ಈಗಿನ ಸುದ್ದಿ

ತುಂಡಾಗೆ ಮಾಜಿ ಐಎಸ್‌ಐ ಮುಖ್ಯಸ್ಥನ ಸಂಪರ್ಕವಿತ್ತು: ಮೂಲಗಳು

Published On :

ನವದೆಹಲಿ: ಲಷ್ಕರ್-ಇ-ತೋಯ್ಬಾದ ಪ್ರಮುಖ ರುವಾರಿ ಸೈಯದ್ ಅಬ್ದುಲ್ ಕರೀಮ್ ಅಲಿಯಾಸ್ ತುಂಡಾಗೆ ಐಎಸ್‌ಐ ಮಾಜಿ ಅಧ್ಯಕ್ಷ ಹಮೀದ್ ಗುಲ್ ಸಂಪರ್ಕವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತುಂಡಾ ಅವರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಈ ಮಾಹಿತಿ ಹೊರಬಿದ್ದಿದೆ. 1995ರಲ್ಲಿ ಹಮೀದ್ ಗುಲ್ ಅವರು ತುಂಡಾ ಭೇಟಿ ಮಾಡಿದ್ದನು ಎಂದು ತಿಳಿಸಲಾಗಿದೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ ತುಂಡಾ, ಎಲ್‌ಇಟಿ ಸಂಘಟನೆಯಲ್ಲಿ ಬಾಂಬ್‌ಗಳನ್ನು ಸಿದ್ಧಪಡಿಸುವುದರಲ್ಲಿ ಪರಿಣಿತನಾಗಿದ್ದ. ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ತುಂಡಾ, ಪೊಲೀಸರಿಂದ ತಪ್ಪಿಸಿಕೊಳ್ಳಲು ಆಗ್ಗಿಂದಾಗ್ಗೆ ದೇಶದಿಂದ ದೇಶಕ್ಕೆ ಪಲಾಯನ ಮಾಡುತ್ತಿದ್ದನು. ತುಂಡಾ ಹೀಗೆ ಸುಮಾರು 19 ದೇಶಗಳಿಗೆ ಪಲಾಯನ ಮಾಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 ಅಲ್ಲದೆ 2001ರ ಸಂಸತ್ ಮೇಲಿನ ದಾಳಿ, 1996-98ರಲ್ಲಿ ಇಂಡೋ ನೇಪಾಳ ಗಡಿಯಲ್ಲಿ ನಡೆದ ಸರಣಿ ಸ್ಫೋಟ, 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ರೂವಾರಿ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಮಹಮದ್ ಸೈಯ್ಯದ್‌ನೊಂದಿಗೂ ಈತನಿಗೆ ನಂಟಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.