ದೇಶ

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಬೆಂಬಲ: ಸ್ಟಾಲಿನ್ ಮನವೊಲಿಕೆಗೆ ಚೆನ್ನೈಗೆ ಬಂದಿಳಿದ ಖರ್ಗೆ, ಸೋನಿಯಾ- ರಾಹುಲ್ ಗಾಂಧಿ!

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಬೆಂಬಲ: ಸ್ಟಾಲಿನ್ ಮನವೊಲಿಕೆಗೆ ಚೆನ್ನೈಗೆ ಬಂದಿಳಿದ ಖರ್ಗೆ, ಸೋನಿಯಾ- ರಾಹುಲ್ ಗಾಂಧಿ!
ಡಿಕೆ ಶಿವಕುಮಾರ್, ಸೋನಿಯಾ, ಖರ್ಗೆ ಮತ್ತಿತರರು
Published On :

ನವದೆಹಲಿ: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆ (delimitation) ಮಸೂದೆಗೆ ಡಿಎಂಕೆ (DMK) ನೀಡುತ್ತಿರುವ ಬೆಂಬಲವನ್ನು ಮರುಪರಿಶೀಲಿಸುವಂತೆ ಮನವೊಲಿಸಲು, ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ನಿಯೋಗವೊಂದು ಭಾನುವಾರ ಚೆನ್ನೈಗೆ ಆಗಮಿಸಿದೆ.

ಈ ನಿಯೋಗದಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇದ್ದಾರೆ. ಅವರು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಲಿದ್ದಾರೆ.

ಈ ಉನ್ನತ ನಾಯಕರೊಂದಿಗೆ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ, ಕೇರಳ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ವಿ.ಡಿ. ಸತೀಶನ್ ಮತ್ತು ಎ. ರೇವಂತ ರೆಡ್ಡಿ ಕೂಡ ಆಗಮಿಸಿದ್ದಾರೆ.

ವಿಶೇಷ ವಿಮಾನದಲ್ಲಿ ಚೆನ್ನೈಗೆ ಬಂದಿಳಿದ ಕೂಡಲೇ, ಈ ನಿಯೋಗವು ವಿಮಾನ ನಿಲ್ದಾಣದ ಎದುರಿರುವ ಒಂದು ಐಷಾರಾಮಿ ಹೋಟೆಲ್‌ಗೆ ತೆರಳಿದೆ. ಇಂದು ಸಂಜೆ ಸ್ಟಾಲಿನ್ ಅವರನ್ನು ನಿಯೋಗ ಭೇಟಿಯಾಗಲಿದೆ ಎಂದು ವರದಿಯಾಗಿದೆ.

ತಮಿಳುನಾಡಿನಲ್ಲಿ ಏಪ್ರಿಲ್ 2026ರ ಚುನಾವಣೆಗಳ ನಂತರ, ಕಾಂಗ್ರೆಸ್ ಪಕ್ಷವು ಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಹೊರಬಂದಿತು. ಬದಲಾಗಿ, ನಟ ಸಿ. ಜೋಸೆಫ್ ವಿಜಯ್ (ದಳಪತಿ ವಿಜಯ್) ಸ್ಥಾಪಿಸಿದ 'ಟಿವಿಕೆ' (TVK) ಪಕ್ಷಕ್ಕೆ ಬೆಂಬಲ ನೀಡಲು ಮತ್ತು ಆ ಪಕ್ಷದ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿತು. ಅಂದಿನಿಂದಲೂ ಈ ಎರಡೂ ಪಕ್ಷಗಳು ಪರಸ್ಪರ ಟೀಕಿಸಿಕೊಳ್ಳುತ್ತಿವೆ. ಕ್ಷೇತ್ರ ಮರುವಿಂಗಡಣೆ ವಿಷಯದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆಎಂದು ಡಿಎಂಕೆ ಆರೋಪಿಸಿದೆ.

ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಸೋಲಿಸುವ ಪ್ರಯತ್ನದ ಭಾಗವಾಗಿಈ ನಿಯೋಗವು ಚೆನ್ನೈ ಮತ್ತು ಮುಂಬೈಗೆ ಭೇಟಿ ನೀಡುತ್ತಿದೆ. ಈ ನಿಯೋಗದಲ್ಲಿ 'ಇಂಡಿಯಾ' (INDIA) ಮೈತ್ರಿಕೂಟದ ಇತರ ನಾಯಕರು ಕೂಡ ಇದ್ದು, ಅವರು ಸ್ಟಾಲಿನ್ ಹಾಗೂ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದಾರೆ.

ಲೋಕಸಭೆಯಲ್ಲಿ 22 ಮತ್ತು ರಾಜ್ಯಸಭೆಯಲ್ಲಿ ಎಂಟು ಸಂಸದರನ್ನು ಹೊಂದಿರುವ ಡಿಎಂಕೆ ಪಕ್ಷವು, ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮಂಡಿಸುತ್ತಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡುವುದಾಗಿ ಘೋಷಿಸಿದ ಮರುದಿನವೇ ಈ ಉನ್ನತ ನಾಯಕರ ಭೇಟಿ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.