ಐಎನ್ಎಸ್ ಸಿಂಧುರಕ್ಷಕ ದುರಂತ: 7ನೇ ದೇಹ ಪತ್ತೆ
ಮುಂಬೈ: ಅಗ್ನಿ ದುರಂತದಿಂದಾಗಿ ಸ್ಫೋಟಗೊಂಡಿದ್ದ ಜಲಾಂತರ್ಗಾಮಿ ಐಎನ್ಎಸ್ ಸಿಂಧುರಕ್ಷಕ್ನಲ್ಲಿದ್ದ ಸಿಬ್ಬಂದಿಗಳ ಶೋಧಾ ಕಾರ್ಯದ ವೇಳೆ 7 ಮೃತದೇಹ ಸೋಮವಾರ ಪತ್ತೆಯಾಗಿದೆ.
ಕಳೆದ ವಾರ ದುರಂತ ಸಂಭವಿಸಿ ಎರಡು ದಿನಗಳ ಬಳಿಕ ನೌಕಾಪಡೆಯ ಈಜುಗಾರರು 4 ಮೃತದೇಹಗಳನ್ನು ಹೊರತೆಗೆದಿದ್ದರು. ನಂತರ ಶೋಧಾಕಾರ್ಯದಲ್ಲಿ ಮತ್ತೆರಡು ಮೃತದೇಹಗಳ ಪತ್ತೆಯಾಗಿತ್ತು. ಇಂದು ಏಳನೆ ಮೃತದೇಹ ಪತ್ತೆಯಾಗಿದೆ.
ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ನಾಲ್ಕು ವಾರದೊಳಗೆ ವರದಿ ನೀಡಬೇಕು ಎಂದು ನೌಕಾ ಅಧಿಕಾರಿಗಳು ಆದೇಶಿಸಿದ್ದಾರೆ.
3 ಅಧಿಕಾರಿಗಳು ಸೇರಿದಂತೆ 18 ನೌಕಾ ಸಿಬ್ಬಂದಿಗಳು ಘಟನೆ ವೇಳೆ ಸಿಂಧುರಕ್ಷಕ್ನಲ್ಲೇ ಇದ್ದರು. ಕಳೆದ ವಾರದಿಂದ ನಡೆಸಿದ ಶೋಧಾಕಾರ್ಯದಲ್ಲಿ ಒಟ್ಟು ಏಳು ಮೃತದೇಹಗಳು ಪತ್ತೆಯಾಗಿದೆ. ಇನ್ನುಳಿದ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
16ವರ್ಷ ಹಳೆಯ ರಷ್ಟಾನಿರ್ಮಿತ ಸಿಂಧೂರಕ್ಷಕ್ನಲ್ಲಿ ಅಳವಡಿಸಲಾದ ಟಾರ್ಪೊಡೋಸ್ ಮತ್ತು ಕ್ಲಬ್ ಕ್ಷಿಪಣಿಗಳಲ್ಲಿ ಕಳೆದ ಮಂಗಳವಾರ ಮಧ್ಯರಾತ್ರಿಯಲ್ಲಿ ಅವಳಿ ಸ್ಫೋಟ ಉಂಟಾಗಿ ಜಲಾಂತರ್ಗಾಮಿಯಿಂದ ಹೊರ ಚಿಮ್ಮಿತ್ತು ಎಂದು ನೌಕಾ ಸೇನೆಯ ಮೂಲಗಳು ತಿಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

