರಮ ಸರಿಯಲ್ಲ. ಇದರಿಂದಾಗಿ ತೆಲುಗು ಭಾಷಿಗರನ್ನು ಬೇರೆ ಮಾಡಿದ್ದಂತಾಗುತ್ತದೆ. ಅಲ್ಲದೆ ನಮ್ಮ ಜೀವಗಳ ಜೊತೆ ಕಾಂಗ್ರೆಸ್ ಆಟ ವಾಡುತ್ತಿದೆ ಎಂದು ನಾಯ್ಡು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.