ಈಗಿನ ಸುದ್ದಿ

ಪಾಕಿಸ್ತಾನ ವಿರುದ್ಧ ಸಿಎಂ ಒಮ್ಮರ್ ಮಾತಾಡಲಿ: ಬಿಜೆಪಿ

Published On :

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮ್ಮರ್ ಅಬ್ದುಲ್ಲಾ ಅವರು ಪಾಕಿಸ್ಥಾನ ವಿರುದ್ಧ ಮಾತನಾಡಬೇಕೆ ವಿನಃ ತಮ್ಮ ಸ್ವಂತ ದೇಶದ ವಿರುದ್ಧ ಅಲ್ಲ ಎಂದು ಬಿಜೆಪಿ ನಾಯಕ ಎಸ್. ಹುಸೇನ್ ಬುಧವಾರ ಹೇಳಿದ್ದಾರೆ.

ಕಿಶ್ತ್‌ವಾರ್ ಹಿಂಸಾಚಾರ ಪ್ರಕರಣ ಬಿಜೆಪಿ ಹಾಗೂ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ನಿನ್ನೆಯಷ್ಟೆ ಒಮ್ಮರ್ ಅಬ್ದುಲ್ಲಾ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು,  ಬಿಜೆಪಿ ಗೋಮುಖವ್ಯಾಘ್ರದ ತರ ಕಾರ್ಯನಿರ್ವಹಿಸುತ್ತದೆ. ಪರಿಸ್ಥಿತಿಯನ್ನು ಅವಲೋಕಿಸದೆ ವ್ಯಾಘ್ರದ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಹೇಳಿದ್ದರು.

ಒಮ್ಮರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹುಸೇನ್ ಅವರು ಮುಖ್ಯಮಂತ್ರಿ ಒಮ್ಮರ್ ಅಬ್ದುಲ್ಲಾ ಅವರು ಭಾರತದ ಪ್ರಜೆಯಾಗಿದ್ದು, ತನ್ನ ಸ್ವಂತ ದೇಶದ ವಿರುದ್ಧ ಹೇಳಿಕೆ ನೀಡುವುದನ್ನು ಬಿಟ್ಟು ಪಾಕಿಸ್ತಾನ ವಿರುದ್ಧ ಮಾತನಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಒಮ್ಮರ್ ಅಬ್ದುಲ್ಲಾ ಅವರು, ಪಾಕಿಸ್ತಾನ ಪರ ಮಾತನಾಡುತ್ತಿರುವುದು ಸರಿಯಲ್ಲ. ಅದು ಈ ದೇಶದ ಪ್ರಜೆಯಾಗಿರುವ ಅವರಿಗೆ  ಶೋಭೆ ತರುವಂತದಲ್ಲ. ಅವರು ಏನ್ನಿದ್ದರು ಪಾಕಿಸ್ತಾನ ವಿರುದ್ಧ ಮಾತನಾಡಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.